ಆ್ಯಪ್ನಗರ

Google Duo: ಗ್ರೂಪ್ ವಿಡಿಯೋ ಕಾಲಿಂಗ್ ಲಭ್ಯ

ಸದ್ಯಕ್ಕೆ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಈ ಆಯ್ಕೆ ಇದ್ದು, ಐಫೋನ್ ಬಳಕೆದಾರರಿಗೆ ಮುಂದಿನ ಹಂತದಲ್ಲಿ ದೊರೆಯಲಿದೆ. ಗೂಗಲ್ ಡುವೋ ಹೆಡ್ ಜಸ್ಟಿನ್ ಉಬೆರ್ಟಿ ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

Times Now 27 Apr 2019, 4:37 pm
ಗೂಗಲ್ ತನ್ನ ಜನಪ್ರಿಯ ವಿಡಿಯೋ ಕಾಲಿಂಗ್ ಆ್ಯಪ್ ಡುವೋದಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ಆಯ್ಕೆಯನ್ನು ಪರಿಚಯಿಸುತ್ತಿದೆ.
Vijaya Karnataka Web Google DUO


ಈಗಾಗಲೇ ಹಲವು ದೇಶಗಳಲ್ಲಿ ಗೂಗಲ್ ಡುವೋ ಗ್ರೂಪ್ ಕಾಲಿಂಗ್ ಆಯ್ಕೆ, ನೂತನ ಅಪ್‌ಡೇಟ್‌ನೊಂದಿಗೆ ಬಂದಿದೆ.

ಆ್ಯಪಲ್ ಫೇಸ್‌ಟೈಮ್‌ನಲ್ಲಿ ಅಮೆರಿಕ ಬಳಕೆದಾರರಿಗೆ ಮೊದಲು ಗ್ರೂಪ್ ವಿಡಿಯೋ ಕಾಲ್ ಆಯ್ಕೆ ಒದಗಿಸಿತ್ತು. ಅದಾದ ಬಳಿಕ ವಾಟ್ಸಪ್ ಕೂಡ ಗ್ರೂಪ್ ವಿಡಿಯೋ ಕಾಲಿಂಗ್ ನೀಡಿತ್ತು. ಇದೀಗ ಗೂಗಲ್ ಡುವೋದಲ್ಲೂ ಗ್ರೂಪ್ ವಿಡಿಯೋ ಕಾಲ್ ಆಯ್ಕೆ ಒದಗಿಸಿದ್ದು, ಒಮ್ಮೆಗೆ ನಾಲ್ಕು ಮಂದಿಗೆ ವಿಡಿಯೋ ಕಾಲ್ ಮಾಡಬಹುದು.

ಆದರೆ ಸದ್ಯಕ್ಕೆ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಈ ಆಯ್ಕೆ ಇದ್ದು, ಐಫೋನ್ ಬಳಕೆದಾರರಿಗೆ ಮುಂದಿನ ಹಂತದಲ್ಲಿ ದೊರೆಯಲಿದೆ.
ಗೂಗಲ್ ಡುವೋ ಹೆಡ್ ಜಸ್ಟಿನ್ ಉಬೆರ್ಟಿ ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

ಉಳಿದಂತೆ ರಾತ್ರಿ ಸಮಯದಲ್ಲಿ ಅನುಕೂಲವಾಗುವಂತೆ ಗೂಗಲ್ ಡುವೋ ಲೋ ಲೈಟ್ ಮೋಡ್ ಆಯ್ಕೆಯನ್ನು ಪರಿಶೀಲಿಸುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌