ಆ್ಯಪ್ನಗರ

Hangouts: ಸೇವೆ ನಿಲ್ಲಿಸಲಿದೆಯೇ ಗೂಗಲ್?

ಏರ್‌ ಸರ್ವಿಸ್‌ನಲ್ಲಿ ಸಕ್ರಿಯವಾಗಿದ್ದ ಹ್ಯಾಂಗೌಟ್‌ ಸೇವೆಯನ್ನೂ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಇದು ಸಹಜವಾಗಿ ಯೂಟ್ಯೂಬ್‌ ಬಳಕೆದಾರರ ಮೇಲೂ ಪ್ರಭಾವ ಆಗಲಿದೆ.

Agencies 25 Jun 2019, 4:38 pm
ಗೂಗಲ್‌ ಸಂಸ್ಥೆಯು ಜಿ ಸೂಟ್‌ನಿಂದ ಪ್ರಸಕ್ತ ವರ್ಷವೇ ಗೂಗಲ್‌ ಹ್ಯಾಂಗೌಟ್‌ ಅಪ್ಲಿಕೇಷನ್‌ ಅನ್ನು ಸ್ಥಗಿತಗೊಳಿಸಿ, ಅದನ್ನು ಹ್ಯಾಂಗೌಟ್‌ ಚಾಟ್ಸ್‌ ಮತ್ತು ಹ್ಯಾಂಗೌಟ್ಸ್‌ ಮೀಟ್‌ ಎಂಬ ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಲಿದೆ.
Vijaya Karnataka Web Google


ಇದರ ಜತೆಗೆ, ಏರ್‌ ಸರ್ವಿಸ್‌ನಲ್ಲಿ ಸಕ್ರಿಯವಾಗಿದ್ದ ಹ್ಯಾಂಗೌಟ್‌ ಸೇವೆಯನ್ನೂ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಇದು ಸಹಜವಾಗಿ ಯೂಟ್ಯೂಬ್‌ ಬಳಕೆದಾರರ ಮೇಲೂ ಪ್ರಭಾವ ಆಗಲಿದೆ.

ಹ್ಯಾಂಗೌಟ್‌ ಆನ್‌ ಏರ್‌ ಸೇವೆಯನ್ನು ಬಹಳಷ್ಟು ಜನರು ಬಳಸುತ್ತಿದ್ದು, ಮಲ್ಟಿ ಯೂಸರ್‌ ವಿಡಿಯೊ ಚಾಟ್‌ ಮತ್ತು ರಿಯಲ್‌ ಟೈಮ್‌ ಲೈವ್‌ ಸ್ಟ್ರೀಮ್‌ ಅನ್ನು ಯುಟೂಬ್‌ ಬಳಕೆದಾರರು ಮಾಡುತ್ತಿದ್ದರು. ಇದೀಗ ಈ ಎಲ್ಲ ಚಟುವಟಿಕೆಗಳು ಬಂದ್‌ ಆಗಲಿವೆ.

ಹಾಗಾಗಿ, ಏರ್‌ ಸರ್ವಿಸ್‌ನಲ್ಲಿ ಹ್ಯಾಂಗೌಟ್‌ ಸ್ಥಗಿತಗೊಳ್ಳುವುದು ಯುಟೂಬ್‌ ಬಳಕೆದಾರರಿಗೆ ಹೆಚ್ಚು ದುಃಖ ತಂದಿದೆ ಎಂದು ಹೇಳಬಹುದು. ಈ ಫೀಚರ್‌ ಗೂಗಲ್‌ ಪ್ಲಸ್‌ ಆರಂಭದ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗಿತ್ತು. ವಿಶೇಷ ಎಂದರೆ, ಈವರೆಗೂ ಗೂಗಲ್‌ ಸಂಸ್ಥೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌