ಆ್ಯಪ್ನಗರ

Reliance AGM 2020: ರಿಲಯನ್ಸ್ ಜಿಯೋದಲ್ಲಿ 33,000 ಕೋಟಿ ರೂ. ಹೂಡಿಕೆ ಮಾಡಲಿದೆ ಗೂಗಲ್!

ಗೂಗಲ್ ಜತೆಗಿನ ಪಾಲುದಾರಿಕೆಯಿಂದ ಗೂಗಲ್ ಮ್ಯಾಪ್ಸ್, ಜಿಮೇಲ್, ಯೂಟ್ಯೂಬ್ ಮಾತ್ರವಲ್ಲದೆ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲೂ ಹೆಚ್ಚಿನ ಬದಲಾವಣೆಯನ್ನು ದೇಶದಲ್ಲಿ ನಿರೀಕ್ಷಿಸಬಹುದಾಗಿದೆ.

Gadgets Now 15 Jul 2020, 3:54 pm
ರಿಲಯನ್ಸ್ ಜಿಯೋ ಫ್ಲಾಟ್‌ಫಾರ್ಮ್ಸ್‌ನಲ್ಲಿ ಹೂಡಿಕೆಯ ಪರ್ವ ಮುಂದುವರಿದಿದ್ದು, ಟೆಕ್ ದೈತ್ಯ ಗೂಗಲ್ 33,737 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದೆ.
Vijaya Karnataka Web Reliance AGM 2020
Reliance AGM 2020


ಬುಧವಾರ ನಡೆದ ರಿಲಯನ್ಸ್ ಇಂಡಸ್ಟ್ರೀಸ್ 43ನೇ ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ ಈ ವಿಚಾರ ಪ್ರಕಟಿಸಿದ್ದಾರೆ.

ಇದರೊಂದಿಗೆ ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ಗೂಗಲ್ ಶೇ. 7.7 ಪಾಲು ಪಡೆದುಕೊಳ್ಳಲಿದೆ. ಈಗಾಗಲೇ ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ಫೇಸ್‌ಬುಕ್, ಕ್ವಾಲ್ಕಂ, ಇಂಟೆಲ್ ಮತ್ತು ವಿವಿಧ ಟೆಕ್ ಮತ್ತು ಹೂಡಿಕೆ ಸಂಸ್ಥೆಗಳು ಹಣ ತೊಡಗಿಸಿದ್ದು, ಒಟ್ಟಾರೆ ರಿಲಯನ್ಸ್ ಜಿಯೋ 1.52 ಲಕ್ಷ ಕೋಟಿ ರೂ. ಹೂಡಿಕೆ ಮತ್ತು ಪಾಲುದಾರಿಕೆ ಪಡೆದುಕೊಂಡಂತಾಗಿದೆ.

ಗೂಗಲ್ ಜತೆಗಿನ ಪಾಲುದಾರಿಕೆಯಿಂದ ಗೂಗಲ್ ಮ್ಯಾಪ್ಸ್, ಜಿಮೇಲ್, ಯೂಟ್ಯೂಬ್ ಮಾತ್ರವಲ್ಲದೆ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲೂ ಹೆಚ್ಚಿನ ಬದಲಾವಣೆಯನ್ನು ದೇಶದಲ್ಲಿ ನಿರೀಕ್ಷಿಸಬಹುದಾಗಿದೆ.

ಜತೆಗೆ ರಿಲಯನ್ಸ್ 5G ಮತ್ತು ಜಿಯೋ ಮಾರ್ಟ್, ಜಿಯೋ ಮೀಟ್‌ನಂತಹ ನೂತನ ಯೋಜನೆಗಳನ್ನು ಹೊಂದಿದ್ದು, ಅತ್ಯಂತ ಹೆಚ್ಚಿನ ಹೂಡಿಕೆಯೊಂದಿಗೆ ವೇಗವಾಗಿ ಬೆಳೆಯುತ್ತಿರುವ ಮತ್ತು ದೇಶದ ಇ ಕಾಮರ್ಸ್, ರಿಟೇಲ್ ಮತ್ತು ಟೆಕ್ ವಲಯದ ಅತಿದೊಡ್ಡ ಸಂಸ್ಥೆಯಾಗಿ ಹೊರಹೊಮ್ಮುವ ನಿರೀಕ್ಷೆಯಿದೆ.

Digital India: ದೇಶದಲ್ಲಿ 75,000 ಕೋಟಿ ರೂ. ಹೂಡಿಕೆ ಮಾಡಲಿದೆ ಗೂಗಲ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌