ಆ್ಯಪ್ನಗರ

Flipkart Electronics Sale: ಮೊಬೈಲ್ ಖರೀದಿಗೆ ಬೆಸ್ಟ್ ಆಫರ್

ಮೋಟೋರೋಲಾ ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ವಿವಿಧ ಫೋನ್ ಮಾದರಿಗಳನ್ನು ಖರೀದಿಸಿದರೆ, ಗ್ರಾಹಕರು ವಿಶೇಷ ಕೊಡುಗೆ ಪಡೆಯಬಹುದು.

Times Now 26 Dec 2020, 1:43 pm
ದೇಶದ ಪ್ರಮುಖ ಮತ್ತು ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್ ಕಾರ್ಟ್, ವಿಶೇಷ ಎಲೆಕ್ಟ್ರಾನಿಕ್ಸ್ ಸೇಲ್ ಹಮ್ಮಿಕೊಂಡಿದ್ದು, ಮೊಬೈಲ್ ಖರೀದಿಗೆ ಆಕರ್ಷಕ ಡಿಸ್ಕೌಂಟ್ ಆಫರ್ ಒದಗಿಸಿದೆ. ವಿವಿಧ ಬ್ರ್ಯಾಂಡ್ ಮೊಬೈಲ್ ಖರೀದಿಗೆ ಹೆಚ್ಚುವರಿ ಕೊಡುಗೆ, ಕ್ಯಾಶ್ ಬ್ಯಾಕ್, ನೋ ಕಾಸ್ಟ್ ಇಎಂಐ ಮತ್ತು ಇನ್ ಸ್ಟಂಟ್ ಡಿಸ್ಕೌಂಟ್ ಕೊಡುಗೆಯನ್ನು ನೀಡಲಾಗುತ್ತಿದೆ. ಡಿ. 26ರಿಂದ ಆರಂಭವಾಗಿರುವ ಎಲೆಕ್ಟ್ರಾನಿಕ್ಸ್ ಸೇಲ್, ಡಿ. 28 ಸೋಮವಾರದವರೆಗೆ ನಡೆಯಲಿದೆ.
Vijaya Karnataka Web Flipkart
Flipkart Sale


ವಿಶೇಷ ಡಿಸ್ಕೌಂಟ್ ಆಫರ್
ಫ್ಲಿಪ್ ಕಾರ್ಟ್ ಸೇಲ್, ಬಳಕೆದಾರರಿಗೆ ಸ್ಮಾರ್ಟ್ ಫೋನ್ ಖರೀದಿಗೆ ಹೆಚ್ಚುವರಿ ಡಿಸ್ಕೌಂಟ್ ಜತೆಗೇ, ಬ್ಯಾಂಕ್ ಆಫರ್ ಕೂಡ ಒದಗಿಸುತ್ತಿದೆ. Hdfc ಮತ್ತು icici ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ಮತ್ತು emi ಮೂಲಕ ಖರೀದಿಸಿದರೆ, ಶೇ. 10 ಇನ್ ಸ್ಟಂಟ್ ಡಿಸ್ಕೌಂಟ್ ದೊರೆಯಲಿದೆ. ಅಲ್ಲದೆ, ಮೋಟೋರೋಲಾ ಫೋನ್ ಖರೀದಿಗೆ ಹೆಚ್ಚುವರಿ ಆಫರ್ ಕೂಡ ಲಭ್ಯವಾಗುತ್ತದೆ.

ಮೋಟೋರೊಲಾ ಕೊಡುಗೆ
ಮೋಟೋರೋಲಾ ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ವಿವಿಧ ಫೋನ್ ಮಾದರಿಗಳನ್ನು ಖರೀದಿಸಿದರೆ, ಗ್ರಾಹಕರು ವಿಶೇಷ ಕೊಡುಗೆ ಪಡೆಯಬಹುದು.

WhatsApp Update: ಹಳೆಯ ಐಫೋನ್‌ಗೂ ಬೆಂಬಲ ಮುಂದುವರಿಕೆ

ಮೋಟೋರೊಲಾ ಯಾವ ಫೋನ್ ಆಫರ್?
Moto g 5G , Motorola Razr 5G , Moto E7 plus, Moto G9, Motorola One Fusion+, Motorola Edge+ ಮತ್ತು Motorola Razr ಫೋನ್ ಖರೀದಿಗೆ ಫ್ಲಿಪ್ ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್ ಆಫರ್ ದೊರೆಯಲಿದೆ. ಜತೆಗೆ HDFC ಮತ್ತು ICICI ಕಾರ್ಡ್ ಬಳಸುವ ಮೂಲಕ ಮತ್ತಷ್ಟುಉಳಿತಾಯ ಕೂಡ ಮಾಡಬಹುದು. ಈಗಾಗಲೇ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ, ದೀಪಾವಳಿ, ದಸರಾ ಮತ್ತು ವಾರ್ಷಿಕ ಮಾರಾಟದ ಸಂದರ್ಭದಲ್ಲಿ ಬಳಕೆದಾರರಿಗೆ ಹೆಚ್ಚುವರಿ ಉಳಿತಾಯ ಆಫರ್ ಕೊಡುಗೆ ದೊರೆತಿತ್ತು.

Thomson Smart TV: ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್‌ ಮಾರಾಟದಲ್ಲಿ ಡಿಸ್ಕೌಂಟ್ ಕೊಡುಗೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌