ಆ್ಯಪ್ನಗರ

Reliance Jio: ಜನರಲ್‌ ಅಟ್ಲಾಂಟಿಕ್‌ನಿಂದ 6,598 ಕೋಟಿ ರೂ. ಹೂಡಿಕೆ

ತಂತ್ರಜ್ಞಾನ ಮತ್ತು ಗ್ರಾಹಕ ಸೇವೆಗಳಲ್ಲಿ ಜನರಲ್ ಅಟ್ಲಾಂಟಿಕ್ ಕಳೆದ ನಾಲ್ಕು ದಶಕಗಳಿಂದ ವಿವಿಧ ಹೂಡಿಕೆ ಮಾಡುತ್ತಾ ಬಂದಿದ್ದು, ಜಿಯೋ ಜತೆಗೂಡಿರುವುದು ದೇಶದಲ್ಲಿ ಮತ್ತಷ್ಟು ಉದ್ಯಮ ವಿಸ್ತರಣೆಗೆ ರಿಲಯನ್ಸ್‌ಗೆ ನೆರವಾಗಲಿದೆ.

THE ECONOMIC TIMES 18 May 2020, 12:56 pm
ರಿಲಯನ್ಸ್‌ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಮತ್ತು ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ಜಾಗತಿಕ ಮಟ್ಟದ ಈಕ್ವಿಟಿ ಸಂಸ್ಥೆಯಾದ ಜನರಲ್‌ ಅಟ್ಲಾಂಟಿಕ್‌, 6,598.38 ಕೋಟಿ ರೂ. ಹೂಡಿಕೆ ಮಾಡಿದೆ.
Vijaya Karnataka Web Jio
Reliance Jio


ಈ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ ಈಕ್ವಿಟಿ ಮೌಲ್ಯವನ್ನು 4.91 ಲಕ್ಷ ಕೋಟಿ ರೂ.ಗಳಿಗೆ ಹಾಗೂ ಎಂಟರ್‌ಪ್ರೈಸ್‌ ಮೌಲ್ಯವನ್ನು 5.16 ಲಕ್ಷ ಕೋಟಿ ರೂ.ಗಳಿಗೆ ಕೊಂಡೊಯ್ಯಲಿದೆ. ಜನರಲ್‌ ಅಟ್ಲಾಂಟಿಕ್‌ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್‌ 1.34% ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದೆ.

ನಾಲ್ಕು ವಾರಗಳಿಗೂ ಕಡಿಮೆ ಅವಧಿಯಲ್ಲಿ ಫೇಸ್‌ಬುಕ್‌, ಸಿಲ್ವರ್‌ ಲೇಕ್‌, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್‌ ಹಾಗೂ ಜನರಲ್‌ ಅಟ್ಲಾಂಟಿಕ್‌ ಸೇರಿದಂತೆ ಪ್ರಮುಖ ತಂತ್ರಜ್ಞಾನ ಹೂಡಿಕೆದಾರರಿಂದ ಇತ್ತೀಚಿನ ದಿನಗಳಲ್ಲಿ ಜಿಯೋ ಪ್ಲಾಟ್‌ಫಾರ್ಮ್‌ 67,194 ಕೋಟಿ ರೂ. ಹೂಡಿಕೆ ಪಡೆದುಕೊಂಡಿದೆ.

ಹಣಕಾಸು ಸೇವೆ, ಆರೋಗ್ಯ ಸೇವೆ, ತಂತ್ರಜ್ಞಾನ ಮತ್ತು ಗ್ರಾಹಕ ಸೇವೆಗಳಲ್ಲಿ ಜನರಲ್ ಅಟ್ಲಾಂಟಿಕ್ ಕಳೆದ ನಾಲ್ಕು ದಶಕಗಳಿಂದ ವಿವಿಧ ಹೂಡಿಕೆ ಮಾಡುತ್ತಾ ಬಂದಿದ್ದು, ಜಿಯೋ ಜತೆಗೂಡಿರುವುದು ದೇಶದಲ್ಲಿ ಮತ್ತಷ್ಟು ಉದ್ಯಮ ವಿಸ್ತರಣೆಗೆ ರಿಲಯನ್ಸ್‌ಗೆ ನೆರವಾಗಲಿದೆ.

New Sim Card: ಮನೆಬಾಗಿಲಿನಲ್ಲೇ ಹೊಸ ಸಿಮ್ ಕಾರ್ಡ್ ಪಡೆಯುವುದು ಹೇಗೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌