ಆ್ಯಪ್ನಗರ

Smartphone Price Cut: ಯಾವೆಲ್ಲ ಫೋನ್‌ಗಳ ಬೆಲೆ ಇಳಿಕೆ?

ವಿವಿಧ ಫೋನ್‌ ಕಂಪನಿಗಳು ಹೊಸ ಮಾದರಿಯನ್ನು ಬಿಡುಗಡೆ ಮಾಡುತ್ತಲೇ ಹಳೆಯ ಮಾದರಿಗಳ ಬೆಲೆಯನ್ನು ಇಳಿಕೆ ಮಾಡುತ್ತವೆ..

Vijaya Karnataka Web 28 Jan 2020, 5:46 pm
ಮಾರುಕಟ್ಟೆಯಲ್ಲಿ ನೂತನ ಫೋನ್ ಬರುತ್ತಿದ್ದಂತೆ ಹಳೆಯ ಫೋನ್‌ಗಳ ಬೆಲೆಯಲ್ಲಿ ಇಳಿಕೆಯಾಗುವುದು ಸಾಮಾನ್ಯ. 2020ರ ಆರಂಭದಲ್ಲಿಯೇ ಸ್ಯಾಮ್‌ಸಂಗ್, ರಿಯಲ್‌ಮಿ, ಒಪ್ಪೋ ಮತ್ತು ವಿವಿಧ ಕಂಪನಿಗಳ ಹೊಸ ಮಾದರಿಗಳು ಬಿಡುಗಡೆಯಾಗಿದ್ದು, ಹಳೆಯ ಮಾದರಿಯ ಬೆಲೆ ಇಳಿಕೆಯಾಗಿದೆ.
Vijaya Karnataka Web here is the list of smartphones that got price cut in 2020 january
Smartphone Price Cut: ಯಾವೆಲ್ಲ ಫೋನ್‌ಗಳ ಬೆಲೆ ಇಳಿಕೆ?



ವಿವೋ Z1x

ವಿವೋ ಇತ್ತೀಚೆಗೆ ಪರಿಚಯಿಸಿದ್ದ Z1x ಫೋನ್ ಬೆಲೆ 1,000 ರೂ. ಕಡಿತವಾಗಿದ್ದು, 14,990 ರೂ.ಗೆ ದೊರೆಯುತ್ತಿದೆ.

​ವಿವೋ Z1 Pro

ವಿವೋ ಫೋನ್ ಬೆಲೆ 1,000 ರೂ. ಕಡಿತವಾಗಿದ್ದು, 12,990 ರೂ.ಗೆ ಲಭ್ಯವಾಗುತ್ತಿದೆ.

​ಸ್ಯಾಮ್‌ಸಂಗ್ ಗ್ಯಾಲಕ್ಸಿ S10e

ಸ್ಯಾಮ್‌ಸಂಗ್ ಗ್ಯಾಲಕ್ಸಿ S10e ಫೋನ್ ಈಗ 8,000 ರೂ. ಬೆಲೆ ಇಳಿಕೆ ಬಳಿಕ 47,900 ರೂ.ಗೆ ದೊರೆಯುತ್ತಿದೆ.

​ಸ್ಯಾಮ್‌ಸಂಗ್ Galaxy S10

ಸ್ಯಾಮ್‌ಸಂಗ್ ಗ್ಯಾಲಕ್ಸಿ S10 ಫೋನ್ ಬೆಲೆ 16,100 ರೂ. ಇಳಿಕೆಯಾಗಿದ್ದು, 54,900 ರೂ.ಗೆ ಲಭ್ಯವಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A20s

ಗ್ಯಾಲಕ್ಸಿ ಸರಣಿಯ ಸ್ಯಾಮ್‌ಸಂಗ್ ಫೋನ್ A20s ಬೆಲೆ 1,000 ರೂ. ಕಡಿತವಾಗಿದ್ದು, 10,999 ರೂ. ಗೆ ಲಭ್ಯವಿದೆ.

​ಶವೋಮಿ ರೆಡ್ಮಿ ಗೊ

ಶವೋಮಿಯ ನೂತನ ರೆಡ್ಮಿ ಗೊ ಫೋನ್ 300 ರೂ. ಕಡಿತವಾಗಿದ್ದು, ಗ್ರಾಹಕರು 4,299 ರೂ.ಗೆ ಖರೀದಿಸಬಹುದು.

​ಒಪ್ಪೊ K1

ಒಪ್ಪೋದ K1 ಸ್ಮಾರ್ಟ್‌ಫೋನ್ ಕೂಡ ಬೆಲೆ ಕಡಿತವಾಗಿದ್ದು, 1,000 ರೂ. ಆಫರ್ ಬಳಿಕ, 13,990 ರೂ.ಗೆ ಖರೀದಿಸಬಹುದು.

​ಒಪ್ಪೊ A5 2020

ಒಪ್ಪೋ ಹೊಸ A5 2020 ಫೋನ್ ಬೆಲೆ 500 ರೂ. ಇಳಿಕೆಯಾಗಿದ್ದು, 11,490 ರೂ.ಗೆ ಸಿಗಲಿದೆ.

​ನೋಕಿಯಾ 6.2

ನೋಕಿಯಾ ಸ್ಮಾರ್ಟ್‌ಫೋನ್ 6.2 ಬೆಲೆ 3,500 ರೂ. ಕಡಿತವಾಗಿದ್ದು, ಈಗ 12,499 ರೂ.ಗೆ ದೊರೆಯುತ್ತಿದೆ.

​ನೋಕಿಯಾ 7.2

ನೋಕಿಯಾ ಸ್ಮಾರ್ಟ್‌ಫೋನ್ 7.2 ಬೆಲೆ ಕೂಡ ಇಳಿಕೆಯಾಗಿದೆ. 3,100 ರೂ. ಬೆಲೆ ಇಳಿಕೆ ಬಳಿಕ 15,499 ರೂ.ಗೆ ಹೊಸ ಫೋನ್ ಲಭ್ಯವಿದೆ.

​ಶವೋಮಿ ಎಂಐ A3

ಶವೋಮಿ ಎಂಐ A3 ಫೋನ್ ಬೆಲೆ 1,000 ರೂ. ಇಳಿಕೆಯಾಗಿದ್ದು, 11,999 ರೂ.ಗೆ ಲಭ್ಯವಿದೆ.

​ಸ್ಯಾಮ್‌ಸಂಗ್ ಗ್ಯಾಲಕ್ಸಿ S10+

ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್ 17,100 ರೂ. ಬೆಲೆ ಇಳಿಕೆ ಬಳಿಕ 61,900 ರೂ.ಗೆ ದೊರೆಯುತ್ತಿದೆ.

​ಸ್ಯಾಮ್‌ಸಂಗ್ ಗ್ಯಾಲಕ್ಸಿ A30s

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ A30s ಸ್ಮಾರ್ಟ್‌ಫೋನ್ ಬೆಲೆ 1,000 ರೂ. ಇಳಿಕೆಯಾಗಿದ್ದು, 14,999 ರೂ.ಗೆ ದೊರೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌