ಆ್ಯಪ್ನಗರ

ಗೂಗಲ್‌ ಅಸಿಸ್ಟೆಂಟ್‌ ಇನ್ನು ದ್ವಿಭಾಷಿ

ಗೂಗಲ್‌ ಅಸಿಸ್ಟೆಂಟ್‌ ಇನ್ನು ಮುಂದೆ ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಭಾಷೆ ತಿಳಿದುಕೊಳ್ಳಲಿದೆ ಮತ್ತು ಮಾತನಾಡಲಿದೆ ಎಂದು ಕಂಪನಿ ಹೇಳಿದೆ.

Vijaya Karnataka 3 Sep 2018, 8:43 am
ಗೂಗಲ್‌ ಅಸಿಸ್ಟೆಂಟ್‌ ಇನ್ನು ಮುಂದೆ ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಭಾಷೆ ತಿಳಿದುಕೊಳ್ಳಲಿದೆ ಮತ್ತು ಮಾತನಾಡಲಿದೆ ಎಂದು ಕಂಪನಿ ಹೇಳಿದೆ. ಅಂದರೆ, ಗೂಗಲ್‌ ಕಂಪನಿಯು ಇನ್ನು ಮುಂದೆ ಗೂಗಲ್‌ ಅಸಿಸ್ಟೆಂಟ್‌ ಮಲ್ಟಿ ಲಿಂಗ್ವುಲ್‌ ಸಪೋರ್ಟ್‌ ನೀಡಲಿದೆ. ಸದ್ಯಕ್ಕೆ ಅಸಿಸ್ಟೆಂಟ್‌, ಇಂಗ್ಲಿಷ್‌ ಜತೆಗೆ ಜರ್ಮನ್‌, ಫ್ರೆಂಚ್‌, ಸ್ಪ್ಯಾನಿಷ್‌, ಇಟಾಲಿಯನ್‌ ಮತ್ತು ಜಪನೀಸ್‌ ಭಾಷೆಗಳನ್ನು ಅರ್ಥ ಮಾಡಿಕೊಳ್ಳಲಿದೆ.
Vijaya Karnataka Web google


ಆ್ಯಪಲ್‌ ಹಿಂದಿಕ್ಕಿದ ಹುವಾವೇ

2018ರ ತ್ರೈಮಾಸಿಕ ಅವಧಿಯಲ್ಲಿ ಆ್ಯಪಲ್‌ ಕಂಪನಿ ಹಿಂದಿಕ್ಕಿರುವ ಹುವಾವೇ ಸಂಸ್ಥೆಯ ನಂ.2 ಸ್ಥಾನಕ್ಕೇರಿದೆ. ಜಗತ್ತಿನಾದ್ಯಂತ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಅತಿ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು ಕಂಪನಿ ಮಾರಾಟ ಮಾಡಿದೆ. ಅಂದ ಹಾಗೆ, ಆ್ಯಪಲ್‌ ಕಂಪನಿ ಹಿಂದಿಕ್ಕಿದ ಚೀನಾದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಹುವಾವೇ ಪಾತ್ರವಾಗಿದೆ. ಒಟ್ಟಾರೆ, ಜಾಗತಿಕವಾಗಿ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಶೇ.2ರಷ್ಟು ಹೆಚ್ಚಳವಾಗಿದೆ. ಅಂದರೆ, ಒಟ್ಟು 37.4 ಕೋಟಿ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ. ಇದರ ಜತೆಗೇ, ಹುವಾವೇ ಕಂಪನಿಯ ಸ್ಮಾರ್ಟ್‌ಫೋನ್‌ಗಳ ಮಾರಾಟ ಶೇ.38.6ರಷ್ಟು ಏರಿಕೆ ಕಂಡಿದೆ. ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸತನವನ್ನು ಅಳವಡಿಸಿಕೊಂಡಿರುವುದು ಕಂಪನಿಯ ಯಶಸ್ವಿಗೆ ಕಾರಣ ಎಂದು ಕಂಪನಿಯ ಅನ್ಷುಲ್‌ ಗುಪ್ತಾ ಹೇಳಿದ್ದಾರೆ. ಅಂದಹಾಗೆ, ಜಾಗತಿಕವಾಗಿ ಸ್ಯಾಮ್ಸಂಗ್‌ ಕಂಪನಿ ತನ್ನ ಮೊದಲನೇ ಸ್ಥಾನವನ್ನು ಕಾಯ್ದುಕೊಂಡಿದೆ. ನಂತರ ಸ್ಥಾನಗಳು ಹುವಾವೇ ಮತ್ತು ಆ್ಯಪಲ್‌ ಕಂಪನಿಗಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌