ಆ್ಯಪ್ನಗರ

Pixel 3a: ದೇಶದಲ್ಲಿ ಬೆಲೆ, ಆಫರ್‌ ವಿವರ

ಫ್ಲಿಪ್‌ಕಾರ್ಟ್‌ ಬಿಗ್ ಶಾಪಿಂಗ್ ಡೇಸ್‌ ಜತೆಗೆ ಪಿಕ್ಸೆಲ್ 3a ಕೂಡ ಮಾರುಕಟ್ಟೆ ಪ್ರವೇಶಿಸಿದ್ದು, 39,999 ರೂ. ಬೆಲೆ ಹೊಂದಿದೆ. ಪಿಕ್ಸೆಲ್ 3a ಎಕ್ಸ್ಎಲ್ 44,999 ರೂ. ಬೆಲೆ ಹೊಂದಿದೆ.

Agencies 15 May 2019, 10:09 am
ಗೂಗಲ್ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಹೊಸದಾಗಿ ಬಿಡುಗಡೆ ಮಾಡಿರುವ ಪಿಕ್ಸೆಲ್ 3a ಮತ್ತು Pixel 3a ಎಕ್ಸ್ಎಲ್ ಮಂಗಳವಾರ ಮಧ್ಯರಾತ್ರಿಯಿಂದ ದೇಶದಲ್ಲಿ ಲಭ್ಯವಾಗುತ್ತಿದೆ.
Vijaya Karnataka Web pixel


ಫ್ಲಿಪ್‌ಕಾರ್ಟ್‌ ಬಿಗ್ ಶಾಪಿಂಗ್ ಡೇಸ್‌ ಜತೆಗೆ ಪಿಕ್ಸೆಲ್ 3a ಕೂಡ ಮಾರುಕಟ್ಟೆ ಪ್ರವೇಶಿಸಿದ್ದು, 39,999 ರೂ. ಬೆಲೆ ಹೊಂದಿದೆ. ಪಿಕ್ಸೆಲ್ 3a ಎಕ್ಸ್ಎಲ್ 44,999 ರೂ. ಬೆಲೆ ಹೊಂದಿದೆ.

ಪಿಕ್ಸೆಲ್ 3a ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 670 SoC ಪ್ರೊಸೆಸರ್, Android 9 Pie ಮತ್ತು 4GB RAM ಹಾಗು 64GB ಸ್ಟೋರೇಜ್ ಹೊಂದಿದೆ. ಜತೆಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕೂಡ ಇದರ ವೈಶಿಷ್ಟ್ಯ.

ಆರಂಭಿಕ ಕೊಡುಗೆ:
ಎಚ್‌ಡಿಎಫ್‌ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಪಿಕ್ಸೆಲ್ 3a ಸ್ಮಾರ್ಟ್‌ಫೋನ್ ಖರೀದಿಸಿದರೆ, ಶೇ. 10 ಡಿಸ್ಕೌಂಟ್ ಲಭ್ಯ. (4,000 ರೂ. ವರೆಗೆ) ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯತ್ವ ಹೊಂದಿದ್ದರೆ, 20 ಫ್ಲಿಪ್‌ಕಾರ್ಟ್‌ ಕಾಯಿನ್ ಬಳಸಿ, ಹೆಚ್ಚುವರಿ 1,000 ರೂ. ಡಿಸ್ಕೌಂಟ್ ಪಡೆಯಬಹುದು. ಇದರಿಂದ ಪಿಕ್ಸೆಲ್ 3a, 34,999 ರೂ.ಗೆ ದೊರೆಯುತ್ತದೆ.

ಜತೆಗೆ 3,000 ರೂ. ವರೆಗೆ ಎಕ್ಸ್‌ಚೇಂಜ್ ಕೊಡುಗೆ, ನೋ ಕಾಸ್ಟ್‌ ಇಎಂಐ ಆಫರ್ ಕೂಡ ಲಭ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌