ಆ್ಯಪ್ನಗರ

ಫ್ಲಿಪ್‌ಕಾರ್ಟ್ 'ಇಯರ್ ಎಂಡ್ ಸೇಲ್': ಖರೀದಿಗೆ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು!

ಈ ಮಾರಾಟದ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು, TWS ಇಯರ್‌ಬಡ್‌ಗಳು ಮತ್ತು ಹೆಚ್ಚಿನ ಗ್ಯಾಜೆಟ್ ಉತ್ಪನ್ನಗಳ ಮೇಲೆ ಭಾರೀ ಕೊಡುಗೆಗಳನ್ನು ಒದಗಿಸಲಾಗಿದೆ. ಇಷ್ಟೇ ಅಲ್ಲದೇ, ಈ ಮಾರಾಟದ ವೇಳೆ ಬಹುತೇಕ ಗ್ಯಾಜೆಟ್ ಉತ್ಪನ್ನಗಳ ಮೇಲೆ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಗ್ರಾಹಕರು 10 ಪ್ರತಿಶತದಷ್ಟು ತ್ವರಿತ ರಿಯಾಯಿತಿ ಸಹ ಪಡೆಯಬಹುದು.

Authored byಭಾಸ್ಕರ್ ಶೆಟ್ಟಿ | Vijaya Karnataka Web 28 Dec 2022, 3:15 pm
ಭಾರತದ ಜನಪ್ರಿಯ ಇ-ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ 2022ರ ವರ್ಷಾಂತ್ಯದ ಬಾಗವಾಗಿ ಆರಂಭಿಸಿರುವ 'ಇಯರ್ ಎಂಡ್ ಸೇಲ್' ಬಗ್ಗೆ ನಿಮಗೆಲ್ಲಾ ತಿಳಿದಿರಬಹುದು. ಕಳೆದ ಡಿಸೆಂಬರ್ 24 ರಿಂದ ಆರಂಭವಾಗಿರುವ ಈ ಫ್ಲಿಪ್‌ಕಾರ್ಟ್ 'ಇಯರ್ ಎಂಡ್ ಸೇಲ್' ವಾರ್ಷಾಂತ್ಯದ ಡಿಸೆಂಬರ್ 31 ರವರೆಗೆ ಇರಲಿದ್ದು, ಈ ಮಾರಾಟದ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು, TWS ಇಯರ್‌ಬಡ್‌ಗಳು ಮತ್ತು ಹೆಚ್ಚಿನ ಗ್ಯಾಜೆಟ್ ಉತ್ಪನ್ನಗಳ ಮೇಲೆ ಭಾರೀ ಕೊಡುಗೆಗಳನ್ನು ಒದಗಿಸಲಾಗಿದೆ. ಇಷ್ಟೇ ಅಲ್ಲದೇ, ಈ ಮಾರಾಟದ ವೇಳೆ ಬಹುತೇಕ ಗ್ಯಾಜೆಟ್ ಉತ್ಪನ್ನಗಳ ಮೇಲೆ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಗ್ರಾಹಕರು 10 ಪ್ರತಿಶತದಷ್ಟು ತ್ವರಿತ ರಿಯಾಯಿತಿ ಸಹ ಪಡೆಯಬಹುದು. ಹಾಗಾಗಿ, ಇಂದಿನ ಲೇಖನದಲ್ಲಿ ಫ್ಲಿಪ್‌ಕಾರ್ಟ್ 'ಇಯರ್ ಎಂಡ್ ಸೇಲ್'ನಲ್ಲಿ ಕೊಡುಗೆಗಳೊಂದಿಗೆ ಖರೀದಿಗೆ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ.
Vijaya Karnataka Web ಫ್ಲಿಪ್‌ಕಾರ್ಟ್ ಇಯರ್ ಎಂಡ್ ಸೇಲ್: ಖರೀದಿಗೆ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು!


Apple iPhone 13
ಫ್ಲಿಪ್‌ಕಾರ್ಟ್ ಇಯರ್ ಎಂಡ್ ಸೇಲ್'ನಲ್ಲಿ iPhone 13 ಸ್ಮಾರ್ಟ್‌ಫೋನ್ ಮೇಲೆ 7,900 ರೂ. ರಿಯಾಯಿತಿ ದೊರೆಯುತ್ತಿದ್ದು, ಇದೀಗ 61,900 ರೂ.ಗಳ ಆರಂಭಿಕ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ ಗ್ರಾಹಕರು iPhone 13 ಸ್ಮಾರ್ಟ್‌ಫೋನ್‌ಗಳ ಖರೀದಿಯ ಮೇಲೆ ಶೇ. 5 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ ಸಹ ಪಡೆಯಲಿದ್ದಾರೆ.

Google Pixel 6A
ಭಾರತದಲ್ಲಿ ಇದೇ ವರ್ಷ 43,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದ್ದ ಜನಪ್ರಿಯ Google Pixel 6A ಸ್ಮಾರ್ಟ್‌ಫೋನ್ ಇದೀಗ ಫ್ಲಿಪ್‌ಕಾರ್ಟ್ ಇಯರ್ ಎಂಡ್ ಸೇಲ್‌ನಲ್ಲಿ ಕೇವಲ 29,999 ರೂ.ಗೆ ಮಾರಾಟವಾಗುತ್ತಿದೆ. ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಗ್ರಾಹಕರು EMI ವಹಿವಾಟುಗಳ ಶೇ 10% ರಷ್ಟು ರಿಯಾಯಿತಿಯನ್ನು ಪಡೆಯಲಿದ್ದಾರೆ.

Nothing Phone (1)
ಈ ವರ್ಷ ಅತಿಹೆಚ್ಚು ಸದ್ದು ಮಾಡಿದ Nothing Phone (1) ಸ್ಮಾರ್ಟ್‌ಫೋನನ್ನು ದೇಶದಲ್ಲಿ 32,999 ರೂ,ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ, ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ 27,999 ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್‌ ಗ್ರಾಹಕರಿಗೆ ಹೆಚ್ಚುವರಿ 2,000 ರಿಯಾಯಿತಿ ದೊರೆಯುತ್ತಿದೆ.

Apple iPhone 11
ನೀವು ಸ್ವಲ್ಪ ಹಳೆ ಮಾದರಿಯ ಐಫೋನ್ ಖರೀದಿಸಲು ಇಚ್ಚಿಸಿದ್ದರೆ, ಇದೀಗ Apple iPhone 11 ಸರಣಿ ಸ್ಮಾರ್ಟ್‌ಫೋನ್‌ಗಳು ನಿಮ್ಮ ಆಯ್ಕೆಯಾಗಬಹುದು. ಫ್ಲಿಪ್‌ಕಾರ್ಟ್ ಇಯರ್ ಎಂಡ್ ಸೇಲ್‌ನಲ್ಲಿ ಇದೀಗ Apple iPhone 11 ಸ್ಮಾರ್ಟ್‌ಫೋನ್ 43,900 ರೂ. ಆರಂಭಿಕ ಬೆಲೆಯೊಂದಿಗೆ ಲಭ್ಯವಿದ್ದು, ಗ್ರಾಹಕರು ಕೊಡುಗೆಯೊಂದಿಗೆ 38,999 ರೂ.ಗಳಲ್ಲಿ ಖರೀದಿಸಬಹುದು.

Infinix Note 12
ನೀವು ಬಜೆಟ್ ಸ್ಮಾರ್ಟ್‌ಫೋನ್ ಒಂದನ್ನು ಹುಡುಕುತ್ತಿದ್ದರೆ ಫ್ಲಿಪ್‌ಕಾರ್ಟ್ ಇಯರ್ ಎಂಡ್ ಸೇಲ್‌ನಲ್ಲಿ ಈ ಮೊದಲು 15,999 ಬೆಲೆ ಹೊಂದಿದ್ದ Infinix Note 12 ಸ್ಮಾರ್ಟ್‌ಫೋನ್ ಇದೀಗ ಕೇವಲ 9,999 ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ EMI ವಹಿವಾಟುಗಳ ಮೇಲೆ ಶೇ. 10% ರಿಯಾಯಿತಿ ಸಹ ದೊರೆಯಲಿದೆ.

Moto Edge 30
ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುವ ಜನಪ್ರಿಯ ಸ್ಮಾರ್ಟ್‌ಫೋನ್ Moto Edge 30 ಇದೀಗ ಫ್ಲಿಪ್‌ಕಾರ್ಟ್ ಇಯರ್ ಎಂಡ್ ಸೇಲ್‌ನಲ್ಲಿ 22,999 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಹೆಚ್ಚುವರಿಯಾಗಿ, ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್‌ ಗ್ರಾಹಕರು ಫೋನ್ ಮೇಲೆ 2,000 ರೂ. ವರೆಗೆ ಬ್ಯಾಂಕ್ ರಿಯಾಯಿತಿಯನ್ನು ಸಹ ಪಡೆಯಬಹುದು.
ಲೇಖಕರ ಬಗ್ಗೆ
ಭಾಸ್ಕರ್ ಶೆಟ್ಟಿ
ವಿಜಯ ಕರ್ನಾಟಕದಲ್ಲಿ ಡಿಜಿಟಲ್ ಪತ್ರಕರ್ತನಾಗಿ 2022 ಮಾರ್ಚ್‌ನಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದಕ್ಕೂ ಮುನ್ನ ಡಿಜಿಟಲ್ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ 5 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಪ್ರಮುಖವಾಗಿ ತಂತ್ರಜ್ಞಾನ ಹಾಗೂ ಕ್ರೀಡೆಯ ಕುರಿತಾಗಿ ಲೇಖನ ಬರೆಯುವುದು ಆಸಕ್ತಿಯ ವಿಷಯಗಳು. ದೂರದ ಪ್ರಯಾಣ, ಪ್ರವಾಸ ಕೈಗೊಳ್ಳುವುದು ನನ್ನ ಮೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌