ಆ್ಯಪ್ನಗರ

ಲೋಕಸಭೆ ಚುನಾವಣೆ ವರದಿ: ಗೂಗಲ್ ವಿಶೇಷ ತರಬೇತಿ

ಡಾಟಾಲೀಡ್ಸ್‌ ಮತ್ತು ಇಂಟರ್‌ನ್ಯೂಸ್ ಸಹಭಾಗಿತ್ವದಲ್ಲಿ ಗೂಗಲ್ ನ್ಯೂಸ್ 'ಪೋಲ್‌ಚೆಕ್: ಕವರಿಂಗ್ ಇಂಡಿಯಾಸ್ ಎಲೆಕ್ಷನ್' ಎಂಬ ಕಾರ್ಯಾಗಾರ ನಡೆಸುತ್ತದೆ.

Vijaya Karnataka Web 22 Feb 2019, 10:46 am
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಸಾಮಾಜಿಕ ತಾಣ ಮತ್ತು ಆನ್‌ಲೈನ್ ಮಾಧ್ಯಮ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಅದನ್ನು ಸಮರ್ಥವಾಗಿ ನಿಭಾಯಿಸುವ ಕುರಿತಂತೆ ಇಂಟರ್‌ನೆಟ್‌ ದೈತ್ಯ ಗೂಗಲ್, ದೇಶದ ಪತ್ರಕರ್ತರಿಗೆ ವಿಶೇಷ ತರಬೇತಿ ನೀಡಲು ಮುಂದಾಗಿದೆ.
Vijaya Karnataka Web Google


ಡಾಟಾಲೀಡ್ಸ್‌ ಮತ್ತು ಇಂಟರ್‌ನ್ಯೂಸ್ ಸಹಭಾಗಿತ್ವದಲ್ಲಿ ಗೂಗಲ್ ನ್ಯೂಸ್ 'ಪೋಲ್‌ಚೆಕ್: ಕವರಿಂಗ್ ಇಂಡಿಯಾಸ್ ಎಲೆಕ್ಷನ್' ಎಂಬ ಕಾರ್ಯಾಗಾರ ನಡೆಸುತ್ತದೆ.


ಫೆ. 26ರಿಂದ ಆರಂಭವಾಗುವ ತರಬೇತಿ ಕಾರ್ಯಾಗಾರ ಏ. 6ರವರೆಗೆ ದೇಶಾದ್ಯಂತ ಪ್ರಮುಖ 30 ನಗರಗಳಲ್ಲಿ ಇಂಗ್ಲಿಷ್, ಹಿಂದಿ, ಮಲಯಾಳಂ, ಬಾಂಗ್ಲಾ, ಕನ್ನಡ, ಗುಜರಾತಿ, ಒಡಿಯಾ, ತಮಿಳು, ತೆಲುಗು ಮತ್ತು ಮರಾಠಿ ಸಹಿತ ವಿವಿಧ ಭಾಷೆಗಳಲ್ಲಿ ನಡೆಯಲಿದೆ.

ಲೋಕಸಭೆ ಚುನಾವಣೆ ಮತ್ತು ಸಂಬಂಧಿತ ವರದಿಗಾರಿಕೆ, ದತ್ತಾಂಶ, ಫ್ಯಾಕ್ಟ್‌ಚೆಕ್, ಡಿಜಿಟಲ್ ಸೇಫ್ಟಿ, ಚುನಾವಣೆಯಲ್ಲಿ ಯೂಟ್ಯೂಬ್‌ ಬಳಕೆ ಸಹಿತ ಡಿಜಿಟಲ್ ಮಾಧ್ಯಮದ ಕುರಿತು ವಿಶೇಷ ತರಬೇತಿ ನೀಡಲು ಗೂಗಲ್ ನಿರ್ಧರಿಸಿದೆ.

ತರಬೇತಿ ಉಚಿತವಾಗಿದ್ದು, ಆಸಕ್ತ ಪತ್ರಕರ್ತರು ಮತ್ತು ಜರ್ನಲಿಸಂ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಬೆಂಗಳೂರಿನಲ್ಲಿ ಮಾರ್ಚ್ 8ರಂದು ಗೂಗಲ್ ತರಬೇತಿ ಕಾರ್ಯಾಗಾರ ನಡೆಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌