ಆ್ಯಪ್ನಗರ

Google CEO Sundar Pichai ಹುದ್ದೆ ತ್ಯಾಗ ಮಾಡಿದರೇ?

ಗೂಗಲ್ ಸಿಇಒ ಹುದ್ದೆಯನ್ನು ಸುಂದರ್ ಪಿಚ್ಚೈ ತೊರೆಯುತ್ತಿದ್ದಾರೆಯೇ? ಈ ಉದ್ಯೋಗ ಖಾಲಿ ಇದೆ ಎಂಬ ಕಾರಣಕ್ಕೆ ಸಾಕಷ್ಟು ಮಂದಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ನೀವೂ ಟ್ರೈ ಮಾಡಿದಿರೇ?

Indiatimes 30 Jul 2019, 12:56 pm
ಗೂಗಲ್ ಸಿಇಒ ಸುಂದರ್ ಪಿಚ್ಚೈ ಅವರ ಹುದ್ದೆ ನಿಮಗೆ ಸಿಕ್ಕಿದರೆ? ಇಡೀ ಜಗತ್ತಿನಲ್ಲೇ ಅತ್ಯಂತ ಗರಿಷ್ಠ ವೇತನ ಇರುವ ಹುದ್ದೆಗಳಲ್ಲಿ ಗೂಗಲ್ ಸಿಇಒ ಸ್ಥಾನವೂ ಒಂದು. ಹೀಗಾಗಿ ಈ ಹುದ್ದೆಗಾಗಿ ಎಲ್ಲರೂ ಅರ್ಜಿ ಸಲ್ಲಿಸುತ್ತಿದ್ದಾರೆ. ಹಾಗಿದ್ದರೆ, ಗೂಗಲ್ ತನ್ನ ಸಿಇಒವನ್ನು ಬದಲಾಯಿಸುವ ಇರಾದೆಯಲ್ಲಿದೆಯೇ?
Vijaya Karnataka Web Google CEO Sundar Pichai turned down a big stock award after lavish payouts
Google CEO Sundar Pichai (File photo)


ಇಂಥದ್ದೊಂದು ಸುದ್ದಿ ಹರಿದಾಡಲು ಕಾರಣ, ಲಿಂಕ್ಡ್ಇನ್ ಎಂಬ ಜನಪ್ರಿಯ ಸೋಷಿಯಲ್ ನೆಟ್‌ವರ್ಕಿಂಗ್ ಜಾಲತಾಣ. ಯಾರೋ ಒಬ್ಬರು ಉದ್ಯೋಗ ಖಾಲಿ ಇದೆ ಎಂದು ಗೂಗಲ್ ಸಿಇಒ ಹುದ್ದೆಯನ್ನು ಉಲ್ಲೇಖಿಸಿ ಪೋಸ್ಟ್ ಮಾಡಿದ್ದರು. ಜನರು ಅದನ್ನು ನಂಬಿದರು ಮತ್ತು ಅತ್ಯಂತಂ ಆತ್ಮವಿಶ್ವಾಸದಿಂದ ಅರ್ಜಿಯನ್ನೂ ಸಲ್ಲಿಸತೊಡಗಿದರು.

ಇದಕ್ಕೆಲ್ಲ ಪ್ರಧಾನ ಕಾರಣವೆಂದರೆ, ಸೆಕ್ಯುರಿಟಿ ಬಗ್‌ನಿಂದಾಗಿ ಸುಂದರ್ ಪಿಚ್ಚೈ ಗೂಗಲ್ ಸಿಇಒ ಹುದ್ದೆಯ ಪೋಸ್ಟಿಂಗ್ ಅಲ್ಲಿ ದಾಖಲಾಗಿತ್ತು. ಈ ತಾಂತ್ರಿಕ ದೋಷ (ಬಗ್) ಪ್ರಕಾರ, ಯಾವುದೇ ಕಂಪನಿಯ ಲಿಂಕ್ಡ್ಇನ್ ಪುಟದಲ್ಲಿ ಜನರು ಅಧಿಕೃತವೆಂಬಂತೆ ಕಾಣಿಸುವ ಉದ್ಯೋಗ ಮಾಹಿತಿಯನ್ನು ಪೋಸ್ಟ್ ಮಾಡಬಹುದಾಗಿದೆ. ಡಚ್ ನೇಮಕಾತಿ ಕಂಪನಿಯ ಮೈಕೆಲ್ ರಿಜಿಂಡರ್ಸ್ ಎಂಬವರು ಈ ತಾಂತ್ರಿಕ ದೋಷವನ್ನು ಪತ್ತೆ ಹಚ್ಚಿದವರು.

ಅವರು ಲಿಂಕ್ಡ್ಇನ್‌ನಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. "ಯಾರು ಕೂಡ ಒಂದು ಸಣ್ಣ ಮೊತ್ತದ ಹಣ ನೀಡಿ, ಉದ್ಯೋಗದ ಬಗ್ಗೆ ಮಾಹಿತಿ ಪೋಸ್ಟ್ ಮಾಡಬಹುದು. ನಮ್ಮ ಉದ್ಯೋಗದಾತರ ಹೆಸರು ಮುಂತಾದ ವಿವರವನ್ನು ದಾಖಲಿಸಬೇಕು. ಉದ್ಯೋಗ ಖಾಲಿ ಇರುವ ಮಾಹಿತಿಯನ್ನು ಯಾರೂ ಕೂಡ ಪೋಸ್ಟ್ ಮಾಡಬಹುದಾಗಿದೆ. ಹೀಗಾಗಿಯೇ ಗೂಗಲ್ ಸಿಇಒ ಹುದ್ದೆ ಖಾಲಿ ಇರುವ ಬಗೆಗಿನ ಪೋಸ್ಟ್ ಕೂಡ ಲಿಂಕ್ಡ್ಇನ್‌ನಲ್ಲಿ ಕಾಣಿಸಿಕೊಂಡಿದೆ" ಎಂದಿದ್ದಾರೆ ಮೈಕೆಲ್.

ಮೂಲತಃ ಅರ್ಜಿಗಳನ್ನು ಲಿಂಕ್ಡ್ಇನ್‌ಗೆ ಕಳುಹಿಸಬೇಕಾಗುವಂತೆ ಆ್ಯಪ್‌ನಲ್ಲಿ ಅವಕಾಶವಿದೆಯಾದರೂ, ಅರ್ಜಿಗಳನ್ನು ಸ್ವೀಕರಿಸಲು ಜನರು ತಮಗೆ ಬೇಕಾದ ಲಿಂಕ್‌ಗಳನ್ನೂ ಅಲ್ಲಿ ಅಳವಡಿಸಬಹುದಾಗಿದೆ. ಇದೇ ರೀತಿಯಾಗಿ ಮೈಕೆಲ್ ಅವರು ಲಿಂಕ್ಡ್ಇನ್ ಕಂಪನಿಯ ಸಿಇಒ ಹುದ್ದೆಗೂ ನಕಲಿ ಉದ್ಯೋಗಾವಕಾಶದ ಪೋಸ್ಟ್ ಅನ್ನು ಮಾಡಿ ತೋರಿಸಿದ್ದಾರೆ. ಇಷ್ಟೇ ಅಲ್ಲದೆ, ಒಂದಿಷ್ಟು ಹಣ ನೀಡಿ (ಪಾವತಿ) ಅದನ್ನು ಹೆಚ್ಚು ಜನರಿಗೆ ತಲುಪಿಸುವಂತೆ ಪ್ರಚಾರವನ್ನು ಮಾಡುವ ಅವಕಾಶವೂ ಇದೆ.

ಆದರೆ, ಈ ರೀತಿಯ ಫೇಕ್ ಉದ್ಯೋಗಾವಕಾಶಗಳು ಇಷ್ಟು ಮಾತ್ರವೇ ಅಲ್ಲ, ಒಂದು ದೊಡ್ಡ ಕಂಪನಿಯ ಸ್ಟಾಕ್ ಮಾರ್ಕೆಟ್ ವಹಿವಾಟನ್ನೇ ಅಲುಗಾಡಿಸಬಹುದು! ಒಂದು ಕಂಪನಿಯ ಸಿಇಒ ಬದಲಾಯಿಸಲಾಗುತ್ತದೆ ಎಂಬ ಸುದ್ದಿ ಹರಡಿದರೆ, ಆ ಕಂಪನಿಯ ಶೇರುಗಳ ಬೆಲೆಯು ಸ್ಟಾಕ್ ಮಾರುಕಟ್ಟೆಯಲ್ಲಿ ಪತನವಾಗುವುದು ನಿಸ್ಸಂದೇಹ.

ಲಿಂಕ್ಡ್ಇನ್ ಈ ತಾಂತ್ರಿಕ ದೋಷಕ್ಕೆ ಸ್ಪಂದಿಸಿದ್ದು, ದೋಷ ಪತ್ತೆ ಮಾಡಿ ಸರಿಪಡಿಸಿಕೊಳ್ಳಲು ನೆರವಾಗಿದ್ದಕ್ಕಾಗಿ ಮೈಕೆಲ್‌ಗೆ ಧನ್ಯವಾದ ತಿಳಿಸಿದೆ ಮತ್ತು ಗೂಗಲ್ ಸಿಇಒ ಕುರಿತ ಉದ್ಯೋಗದ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌