ಆ್ಯಪ್ನಗರ

Honor Band 5: ಫ್ಲಿಪ್‌ಕಾರ್ಟ್ ಮೂಲಕ ಮಾರುಕಟ್ಟೆಗೆ

ಸ್ಮಾರ್ಟ್‌ವಾಚ್ ಮತ್ತು ಫಿಟ್ನೆಸ್ ಟ್ರ್ಯಾಕರ್‌ ಕುರಿತು ಜನರಿಗೆ ಹೆಚ್ಚಿನ ಕ್ರೇಜ್ ಇದ್ದು, ಹೊಸ ಮಾದರಿಗಳು ಮತ್ತು ಅವುಗಳ ಫೀಚರ್ ಬಗ್ಗೆ ಜನರು ಹೆಚ್ಚು ಗಮನ ನೀಡುತ್ತಿದ್ದಾರೆ.

Times Now 7 Aug 2019, 5:17 pm
ಹುವೈ ಒಡೆತನದ ಹೊನೊರ್ ಬ್ರ್ಯಾಂಡ್ ದೇಶದಲ್ಲಿ ಆಕರ್ಷಕ ಹೊಸ ಹೊನೊರ್ ಬ್ಯಾಂಡ್ 5 ಬಿಡುಗಡೆಗೆ ಸಿದ್ಧತೆ ನಡೆಸಿದೆ.

ಫ್ಲಿಪ್‌ಕಾರ್ಟ್ ಮೂಲಕ ಹೊನೊರ್ ಬ್ಯಾಂಡ್ 5 ಲಭ್ಯವಿದ್ದು, ದೇಶದಲ್ಲಿ ಅಂದಾಜು 1,900 ರೂ. ದರವಿರಲಿದೆ.

ಹೊಸ ಹೊನೊರ್ ಬ್ಯಾಂಡ್ 5, ಸ್ವಿಮ್ ಸ್ಟ್ರೋಕ್ ರೆಕಗ್ನಿಷನ್, ಇಂಡೋರ್ ಮತ್ತು ಓಟ್‌ಡೋರ್ ಫಿಟ್ನೆಸ್ ಮೋಡ್, ಅಮೊಲಿಡ್ ಡಿಸ್‌ಪ್ಲೇ ಪ್ಯಾನಲ್ ಮತ್ತು ಆರು ಆಕ್ಸಿಸ್ ಸೆನ್ಸರ್‌ ಹೊಂದಿದೆ.

ಕಳೆದ ತಿಂಗಳು ಹೊನೊರ್ 9X ಮತ್ತು 9X Pro ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, ಅದರ ಜತೆಗೆ ಹೊನೊರ್ ಬ್ಯಾಂಡ್ 5 ಕೂಡ ಮಾರುಕಟ್ಟೆಗೆ ಪರಿಚಯಿಸಲ್ಪಟ್ಟಿದೆ.

ಹೊನೊರ್ ಬ್ಯಾಂಡ್ 5, 0.95 ಇಂಚಿನ ಅಮೋಲಿಡ್ ಡಿಸ್‌ಪ್ಲೇ ಹೊಂದಿದ್ದು, ವಾಟರ್‌ಪ್ರೂಫ್ ಆಗಿರಲಿದೆ. ಜತೆಗೆ 14 ದಿನಗಳ ಬ್ಯಾಟರಿ ಬಾಳಿಕೆಯೊಂದಿಗೆ ಹೊನೊರ್ ಬ್ಯಾಂಡ್ 5 ಲಭ್ಯವಾಗಲಿದ್ದು, ಕಪ್ಪು, ಮಿಡ್‌ನೈಟ್ ಬ್ಲೂ ಮತ್ತು ಕೊರಲ್ ಪೌಡರ್ ಬಣ್ಣದಲ್ಲಿ ದೊರೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌