ಆ್ಯಪ್ನಗರ

ಫೇಸ್‌ಬುಕ್ ಲಾಗಿನ್ ನೋಟಿಫಿಕೇಶನ್ ಪಡೆಯುವುದು ಹೇಗೆ?

ಬಳಕೆದಾರರ ಫೇಸ್‌ಬುಕ್‌ನಲ್ಲಿನ ಕೆಲವೊಂದು ಅಮೂಲ್ಯ ವಿಚಾರಗಳು, ಫೋಟೋ ಮತ್ತಿತರ ವಿವರ ಹ್ಯಾಕರ್‌ಗಳ ಕೈಗೆ ಸಿಕ್ಕರೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ.

Vijaya Karnataka Web 25 Feb 2019, 5:07 pm
ಸಾಮಾಜಿಕ ತಾಣದಲ್ಲಿ ಅತಿ ಹೆಚ್ಚು ಜನರು ಬಳಸುವ ಫೇಸ್‌ಬುಕ್‌ ಹ್ಯಾಕರ್‌ಗಳ ಮೊದಲ ಟಾರ್ಗೆಟ್ ಆಗಿರುತ್ತದೆ.
Vijaya Karnataka Web Facebook-1280


ಬಳಕೆದಾರರ ಫೇಸ್‌ಬುಕ್‌ನಲ್ಲಿನ ಕೆಲವೊಂದು ಅಮೂಲ್ಯ ವಿಚಾರಗಳು, ಫೋಟೋ ಮತ್ತಿತರ ವಿವರ ಹ್ಯಾಕರ್‌ಗಳ ಕೈಗೆ ಸಿಕ್ಕರೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ ಅಂತಹ ಸಮಸ್ಯೆಯಿಂದ ಪಾರಾಗಲು ಲಾಗಿನ್ ನೋಟಿಫಿಕೇಶನ್ ಮತ್ತು ಇತರ ಅಗತ್ಯ ಸುರಕ್ಷಾ ಕ್ರಮ ಕೈಗೊಳ್ಳುವುದು ಅಗತ್ಯ.

ಫೇಸ್‌ಬುಕ್ ಖಾತೆಗೆ ಯಾವುದಾದರೂ ಡಿವೈಸ್‌ನಿಂದ ಲಾಗಿನ್ ಆದರೆ ನೋಟಿಫಿಕೇಶನ್ ಪಡೆದುಕೊಳ್ಳುವುದು ಹೇಗೆ?
ಇಂಟರ್‌ನೆಟ್ ಸಂಪರ್ಕ ಸಹಿತ, ಫೇಸ್‌ಬುಕ್ ಆ್ಯಪ್ ಇಲ್ಲವೆ ವೆಬ್‌ ವರ್ಷನ್, ಜತೆಗೆ ಲಾಗಿನ್ ಐಡಿ, ಪಾಸ್‌ವರ್ಡ್ ಇರಲಿ.

ಫೇಸ್‌ಬುಕ್ ಆ್ಯಪ್‌ನಲ್ಲಿ ಈ ಕ್ರಮ ಅನುಸರಿಸಿ
ಸ್ಮಾರ್ಟ್‌ಫೋನ್‌ನಲ್ಲಿ ಫೇಸ್‌ಬುಕ್ ಆ್ಯಪ್ ತೆರೆಯಿರಿ.
ಬಲಬದಿಯಲ್ಲಿನ ಮೂರು ಅಡ್ಡಗೆರೆಯನ್ನು ಒತ್ತಿ,
ಅದರಲ್ಲಿ ಕೆಳಗೆ ಸೆಟ್ಟಿಂಗ್ಸ್ ಮತ್ತು ಪ್ರೈವೆಸಿ ಆಯ್ದುಕೊಳ್ಳಿ,

ಅದರಲ್ಲಿ ಸೆಕ್ಯುರಿಟಿ ಮತ್ತು ಲಾಗಿನ್ ತೆರೆಯಿರಿ.
ಬಳಿಕ ಸೆಟ್ಟಿಂಗ್ ಅಪ್ ಎಕ್ಸ್‌ಟ್ರಾ ಸೆಕ್ಯುರಿಟಿ ಅಡಿ, ಗೆಟ್ ಅಲರ್ಟ್ ಅಬೌಟ್ ಅನ್‌ರೆಕನೈಸ್ಡ್‌ ಲಾಗಿನ್ಸ್ ಆಯ್ಕೆಮಾಡಿ.
ಅದಾದ ನಂತರ ಕೆಳಗಡೆ ನೋಟಿಫಿಕೇಶನ್, ಮೆಸೆಂಜರ್ ಮತ್ತು ಇ ಮೇಲ್ ಎಂಬ ಚೆಕ್‌ಬಾಕ್ಸ್ ಟಿಕ್‌ ಮಾಡಿ, ಗೆಟ್‌ ನೋಟಿಫಿಕೇಶನ್ ಆಯ್ಕೆ ಮಾಡಿ. ಹೀಗೆ ಮಾಡುವುದರಿಂದ ಲಾಗಿನ್‌ ನೋಟಿಫಿಕೇಶನ್ ಪಡೆಯಬಹುದು.

ಫೇಸ್‌ಬುಕ್ ವೆಬ್‌ಸೈಟ್‌ನಲ್ಲಿ ಈ ರೀತಿ ಮಾಡಿ
ಬ್ರೌಸರ್‌ನಲ್ಲಿ ಫೇಸ್‌ಬುಕ್‌ ವೆಬ್‌ಸೈಟ್ ತೆರೆಯಿರಿ.
ನಂತರ ಬಲಬದಿ, ಮೇಲ್ಗಡೆ ಸೆಟ್ಟಿಂಗ್ಸ್ ಆಯ್ದುಕೊಳ್ಳಿ,
ಅದರಲ್ಲಿ ಸೆಕ್ಯುರಿಟಿ ಮತ್ತು ಲಾಗಿನ್ ತೆರೆಯಿರಿ.

ನಂತರ ಗೆಟ್‌ ಅಲರ್ಟ್‌ ಅಬೌಟ್ ಅನ್‌ರೆಕಗ್ನೈಸ್ಡ್‌ ಲಾಗಿನ್ಸ್ ತೆರೆಯಿರಿ.
ಅದರಲ್ಲಿ ಎಲ್ಲ ಸೆಕ್ಷನ್ ಕ್ಲಿಕ್ ಮಾಡಿ, ಗೆಟ್‌ ನೋಟಿಫಿಕೇಶನ್ ಕೊಡಿ. ಬಳಿಕ ಸೇವ್ ಚೇಂಜಸ್ ಆಯ್ಕೆ ಮಾಡಿ.

ಹೀಗೆ ಮಾಡುವುದರಿಂದ ನಿಮ್ಮ ಹೊರತಾಗಿ ಬೇರಾವುದೇ, ಇನ್ನಿತರ ಸ್ಮಾರ್ಟ್‌ಫೋನ್‌ ಅಥವಾ ವೆಬ್‌ನಿಂದ ನಿಮ್ಮ ಫೇಸ್‌ಬುಕ್‌ ಖಾತೆಗೆ ಲಾಗಿನ್ ಆಗಲು ಯತ್ನಿಸಿದರೆ, ನಿಮಗೆ ನೋಟಿಫಿಕೇಶನ್ ಬರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌