ಆ್ಯಪ್ನಗರ

ಗೂಗಲ್‌ನಿಂದ ‘ಶಾಪಿಂಗ್‌’ ಟ್ಯಾಬ್‌

ಗೂಗಲ್‌ ಕಂಪನಿಯು ಸದ್ಯದಲ್ಲಿಯೇ ಭಾರತದಲ್ಲಿ ತನ್ನದೇ ಆದ 'ಶಾಪಿಂಗ್‌' ಟ್ಯಾಬ್‌ ಅನ್ನು ಅನ್ನು ಬಿಡುಗಡೆ ಮಾಡಲಿದೆ. ಈ ಸಂಬಂಧ ಫ್ಲಿಪ್‌ಕಾರ್ಟ್‌, ಪೇಟಿಎಂ ಮಾಲ್‌, ಸ್ನ್ಯಾಪ್‌ಡೀಲ್‌ ಮತ್ತಿತರ ಕಂಪನಿಗಳ ಜತೆ ಮಾತುಕತೆ ನಡೆಸಿದ್ದು, ಸದ್ಯದಲ್ಲಿಯೇ ಈ ಉತ್ಪನ್ನ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.

Vijaya Karnataka 16 Oct 2018, 11:29 am
ಬೆಂಗಳೂರು: ಸರ್ಜ್‌ ಎಂಜಿನ್‌ ದೈತ್ಯ ಗೂಗಲ್‌ ಕಂಪನಿಯು ಸದ್ಯದಲ್ಲಿಯೇ ಭಾರತದಲ್ಲಿ ತನ್ನದೇ ಆದ 'ಶಾಪಿಂಗ್‌' ಟ್ಯಾಬ್‌ ಅನ್ನು ಅನ್ನು ಬಿಡುಗಡೆ ಮಾಡಲಿದೆ. ಈ ಸಂಬಂಧ ಫ್ಲಿಪ್‌ಕಾರ್ಟ್‌, ಪೇಟಿಎಂ ಮಾಲ್‌, ಸ್ನ್ಯಾಪ್‌ಡೀಲ್‌ ಮತ್ತಿತರ ಕಂಪನಿಗಳ ಜತೆ ಮಾತುಕತೆ ನಡೆಸಿದ್ದು, ಸದ್ಯದಲ್ಲಿಯೇ ಈ ಉತ್ಪನ್ನ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.
Vijaya Karnataka Web google.


ಈ ಟ್ಯಾಬ್‌ನಲ್ಲಿ ಬಳಕೆದಾರರು ತಮಗೆ ಬೇಕಾದ ಉತ್ಪನ್ನಗಳನ್ನು ಹುಡುಕಬಹುದು. ಅವರನ್ನು ಸಂಬಂಧಿಸಿದ ಇ-ಕಾಮರ್ಸ್‌ ತಾಣಗಳಿಗೆ ಈ ಟ್ಯಾಬ್‌ ಕರೆದೊಯ್ಯುತ್ತದೆ. ಯೋಜನೆಯ ಕೆಲಸ ಕಳೆದ ಕೆಲವು ತಿಂಗಳಿಂದ ನಡೆಯುತ್ತಿದೆ. ವರ್ಷಾಂತ್ಯಕ್ಕೆ ಅದು ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಇಮೇಲ್‌ನಲ್ಲಿ ಪ್ರತಿಕ್ರಿಯಿಸಿರುವ ಗೂಗಲ್‌ ವಕ್ತಾರರು, ''ಗ್ರಾಹಕರು ತಮಗೆ ಬೇಕಾದ ಉತ್ಪನ್ನಗಳನ್ನು ಹುಡುಕಲು ನಾವು ಸದಾ ನೆರವು ನೀಡುತ್ತೇವೆ. ಸ್ಥಳೀಯ ವರ್ತಕರನ್ನು ಗ್ರಾಹಕರ ಜತೆ ಬೆಸೆಯುವ ಕೆಲಸವನ್ನು ಶಾಪಿಂಗ್‌ ಟ್ಯಾಬ್‌ ಮಾಡಲಿದೆ. ಇದೊಂದು ವಿನೂತನವಾದ ಪರಿಕಲ್ಪನೆ,'' ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌