ಆ್ಯಪ್ನಗರ

Joker Malware: ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮತ್ತೆ ಜೋಕರ್ ಮಾಲ್ವೇರ್ ಆ್ಯಪ್ ಹಾವಳಿ!

ಪ್ಲೇ ಸ್ಟೋರ್ ಸೇರಿಕೊಂಡು, ಅದರ ಮೂಲಕ ಜೋಕರ್ ಮಾಲ್ವೇರ್ ಹರಿಯಬಿಡುತ್ತಿದ್ದ ಸುಮಾರು 11 ಆ್ಯಪ್‌ಗಳನ್ನು ಗೂಗಲ್ ತೆಗೆದುಹಾಕಿದ್ದು, ಬಳಕೆದಾರರ ಫೋನ್‌ನಲ್ಲಿ ಅಂತಹ ಆ್ಯಪ್ ಇದ್ದರೆ, ಕೂಡಲೇ ತೆಗೆದುಹಾಕುವುದು ಉತ್ತಮ.

Times Now 11 Jul 2020, 9:24 am
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಗೇಮ್ಸ್ ಮತ್ತು ಅಪ್ಲಿಕೇಶನ್‌ ಒದಗಿಸುವ ಗೂಗಲ್ ಪ್ಲೇ ಸ್ಟೋರ್‌ಗೆ ಮತ್ತೆ ಮತ್ತೆ ವೈರಸ್ ಹಾವಳಿ ಹೆಚ್ಚಾಗುತ್ತಿದೆ.
Vijaya Karnataka Web Joker malware
Google Play Store


ಈ ಬಾರಿ ಜೋಕರ್ ಮಾಲ್ವೇರ್ ಹೆಸರಿನ ವೈರಸ್ ಮತ್ತೆ ಪ್ಲೇ ಸ್ಟೋರ್‌ಗೆ ಕಾಲಿರಿಸಿದ್ದು, ಗ್ರಾಹಕರ ವೈಯಕ್ತಿಕ ಮಾಹಿತಿ ಕದಿಯುತ್ತಿದೆ. ಆಂಡ್ರಾಯ್ಡ್ ಓಎಸ್‌ಗೆ ಜೋಕರ್ ವೈರಸ್ ಹಾವಳಿ ಸಾಮಾನ್ಯವಾಗಿದ್ದು, ಈ ಮೊದಲು ಕೂಡ ವಿವಿಧ ಸ್ಮಾರ್ಟ್‌ಫೋನ್‌ಗಳಿಗೆ ಹಾನಿ ಮಾಡಿತ್ತು. ಬಳಿಕ ಗೂಗಲ್, ಪ್ಲೇ ಸ್ಟೋರ್‌ನಿಂದ ಅವುಗಳನ್ನು ತೆಗೆದುಹಾಕಿತ್ತು. ಆದರೆ ಈಗ ಮತ್ತೆ ಜೋಕರ್ ಹಾವಳಿ ಆರಂಭವಾಗಿದ್ದು, ಕೆಲವೊಂದು ಆ್ಯಪ್‌ಗಳನ್ನು ಕೂಡಲೇ ಅನ್‌ಇನ್‌ಸ್ಟಾಲ್ ಮಾಡುವುದು ಉತ್ತಮ ಎಂದು ಗೂಗಲ್ ಸೂಚನೆ ನೀಡಿದೆ.

ಪ್ಲೇ ಸ್ಟೋರ್ ಸೇರಿಕೊಂಡು, ಅದರ ಮೂಲಕ ಜೋಕರ್ ಮಾಲ್ವೇರ್ ಹರಿಯಬಿಡುತ್ತಿದ್ದ ಸುಮಾರು 11 ಆ್ಯಪ್‌ಗಳನ್ನು ಗೂಗಲ್ ತೆಗೆದುಹಾಕಿದ್ದು, ಬಳಕೆದಾರರ ಫೋನ್‌ನಲ್ಲಿ ಅಂತಹ ಆ್ಯಪ್ ಇದ್ದರೆ, ಕೂಡಲೇ ತೆಗೆದುಹಾಕುವುದು ಉತ್ತಮ.

ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿರುವ ಜೋಕರ್ ಮಾಲ್ವೇರ್ ಆ್ಯಪ್ ಪಟ್ಟಿ ಇಲ್ಲಿದೆ..
com.imagecompress.android,
com.relax.relaxation.androidsms,
com.cheery.message.sendsms,
com.peason.lovinglovemessage,
com.contact.withme.texts,
com.hmvoice.friendsms,
com.file.recovefiles,
com.LPlocker.lockapps,
com.remindme.alram
com.training.memorygame.

China Apps Ban: ಚೀನಾದಲ್ಲಿ ಯಾವೆಲ್ಲ ಆ್ಯಪ್, ವೆಬ್‌ಸೈಟ್ ನಿಷೇಧವಾಗಿದೆ ಗೊತ್ತಾ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌