ಆ್ಯಪ್ನಗರ

Google: ಬರುತ್ತಿವೆ 53 ಹೊಸ ಇಮೋಜಿ

ಪುರುಷ ಮತ್ತು ಮಹಿಳೆಯರ ವಿವಿಧ ಹುದ್ದೆ, ಕೆಲಸವನ್ನು ಪ್ರತಿಬಿಂಬಿಸುವ ಇಮೋಜಿ ಕೂಡ ಇದರಲ್ಲಿ ಸೇರಿದ್ದು, ಮೊದಲಿಗೆ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗೆ ಲಭ್ಯವಾಗಲಿದೆ.

Times Now 10 May 2019, 6:11 pm
ಮನುಷ್ಯನ ಭಾವನೆಯನ್ನು ಬರಹದ ಮೂಲಕ ಅಭಿವ್ಯಕ್ತಪಡಿಸದೇ ಇದ್ದಾಗ, ಅದನ್ನು ಇಮೋಜಿ ಮೂಲಕ ಅಭಿವ್ಯಕ್ತಪಡಿಸಲು ಈಗ ಸಾಧ್ಯವಿದೆ. ಹೀಗಾಗಿಯೇ ತರಹೇವಾರಿ ಇಮೋಜಿಗಳಿಂದು ಲಭ್ಯ.
Vijaya Karnataka Web emoji


ಇದೀಗ ಗೂಗಲ್ ನೂತನ ಆಪರೇಟಿಂಗ್ ಸಾಫ್ಟ್‌ವೇರ್ ಅಂಡ್ರಾಯ್ಡ್ ಕ್ಯೂ ಜತೆಗೆ ಹೊಸದಾಗಿ 53 ಇಮೋಜಿಗಳನ್ನು ಪರಿಚಯಿಸಲಿದೆ.

ಪುರುಷ ಮತ್ತು ಮಹಿಳೆಯರ ವಿವಿಧ ಹುದ್ದೆ, ಕೆಲಸವನ್ನು ಪ್ರತಿಬಿಂಬಿಸುವ ಇಮೋಜಿ ಕೂಡ ಇದರಲ್ಲಿ ಸೇರಿದ್ದು, ಮೊದಲಿಗೆ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗೆ ಲಭ್ಯವಾಗಲಿದೆ. ನಂತರ ಅಂಡ್ರಾಯ್ಡ್ ಕ್ಯೂ ಬೆಂಬಲಿಸುವ ಇತರ ಸ್ಮಾರ್ಟ್‌ಫೋನ್‌ಗಳಿಗೂ ದೊರೆಯಲಿದೆ.

ಮೊದಲು 176 ಇಮೋಜಿಗಳಿದ್ದು, ನಂತರ ಈಗ ಸುಮಾರು 3,000 ಇಮೋಜಿಗಳು ಲಭ್ಯ.

ಪುರುಷ ಮತ್ತು ಮಹಿಳಾ ಸಮಾನತೆ ಹಾಗು ಹೊಸ ಮಾದರಿಯ ಇಮೋಜಿಗಳನ್ನು ಪರಿಚಯಿಸುವ ಮೂಲಕ ಬಳಕೆದಾರರಿಗೆ ಮತ್ತಷ್ಟು ಉತ್ತಮ ಆಯ್ಕೆ ಒದಗಿಸಲು ಗೂಗಲ್ ಸಿದ್ಧತೆ ನಡೆಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌