ಆ್ಯಪ್ನಗರ

Xiaomi Event: ಹೊಸದು ಏನೇನು ಬಂದಿದೆ?

ಶವೋಮಿ ಮಂಗಳವಾರ ವಿಶೇಷ ಕಾರ್ಯಕ್ರಮದಲ್ಲಿ ಸ್ಮಾರ್ಟ್ ಟಿವಿ ಮಾತ್ರವಲ್ಲದೆ, ಇತರ ಗ್ಯಾಜೆಟ್‌ಗಳನ್ನು ಕೂಡ ಪರಿಚಯಿಸಿದೆ. ಅದರ ವಿವರ ಇಲ್ಲಿದೆ.

Times Now 17 Sep 2019, 5:50 pm
ಸ್ಮಾರ್ಟರ್ ಲಿವಿಂಗ್ 2020 ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಶವೋಮಿ ಮಂಗಳವಾರ ವಿವಿಧ ನೂತನ ಗ್ಯಾಜೆಟ್‌ಗಳನ್ನು ಟೆಕ್‌ ಲೋಕಕ್ಕೆ ಪರಿಚಯಿಸಿದೆ.
Vijaya Karnataka Web Mi TV NEW


ಹೊಸ ಎಂಐ 4 ಟಿವಿ ಸರಣಿ, ಎಂಐ ಬ್ಯಾಂಡ್ 4, ಎಂಐ ವಾಟರ್‌ ಪ್ಯೂರಿಫೈರ್, ಸೌಂಡ್‌ಬಾರ್ ಮತ್ತು ಮೋಶನ್ ಆಕ್ಟಿವೇಟೆಡ್ ನೈಟ್ ಲೈಟ್ 2 ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ಒಂದು ಎಲ್‌ಇಡಿ ಟಿವಿ ಮತ್ತು ಮೂರು 4K ಟಿವಿಯನ್ನು ಶವೋಮಿ ದೇಶದ ಸ್ಮಾರ್ಟ್ ಟಿವಿ ಲೋಕಕ್ಕೆ ಪರಿಚಯಿಸಿದೆ.
ಸ್ಮಾರ್ಟ್‌ಫೋನ್ ಹೊರತಾಗಿ ಇತರ ವಿವಿಧ ಗ್ಯಾಜೆಟ್‌ಗಳಿಗೆ ಶವೋಮಿ ಪ್ರಾಮುಖ್ಯತೆ ನೀಡಿದ್ದು, ಹೊಸ ಮಾದರಿಯ ಟಿವಿ, 65 ಇಂಚು, 50 ಇಂಚು, 43 ಇಂಚು ಮತ್ತು 40 ಇಂಚಿನ ಟಿವಿಯನ್ನು ಶವೋಮಿ ಪರಿಚಯಿಸಿದೆ.

Mi Band 4: ಶವೋಮಿ ಹೊಸ ಫಿಟ್ನೆಸ್ ಬ್ಯಾಂಡ್

ಎಂಐ ವಾಟರ್ ಪ್ಯೂರಿಫೈಯರ್
ಏಳು ಲೀ. ಸಾಮರ್ಥ್ಯದ ಶವೋಮಿ ವಾಟರ್ ಪ್ಯೂರಿಫೈರ್, 11,999 ರೂ. ದರ ಹೊಂದಿದ್ದು, ಸೆ. 29ರಂದು ಫ್ಲಿಪ್‌ಕಾರ್ಟ್ ಮೂಲಕ ಲಭ್ಯ.

ಎಂಐ ಸೌಂಡ್‌ಬಾರ್
ಎಂಐ ಹೊಸ ಸೌಂಡ್‌ಬಾರ್ 4,999 ರೂ. ದರವಿದ್ದು, ಸ್ಮಾರ್ಟ್ ಹೋಂ ಸರಣಿಯಲ್ಲಿ ದೊರೆಯಲಿದೆ.

Mi TV: ಮಾರುಕಟ್ಟೆಗೆ ಶವೋಮಿ ಹೊಸ ಟಿವಿ

ಎಂಐ ನೈಟ್ ಲೈಟ್ 2
ಚಲನೆಯನ್ನು ಆಧರಿಸಿ ಕಾರ್ಯನಿರ್ವಹಿಸುವ ಎಂಐ ಮೋಶನ್ ಆಕ್ಟಿವೇಟೆಡ್ ನೈಟ್ ಲೈಟ್ 2 ಅನ್ನು ಪರಿಚಯಿಸಿದ್ದು, ಸೆ. 18ರಿಂದ ಲಭ್ಯವಿದೆ. ದರ 500 ರೂ. ನಿಗದಿಪಡಿಸಲಾಗಿದೆ.

ಶವೋಮಿ ಉತ್ಪನ್ನ ದೇಶದಲ್ಲಿ ಬೆಲೆ ವಿವರ
ಎಂಐ TVRs. 17,999 - 54,999
ಎಂಐ ಬ್ಯಾಂಡ್ 4Rs. 2,299
ಎಂಐ ವಾಟರ್ ಪ್ಯೂರಿಫೈರ್Rs. 11,999
ಎಂಐ ಸೌಂಡ್‌ಬಾರ್Rs. 4,999
ಎಂಐ Motion Activated ನೈಟ್2Rs. 500

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌