ಆ್ಯಪ್ನಗರ

Gmail: ಮಾಹಿತಿ ಕದಿಯುವ ಥರ್ಡ್ ಪಾರ್ಟಿ ಆ್ಯಪ್ ನಿರ್ಬಂಧ ಹೇಗೆ?

ಆ್ಯಪ್‌ ಇನ್‌ಸ್ಟಾಲ್ ಮಾಡುವಾಗಲೂ ಇರುವ ಆಯ್ಕೆಯನ್ನು ಪರಿಶೀಲಿಸಿ, ಜಿಮೇಲ್‌ಗೆ ಅಕ್ಸೆಸ್ ಅಗತ್ಯವೇ ಬೇಡವೇ ಎಂದು ನಿರ್ಧರಿಸಿ, ಆಯ್ಕೆಯನ್ನು ಕ್ಲಿಕ್ ಮಾಡಿ.

Gadgets Now 23 Jun 2019, 6:51 pm
ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಕಿರಿಕಿರಿ ಉಂಟುಮಾಡುವ ಸಮಸ್ಯೆಯೆಂದರೆ ಡಾಟಾ ಕಳ್ಳತನ. ಫೋನ್ ತುಂಬಾ ಇರುವ ಥರ್ಡ್ ಪಾರ್ಟಿ ಆ್ಯಪ್‌ಗಳು ಒಂದಿಲ್ಲೊಂದು ಕಾರಣ ನೀಡಿ, ಜಿಮೇಲ್, ಮೆಸೇಜ್ ಮತ್ತು ಕಾಂಟಾಕ್ಟ್ ಎಂದೆಲ್ಲ ಅಕ್ಸೆಸ್ ಪಡೆದುಕೊಳ್ಳುತ್ತವೆ.
Vijaya Karnataka Web gmail


ಆದರೆ ಅದರಿಂದ ನಿಮ್ಮ ಡಾಟಾವನ್ನು ಅಂತಹ ಆ್ಯಪ್‌ಗಳು ಪರಿಶೀಲಿಸಿ ಕದಿಯುವ ಸಂಭವವಿರುತ್ತದೆ. ಹೀಗಾಗಿ ಅವುಗಳಿಗೆ ನಿರ್ಬಂಧ ವಿಧಿಸುವುದು ಸೂಕ್ತ.

ಥರ್ಡ್ ಪಾರ್ಟಿ ಆ್ಯಪ್‌ಗಳಿಗೆ ಜಿಮೇಲ್ ಇನ್‌ಬಾಕ್ಸ್ ನಿಷೇಧಿಸುವುದು ಹೇಗೆ?
ಗೂಗಲ್‌ನ ಸೆಕ್ಯುರಿಟಿ ಚೆಕಪ್‌ ಪೇಜ್‌ಗೆ ಹೋಗಿ.
https://myaccount.google.com/security-checkup/3

ಅಲ್ಲಿ ನೀವು ಜಿಮೇಲ್ ಲಾಗಿನ್ ಆಗಿರುವ ಕುರಿತು ಮಾಹಿತಿಯಿರುತ್ತದೆ.

ಜತೆಗೆ ಯಾವೆಲ್ಲ ಥರ್ಡ್ ಪಾರ್ಟಿ ಆ್ಯಪ್‌ಗೆ ಜಿಮೇಲ್‌ಗೆ ಅನುಮತಿ ನೀಡಲಾಗಿದೆ ಎಂಬ ವಿವರವಿರುತ್ತದೆ.

ನಂತರ ಅಲ್ಲಿ Third-party access ಎಂದಿರುವುದಕ್ಕೆ ಕ್ಲಿಕ್ ಮಾಡಿ. ಅಲ್ಲಿ ಗೂಗಲ್ ಮತ್ತು ಜಿಮೇಲ್‌ಗೆ ಪ್ರವೇಶ ಪಡೆದಿರುವ ಆ್ಯಪ್‌ ವಿವರವಿರುತ್ತದೆ.
ಅಲ್ಲಿ ಪ್ರತಿ ಆ್ಯಪ್‌ ಯಾವ ಅಕ್ಸೆಸ್ ಪಡದಿದೆ ಎಂಬ ಮಾಹಿತಿಯಿರುತ್ತದೆ.

ನಿಮಗೆ ಬೇಡವಾಗಿರುವ ಆ್ಯಪ್‌ ಮೇಲೆ ಕ್ಲಿಕ್ ಮಾಡಿ, ರಿಮೋವ್ ಅಕ್ಸೆಸ್ ಕೊಡಿ. ಈಗ ಅನಗತ್ಯ ಆ್ಯಪ್‌ಗೆ ಜಿಮೇಲ್ ಅಕ್ಸೆಸ್ ತೆಗೆಯಲ್ಪಡುತ್ತದೆ.

ಉಳಿದಂತೆ ಆ್ಯಪ್‌ ಇನ್‌ಸ್ಟಾಲ್ ಮಾಡುವಾಗಲೂ ಇರುವ ಆಯ್ಕೆಯನ್ನು ಪರಿಶೀಲಿಸಿ, ಜಿಮೇಲ್‌ಗೆ ಅಕ್ಸೆಸ್ ಅಗತ್ಯವೇ ಬೇಡವೇ ಎಂದು ನಿರ್ಧರಿಸಿ, ಆಯ್ಕೆಯನ್ನು ಕ್ಲಿಕ್ ಮಾಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌