ಆ್ಯಪ್ನಗರ

Realme X: ಸೇಲ್‌ ಆರಂಭಕ್ಕೂ ಮೊದಲು ಫೋನ್ ಬುಕ್ ಮಾಡಿ

ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪ್ರವೇಶ ಪಡೆದ ಅಲ್ಪ ಸಮಯದಲ್ಲೇ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ರಿಯಲ್‌ಮಿ, ಹೊಸ ಎಕ್ಸ್ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜಾಗಿದೆ.

Agencies 11 Jul 2019, 10:50 am
Vijaya Karnataka Web RealmeX
ಚೀನಾ ಮೂಲದ ರಿಯಲ್‌ಮಿ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ರಿಯಲ್‌ಮಿ ಎಕ್ಸ್ ಅನ್ನು ಜುಲೈ 15ರ ಸೋಮವಾರ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಆದರೆ ಅದಕ್ಕೂ ಮುಂಚಿತವಾಗಿ ರಿಯಲ್‌ಮಿ ಬ್ಲೈಂಡ್ ಆರ್ಡರ್ ಸೇಲ್ ಅನ್ನು ಆಯೋಜಿಸಿದ್ದು, ಜುಲೈ 11ರ ಗುರುವಾರದಿಂದ ಜುಲೈ 14ರ ಭಾನುವಾರ ಮಧ್ಯರಾತ್ರಿಯವರೆಗೆ ನಡೆಯಲಿದೆ.

ಈ ಅವಧಿಯಲ್ಲಿ ಗ್ರಾಹಕರು ರಿಯಲ್‌ಮಿ ಎಕ್ಸ್ ಸ್ಮಾರ್ಟ್‌ಫೋನ್ ಬುಕ್ ಮಾಡಬಹುದು.

ಬ್ಲೈಂಡ್ ಆರ್ಡರ್ ಮಾಡುವುದು ಹೇಗೆ?
realme.comಗೆ ಹೋಗಿ, ರಿಯಲ್‌ಮಿ ಐಡಿ ಮೂಲಕ ಲಾಗಿನ್ ಆಗಿ.

ನಂತರ ಅಲ್ಲಿ ಕೊಟ್ಟಿರುವ ಸೂಚನೆ ಪಾಲಿಸಿ, 1000 ರೂ. ಠೇವಣಿ ಪಾವತಿಸಿ. ಇದರಿಂದ ರಿಯಲ್‌ಮಿ ಎಕ್ಸ್ ಖರೀದಿಸುವ ಅವಕಾಶ ಖಚಿತವಾಗುತ್ತದೆ. (ಮೊದಲ 2000 ಗ್ರಾಹಕರಿಗೆ ಮಾತ್ರ). ಇಲ್ಲವೆ ಎಕ್ಸ್ ಸ್ಪೈಡರ್ ಮ್ಯಾನ್ ಗಿಫ್ಟ್ ಬಾಕ್ಸ್ (300 ಗ್ರಾಹಕರಿಗೆ ಮಾತ್ರ) ದೊರೆಯಲಿದೆ.

ಠೇವಣಿ ನೀಡಿರುವ ಮೊತ್ತ 1500 ರೂ. ಆಗಲಿದ್ದು, ಉಳಿದ ಮೊತ್ತವನ್ನು 22 ಜುಲೈನಿಂದ 26 ಜುಲೈವರೆಗಿನ ಸೇಲ್ ಸಂದರ್ಭ ಪಾವತಿಸಿದರೆ ಸಾಕು.

ಸೇಲ್ ಅವಧಿಯಲ್ಲಿ ಫೋನ್ ದೊರೆಯದಿದ್ದರೆ, ಅವರು ಪಾವತಿಸಿದ ಮೊತ್ತ ರಿಫಂಡ್ ಆಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌