ಆ್ಯಪ್ನಗರ

ಬಹುನಿರೀಕ್ಷಿತ 'Huawei Pocket S' ಫ್ಲಿಪ್ ಸ್ಮಾರ್ಟ್‌ಫೋನ್ ಬಿಡುಗಡೆ!

ಪ್ರಸ್ತುತ ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆಯಾಗಿರುವ 'Huawei Pocket S' ಸ್ಮಾರ್ಟ್‌ಫೋನ್ ಮೂರು ವಿಭಿನ್ನ ಮಾದರಿಗಳಲ್ಲಿ ಬಿಡುಗಡೆಯಾಗಿದೆ. 8GB RAM + 128GB ಸ್ಟೋರೇಜ್ ಮಾದರಿಯು..

Vijaya Karnataka Web 3 Nov 2022, 2:27 pm
ಚೀನಾ ಮೂಲಕ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Huawei ಇಂದು ತನ್ನ ಬಹುನಿರೀಕ್ಷಿತ 'Huawei Pocket S' ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ಪರಿಚಯಿಸಿದೆ. ವಿಶ್ವದಾದ್ಯಂತ ಮಡಚಬಹುದಾದ ಸ್ಮಾರ್ಟ್‌ಫೋನ್‌ಗಳ ಮೇಲೆ ಒಲವು ಹೆಚ್ಚುತ್ತಿರುವುದರಿಂದ ಸ್ಯಾಮ್‌ಸಂಗ್ ಮತ್ತು ಮಮೊಟೊರೊಲಾ ಕಂಪೆನಿಗಳು ಫ್ಲಿಪ್ ಸ್ಮಾರ್ಟ್ಫೋನ್‌ಗಳ ತಯಾರಿಕೆಗೆ ಹೆಚ್ಚು ಒಲವು ತೋರುತ್ತಿದ್ದು, ಇದೀಗ Huawei ಕಂಪೆನಿ ತನ್ನ 'Huawei Pocket S' ಸ್ಮಾರ್ಟ್‌ಫೋನಿನೊಂದಿಗೆ ಫ್ಲಿಪ್ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಹೊಸ 'Huawei Pocket S' ಸ್ಮಾರ್ಟ್‌ಫೋನ್ 6.9-ಇಂಚಿನ ಫ್ಲಿಪ್ OLED ಡಿಸ್‌ಪ್ಲೆಯೊಂದಿಗೆ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊತ್ತು ಬಂದಿದ್ದು, ಇದರ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.
Vijaya Karnataka Web ಬಹುನಿರೀಕ್ಷಿತ Huawei Pocket S ಫ್ಲಿಪ್ ಸ್ಮಾರ್ಟ್‌ಫೋನ್ ಬಿಡುಗಡೆ!


'Huawei Pocket S' ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
  • 6.9-ಇಂಚಿನ ಮಡಿಚಬಹುದಾದ OLED ಮುಖ್ಯ ಡಿಸ್‌ಪ್ಲೇ ಹಾಗೂ 1.04-ಇಂಚಿನ OLED ಸಣ್ಣ ಬಾಹ್ಯ ಡಿಸ್‌ಪ್ಲೇಗಳನ್ನು ನೀಡಲಾಗಿದೆ.
  • ಇದರ ಮುಖ್ಯ ಡಿಸ್‌ಪ್ಲೇಯು 2,790 x 1,188 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 120Hz ರಿಫ್ರೆಶ್ ರೇಟ್ ಸಾಮರ್ಥ್ಯವನ್ನು ಹೊಂದಿದೆ.
  • ಸಣ್ಣ ಬಾಹ್ಯ ಡಿಸ್‌ಪ್ಲೇಯು 340 x 340 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ನೋಟಿಫಿಕೇಷನ್ ಮತ್ತು ಟೈಮ್ ವಿವರಗಳನ್ನು ತೋರಿಸಲಿದೆ.
  • ಸ್ನಾಪ್‌ಡ್ರಾಗನ್ 778G ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು ಔಟ್ ಆಫ್ ದಿ ಬಾಕ್ಸ್ ಹಾರ್ಮನಿ OS 3 ನಲ್ಲಿ ಕಾರ್ಯನಿರ್ವಹಿಸುತ್ತದೆ.
  • 40-ಮೆಗಾಪಿಕ್ಸೆಲ್ ಮುಖ್ಯ ಸಂವೇದಕ ಮತ್ತು 13-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಆಂಗಲ್ ಲೆನ್ಸ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ.
  • Huawei Pocket S ಸ್ಮಾರ್ಟ್‌ಫೋನಿನಲ್ಲಿ 10.7-ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾವನ್ನು ನೀಡಲಾಗಿದೆ.
  • Huawei Pocket S ಸ್ಮಾರ್ಟ್‌ಫೋನಿನಲ್ಲಿ 40W ಚಾರ್ಜಿಂಗ್‌ಗೆ ಬೆಂಬಲವಿರುವ 4,000mAh ಬ್ಯಾಟರಿ ಇದೆ.
  • ಈ ಸ್ಮಾರ್ಟ್‌ಫೋನಿನಲ್ಲಿ ವಿಶೇಷವಾಗಿ ಫ್ಲೆಕ್ಸಿಬಲ್ ಗ್ರಾಫೈಟ್ ಹೀಟ್ ಡಿಸ್ಪೆನ್ಸನ್ ಸಿಸ್ಟಮ್ ತರಲಾಗಿದೆ ಎಂದು ಕಂಪೆನಿ ತಿಳಿಸಿದೆ.
'Huawei Pocket S' ಸ್ಮಾರ್ಟ್‌ಫೋನಿನ ಬೆಲೆ ಎಷ್ಟು?
ಪ್ರಸ್ತುತ ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆಯಾಗಿರುವ 'Huawei Pocket S' ಸ್ಮಾರ್ಟ್‌ಫೋನ್ ಮೂರು ವಿಭಿನ್ನ ಮಾದರಿಗಳಲ್ಲಿ ಬಿಡುಗಡೆಯಾಗಿದೆ. 8GB RAM + 128GB ಸ್ಟೋರೇಜ್ ಮಾದರಿಯು CNY 5,988 (ಸರಿಸುಮಾರು ರೂ. 67,900) ಬೆಲೆಯಲ್ಲಿ ಮತ್ತು 8GB RAM + 256GB ಸ್ಟೋರೇಜ್ ಮಾದರಿಯು CNY 6,488 (ಸುಮಾರು ರೂ. 73,600) ಬೆಲೆಯಲ್ಲಿ ಮತ್ತು 8GB RAM + 512GB ಸ್ಟೋರೇಜ್ ಮಾದರಿಯು CNY 7,488 (ಸುಮಾರು ರೂ. 84,900) ಬೆಲೆಯಲ್ಲಿ ಇದೇ ನವೆಂಬರ್ 10 ರಿಂದ ಮಾರಾಟವಾಗಲಿವೆ. ಗ್ರಾಹಕರು ಫ್ರಾಸ್ಟ್ ಸಿಲ್ವರ್, ಐಸ್ ಕ್ರಿಸ್ಟಲ್ ಬ್ಲೂ, ಮಿಂಟ್ ಗ್ರೀನ್, ಅಬ್ಸಿಡಿಯನ್ ಬ್ಲ್ಯಾಕ್, ಪ್ರಿಮ್ರೋಸ್ ಗೋಲ್ಡ್ ಮತ್ತು ಸಕುರಾ ಪಿಂಕ್ ಬಣ್ಣದ ರೂಪಾಂತರಗಳಲ್ಲಿ Huawei Pocket S' ಸ್ಮಾರ್ಟ್‌ಫೋನನ್ನು ಖರೀದಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌