ಆ್ಯಪ್ನಗರ

Nokia 5.3: ಬರುತ್ತಿದೆ ನೋಕಿಯಾ ಹೊಸ ಸ್ಮಾರ್ಟ್‌ಫೋನ್

ನೋಕಿಯಾ 5.3 ಫೋನ್ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಹೊಸ ಫೋನ್ ಕುರಿತು ಎಚ್‌ಎಂಡಿ ಗ್ಲೋಬಲ್ ಸಂಸ್ಥೆ ಟ್ವಿಟರ್‌ನಲ್ಲಿ ಸುಳಿವು ನೀಡಿದೆ.

TNN & Agencies 18 Aug 2020, 7:57 pm
ಬೇಸಿಕ್ ಫೋನ್‌ಗಳ ಮೂಲಕ ದೇಶದಲ್ಲಿ ಹವಾ ಸೃಷ್ಟಿಸಿದ್ದ ನೋಕಿಯಾ, ಸ್ಮಾರ್ಟ್‌ಫೋನ್ ಜಗತ್ತಿನ ಸ್ಪರ್ಧೆಯಲ್ಲಿ ಅಷ್ಟೇನು ಹೆಸರು ಗಳಿಸಿಲ್ಲ. ಆದರೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಮಾತ್ರ ಒಂದರ ಹಿಂದೆ ಒಂದರಂತೆ ಬಿಡುಗಡೆ ಮಾಡುತ್ತಿದೆ. ನೋಕಿಯಾ 5.3 ಫೋನ್ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಹೊಸ ಫೋನ್ ಕುರಿತು ಎಚ್‌ಎಂಡಿ ಗ್ಲೋಬಲ್ ಸಂಸ್ಥೆ ಟ್ವಿಟರ್‌ನಲ್ಲಿ ಸುಳಿವು ನೀಡಿದೆ.
Vijaya Karnataka Web Nokia 5.3
Nokia Smartphone


ನೋಕಿಯಾ ಹೊಸ 5.3 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ನಾಲ್ಕು ಕ್ಯಾಮರಾ ಹೊಂದಿರುತ್ತದೆ ಎನ್ನಲಾಗಿದೆ. ಅಲ್ಲದೆ, 13 ಮೆಗಾಪಿಕ್ಸೆಲ್‌ ಪ್ರಮುಖ ಕ್ಯಾಮರಾ, ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 665 SoC ಪ್ರೊಸೆಸರ್ ಕೂಡ ಹೊಂದಿರುತ್ತದೆ ಎನ್ನಲಾಗಿದೆ. ಆದರೆ ಹೊಸ ನೋಕಿಯಾ ಫೋನ್ ಬಿಡುಗಡೆ ಯಾವಾಗ ಎಂದು ಎಚ್‌ಎಂಡಿ ಬಹಿರಂಗಪಡಿಸಿಲ್ಲ.

ನೋಕಿಯಾ 5.3
ನೋಕಿಯಾ 5.3 ಫೋನ್ ಅಂದಾಜು 15,200 ರೂ. ದರ ಹೊಂದಿರುತ್ತದೆ ಎನ್ನಲಾಗಿದೆ.

6.55 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, 4,000mAh ಬ್ಯಾಟರಿ, ಆಂಡ್ರಾಯ್ಡ್ 10 ಓಎಸ್, 64GB ಸ್ಟೋರೇಜ್ ಇರಲಿದೆ. ಅಲ್ಲದೆ, 13+5+2+2 ಮೆಗಾಪಿಕ್ಸೆಲ್ ಕ್ಯಾಮರಾ, 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಕೂಡ ಇರಲಿದೆ.

Realme C12 vs Samsung Galaxy M01: ರಿಯಲ್‌ಮಿ ಅಥವಾ ಸ್ಯಾಮ್‌ಸಂಗ್?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌