ಆ್ಯಪ್ನಗರ

Samsung Unpacked event: ಕಾರ್ಯಕ್ರಮದ ವಿಶೇಷತೆಗಳು

ಸ್ಯಾಮ್‍ಸಂಗ್ ವಿಶ್ವದ ಮೊದಲ ಮಡಚಬಹುದಾದ ಗ್ಯಾಲಕ್ಸಿ ಫೋಲ್ಡ್ ಅನ್ನೂ ಪರಿಚಯಿಸಿದೆ. ಏಪ್ರಿಲ್ 26ರಿಂದ ಇದು ಮಾರುಕಟ್ಟೆಯಲ್ಲಿ ಲಭ್ಯ. ಇದರ ಜತೆಗೆ ಸ್ಯಾಮ್‍ಸಂಗ್‍ನ ಎಸ್10 ಮೊಬೈಲ್‍ನಲ್ಲಿ 5ಜಿ ವೇರಿಯಂಟ್ ಅನ್ನು ಪ್ರದರ್ಶನಕ್ಕಿಟ್ಟಿತ್ತು.

Vijaya Karnataka Web 21 Feb 2019, 3:40 pm
ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸಿರುವ ಸ್ಯಾಮ್‍ಸಂಗ್ ಗುರುವಾರ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ ಸ್ಯಾಮ್‌ಸಂಗ್ ಅನ್‌ಪ್ಯಾಕ್‌ಡ್‌ ಕಾರ್ಯಕ್ರಮದಲ್ಲಿ ಗ್ಯಾಲಕ್ಸಿ ಎಸ್ ಸಿರೀಸ್ ಮೊಬೈಲ್ಸ್, ಗ್ಯಾಲಕ್ಸಿ ಗ್ಯಾಜೆಟ್‌ ಅಕ್ಸೆಸರೀಸ್‌ಗಳನ್ನು ಪರಿಚಯಿಸಿದೆ.
Vijaya Karnataka Web Samsung event


ಎಸ್ ಸಿರೀಸ್‍ನಲ್ಲಿ ಗ್ಯಾಲಕ್ಸಿ ಎಸ್10, ಗ್ಯಾಲಕ್ಸಿ ಎಸ್10 ಪ್ಲಸ್ ಮತ್ತು ಗ್ಯಾಲಕ್ಸಿ ಎಸ್10ಇ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಮಾರ್ಚ್ 8ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.

Samsung Galaxy S10, Galaxy S10+, Galaxy S10e ಬಿಡುಗಡೆ, ಬೆಲೆ ವೈಶಿಷ್ಟ್ಯಗಳು

ಇದಲ್ಲದೆ ಸ್ಯಾಮ್‍ಸಂಗ್ ವಿಶ್ವದ ಮೊದಲ ಮಡಚಬಹುದಾದ ಗ್ಯಾಲಕ್ಸಿ ಫೋಲ್ಡ್ ಅನ್ನೂ ಪರಿಚಯಿಸಿದೆ. ಏಪ್ರಿಲ್ 26ರಿಂದ ಇದು ಮಾರುಕಟ್ಟೆಯಲ್ಲಿ ಲಭ್ಯ. ಇದರ ಜತೆಗೆ ಸ್ಯಾಮ್‍ಸಂಗ್‍ನ ಎಸ್10 ಮೊಬೈಲ್‍ನಲ್ಲಿ 5ಜಿ ವೇರಿಯಂಟ್ ಅನ್ನು ಪ್ರದರ್ಶನಕ್ಕಿಟ್ಟಿತ್ತು.
Galaxy Buds: ಸ್ಯಾಮ್‌ಸಂಗ್‌ನಿಂದ ನೂತನ ಇಯರ್‌ಬಡ್ಸ್‌

ಗ್ಯಾಲಕ್ಸಿ ಬಡ್ ಎನ್ನುವ ಹೆಸರಿನ ವೈರ್‌ಲೆಸ್‌ ಇಯರ್‌ ಬಡ್, ಗ್ಯಾಲಕ್ಸಿ ವಾಚ್ ಆ್ಯಕ್ಟಿವ್, ಫಿಟ್‍ನೆಸ್ ಟ್ರ್ಯಾಕರ್ ಗ್ಯಾಲಕ್ಸಿ ಫಿಟ್ ಇವುಗಳನ್ನೂ ಮಾರುಕಟ್ಟೆಗೆ ಪರಿಚಯಿಸಿದೆ. ಗ್ಯಾಲಕ್ಸಿ ಆ್ಯಕ್ಟಿವ್ ಬೆಲೆ 199 ಡಾಲರ್ ಆಗಿದ್ದರೆ ಗ್ಯಾಲಕ್ಸಿ ಫಿಟ್ ಬೆಲೆ 99 ಡಾಲರ್ ಆಗಿದೆ. ಇವೆರಡರಲ್ಲೂ ಹೃದಯ ಬಡಿತ ಮಾನಿಟರ್, ಒತ್ತಡ ಮತ್ತು ನಿದ್ದೆಯ ಪ್ರಮಾಣವನ್ನು ಟ್ರ್ಯಾಕಿಂಗ್ ಮಾಡುವ ವ್ಯವಸ್ಥೆಯಿದೆ.
Samsung Galaxy Fold: ಮೊದಲ ಮಡಚುವ ಸ್ಮಾರ್ಟ್‌ಫೋನ್


ಇನ್ನು ಗ್ಯಾಲಕ್ಸಿ ಬಡ್ 129 ಡಾಲರ್ ಮೊತ್ತದ್ದಾಗಿದ್ದು, ಮಾರ್ಚ್ 8ರಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಈ ಹಿಂದೆ ಮಾರುಕಟ್ಟೆಗೆ ಬಂದಿರುವ ಇಯರ್‌ ಬಡ್‍ಗಳಿಗೆ ಹೋಲಿಕೆ ಮಾಡಿದರೆ ಇದು ಶೇ. 30 ಹಗುರವಾಗಿರಲಿದೆ.

ಎಸ್ ಸಿರೀಸ್‍ನಲ್ಲಿ ಬಿಡುಗಡೆಯಾಗಿರುವ ಸ್ಮಾರ್ಟ್‌ಫೋನ್‌ಗಳ ಬೆಲೆ 749 ಡಾಲರ್‌ನಿಂದ ಆರಂಭವಾಗಲಿದೆ. ಮಾರ್ಚ್ 8ರಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದ್ದು, ಗ್ಯಾಲಕ್ಸಿ ಎಸ್10 ವೈ-ಫೈ 6ಗೆ ಸಪೋರ್ಟ್ ಮಾಡುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಆಗಿದೆ.

ಗ್ಯಾಲಕ್ಸಿ ಎಸ್ 10 ಪ್ಲಸ್- ವೈರ್‌ಲೆಸ್ ಇಯರ್‌ಬಡ್, ಸ್ಮಾರ್ಟ್‍ವಾಚ್, ಅಷ್ಟೇ ಅಲ್ಲದೆ ಬೇರೆ ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜಿಂಗ್ ಮಾಡುವ ಕೆಪಾಸಿಟಿಯನ್ನೂ ಹೊಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌