ಆ್ಯಪ್ನಗರ

ಫೋನ್ ಕಳೆದುಹೋದರೆ ವಾಟ್ಸಪ್ ಚಾಟ್ ಸುರಕ್ಷಿತವಾಗಿರಿಸುವುದು ಹೇಗೆ?

ಮುಖ್ಯವಾಗಿ ವಾಟ್ಸಪ್ ಚಾಟ್ ಕೂಡ ಇದ್ದು, ಅದರಲ್ಲಿನ ಚಾಟ್, ಕೆಲವೊಂದು ವೈಯಕ್ತಿಕ ಮಾಹಿತಿ ಮಿಸ್ ಆದರೆ, ಅದರಿಂದ ತೊಂದರೆಯೂ ಎದುರಾಗಬಹುದು.

Vijaya Karnataka Web 4 Mar 2019, 4:27 pm
ಸ್ಮಾರ್ಟ್‌ಫೋನ್ ಕಳೆದುಹೋದರೆ ಅದರಿಂದ ಉಂಟಾಗುವ ಕಿರಿಕಿರಿಯನ್ನು ಅನುಭವಿಸಿದವರಿಗೇ ಗೊತ್ತು. ಸ್ಮಾರ್ಟ್‌ಫೋನ್‌ನಲ್ಲಿದ್ದ ಕಾಂಟಾಕ್ಟ್, ಫೋಟೋಗಳು, ವಿಡಿಯೋ ಎಂದೆಲ್ಲ ಡಿಲೀಟ್ ಆಗುತ್ತವೆ.
Vijaya Karnataka Web Whatsapp


ಆದರೆ ಅದಕ್ಕೂ ಮುಖ್ಯವಾಗಿ ವಾಟ್ಸಪ್ ಚಾಟ್ ಕೂಡ ಇದ್ದು, ಅದರಲ್ಲಿನ ಚಾಟ್, ಕೆಲವೊಂದು ವೈಯಕ್ತಿಕ ಮಾಹಿತಿ ಮಿಸ್ ಆದರೆ, ಅದರಿಂದ ತೊಂದರೆಯೂ ಎದುರಾಗಬಹುದು.

ಸ್ಮಾರ್ಟ್‌ಫೋನ್ ಕಳೆದುಹೋದರೂ, ಚಾಟ್, ಮೆಸೇಜ್‌ಗಳನ್ನು ಸೇಫ್ ಆಗಿ ಇರಿಸುವುದು ಹೇಗೆ? ಇಲ್ಲಿದೆ ಮಾಹಿತಿ.
ಸ್ಮಾರ್ಟ್‌ಫೋನ್ ಕಳೆದ ತಕ್ಷಣ ಸಿಮ್ ಲಾಕ್ ಮಾಡಿಸಿ. ವಾಟ್ಸಪ್ ವೆರಿಫಿಕೇಶನ್‌ಗೆ ಎಸ್‌ಎಂಎಸ್ ಅಥವಾ ಕಾಲ್ ಮುಖ್ಯ, ಹೀಗಾಗಿ ಮೊದಲು ಸಿಮ್ ಬ್ಲಾಕ್ ಮಾಡಿಸಿ.

ಹಳೆಯ ಸಂಖ್ಯೆಯಲ್ಲೇ ಹೊಸ ಸಿಮ್ ಪಡೆಯಿರಿ. ಅದರಲ್ಲಿ ಹೊಸದಾಗಿ ಮತ್ತೆ ವಾಟ್ಸಪ್ ಖಾತೆ ತೆರೆಯಿರಿ.

ವಾಟ್ಸಪ್ ಖಾತೆಯನ್ನು ಒಂದು ಬಾರಿ, ಒಂದು ಸ್ಮಾರ್ಟ್‌ಫೋನ್‌ನಲ್ಲಿ ಮಾತ್ರ ಬಳಸಲು ಸಾಧ್ಯ.

ಹೊಸ ಸಿಮ್ ಬೇಡ ಎಂದಾದಲ್ಲಿ, ವಾಟ್ಸಪ್‌ ಹೆಲ್ಪ್‌ಲೈನ್‌ಗೆ ಇ ಮೇಲ್ ಮಾಡಿ. ಇ ಮೇಲ್ ಐಡಿ: support@whatsapp.com

ಇ ಮೇಲ್‌ನಲ್ಲಿ ಈ ರೀತಿ Lost/Stolen: Please deactivate my account ಎಂದು ಸ್ಪಷ್ಟವಾಗಿ ಬರೆದು, ನಿಮ್ಮ ವಾಟ್ಸಪ್ ಸಂಖ್ಯೆಯನ್ನು ದೇಶದ ಕೋಡ್(+91) ಸಹಿತ ನಮೂದಿಸಿ.

ವಾಟ್ಸಪ್ ಚಾಟ್ ಬ್ಯಾಕ್‌ಅಪ್ ಕೊಟ್ಟಿದ್ದರೆ, ನಿಮ್ಮ ಹಳೆಯ ಖಾತೆಯಲ್ಲಿನ ಚಾಟ್ ವಿವರ ಬ್ಯಾಕ್‌ಅಪ್‌ನಲ್ಲಿ ದೊರೆಯುತ್ತದೆ. ಗೂಗಲ್ ಡ್ರೈವ್, ಐಕ್ಲೌಡ್ ಅಥವಾ ಒನ್‌ಡ್ರೈವ್‌ನಿಂದ ಅದನ್ನು ಪಡೆಯಬಹುದು.

ನಿಮ್ಮ ವಾಟ್ಸಪ್ ಖಾತೆಗೆ ಗೆಳೆಯರು ಕಳುಹಿಸಿದ ಮೆಸೇಜ್ 30 ದಿನದವರೆಗೆ ಉಳಿಯುತ್ತದೆ.

ನಿಮ್ಮ ವಾಟ್ಸಪ್ ಅನ್ನು ರಿ ಆಕ್ಟಿವ್ ಮಾಡಿದರೆ, ಹಳೆಯ ಪೆಂಡಿಂಗ್ ಮೆಸೇಜ್ ಬರುತ್ತವೆ ಮತ್ತು ಗ್ರೂಪ್‌ಗಳು ಹಾಗೆಯೇ ಉಳಿಯುತ್ತವೆ.

30 ದಿನದೊಳಗೆ ವಾಟ್ಸಪ್ ರಿ ಅಕ್ಟಿವೇಟ್ ಮಾಡದಿದ್ದಲ್ಲಿ, ಅದು ಸಂಪೂರ್ಣವಾಗಿ ಡಿಲೀಟ್ ಆಗುತ್ತದೆ.

ಸಿಮ್ ಲಾಕ್ ಆದರೂ, ಫೋನ್ ನೆಟ್‌ವರ್ಕ್ ಇಲ್ಲದಿದ್ದರೂ, ವೈಫೈನಲ್ಲಿ ವಾಟ್ಸಪ್ ಬಳಸಲು ಸಾಧ್ಯ.

ಕಳೆದ ಫೋನ್ ಅನ್ನು ಹುಡುಕಲು ವಾಟ್ಸಪ್‌ನಿಂದ ಸಾಧ್ಯವಾಗುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌