ಆ್ಯಪ್ನಗರ

Digital Census: 2021ರಲ್ಲಿ ಪೇಪರ್‌ರಹಿತ ಜನಗಣತಿ

ಡಿಜಿಟಲ್ ಇಂಡಿಯಾ ಪರಿಕಲ್ಪನೆಯಡಿ ವಿವಿಧ ಸೇವೆಗಳು ಮತ್ತು ಅವಶ್ಯಕತೆಯನ್ನು ದೇಶದಲ್ಲಿ ಪರಿಚಯಿಸಲಾಗಿದೆ. ಇದರ ಮುಂದುವರಿದ ಅಂಗವಾಗಿ ಡಿಜಿಟಲ್ ಜನಗಣತಿ ನಡೆಸಲು ಸರಕಾರ ಮುಂದಾಗಿದೆ.

Times Now 24 Sep 2019, 12:44 pm
ದೇಶದಲ್ಲಿ ಡಿಜಿಟಲ್ ಇಂಡಿಯಾ ಕ್ರಾಂತಿಯ ಬಳಿಕ ವಿವಿಧ ಸೇವೆಗಳು ನಗದು ರಹಿತ ಮತ್ತು ಕಾಗದ ರಹಿತವಾಗಿ ರೂಪುಗೊಳ್ಳುತ್ತಿದ್ದು, ಮುಂದೆ 2021ರ ಜನಗಣತಿಯನ್ನು ಆ್ಯಪ್‌ ಮೂಲಕ ಡಿಜಿಟಲ್ ಸೆನ್ಸಸ್ ಆಗಿ ಪರಿವರ್ತಿಸಲು ಸರಕಾರ ಮುಂದಾಗಿದೆ.
Vijaya Karnataka Web Digital


ಕಾಗದ ರಹಿತ ಮತ್ತು ಸಮಸ್ಯೆಯಿಲ್ಲದ ಸೇವೆಗಳನ್ನು ಸರಕಾರ ಪರಿಚಯಿಸುತ್ತಿದ್ದು, ಅದರಲ್ಲಿ ವಿಶೇಷ ಆ್ಯಪ್‌ ರೂಪಿಸಿ, ಅದರ ಮೂಲಕ ಮುಂದಿನ 2021ರ ಗಣತಿಯನ್ನು ಸಂಪೂರ್ಣವಾಗಿ ಡಿಜಿಟಲ್ ಆಗಿ ನಡೆಸಲು ಕೇಂದ್ರ ಚಿಂತನೆ ನಡೆಸಿದೆ.

ಇದರಿಂದ ಸಾಂಪ್ರದಾಯಿಕವಾಗಿ ನಡೆಸುತ್ತಿದ್ದ ಹಳೆಯ ಮಾದರಿಯ ಜನಗಣತಿ ವ್ಯವಸ್ಥೆ ಬದಲಿಗೆ, ನೂತನ ಮತ್ತು ಅತ್ಯಾಧುನಿಕ ಆಯ್ಕೆಗಳುಳ್ಳ, ಸರಳ ಡಿಜಿಟಲ್ ಗಣತಿ ಸೇವೆ ದೊರೆಯಲಿದೆ.

ರಾಷ್ಟ್ರೀಯ ಪೌರತ್ವ ನೋಂದಣಿಯ ಸಹಯೋಗದಲ್ಲಿ ಸರಕಾರ ಡಿಜಿಟಲ್ ಗಣತಿ ನಡೆಸಲಿದ್ದು, ಅದಕ್ಕಾಗಿ ಪ್ರತ್ಯೇಕ ಆ್ಯಪ್‌ ರೂಪಿಸಲಿದೆ. ಇದರಿಂದ ಜನಗಣತಿಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿ ಮೇಲಿನ ಹೊರೆಯೂ ಕಡಿಮೆಯಾಗಲಿದೆ.

Malware Attack: ದೇಶದ ಸೈಬರ್ ಭದ್ರತೆಗೆ ಸವಾಲು

ಅದರ ಜತೆಗೆ ಏಕರೂಪದ ಕಾರ್ಡ್ ಅನ್ನು ಕೂಡ ದೇಶದಲ್ಲಿ ಜಾರಿಗೆ ತರಲು ಸರಕಾರ ಮುಂದಾಗಿದ್ದು, ಎಲ್ಲ ವಿಧದ ಸೇವೆಗಳು ಮತ್ತು ಸರಕಾರಿ ಅವಶ್ಯಕತೆಗಳಿಗೆ ಬಹೂಪಯೋಗಿ ಸ್ಮಾರ್ಟ್‌ ಕಾರ್ಡ್‌ ತರುವ ಯೋಜನೆಯನ್ನು ಸರಕಾರ ಹೊಂದಿದೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ತಂತ್ರಜ್ಞಾನದ ಸಹಯೋಗದಲ್ಲಿ ಜನಗಣತಿ ಪ್ರಕ್ರಿಯೆಯನ್ನು ಸರಳಗೊಳಿಸುವುದು ಮತ್ತು ವರ್ಗೀಕರಣ, ಅಂತಿಮ ವರದಿ ಸಿದ್ಧಪಡಿಸುವುದಕ್ಕೆ ಆ್ಯಪ್‌ ಮತ್ತು ವಿಶೇಷ ಸಾಫ್ಟ್‌ವೇರ್ ನೆರವಾಗಲಿದೆ. ಇದು ಡಿಜಿಟಲ್ ಗಣತಿಯ ಉದ್ದೇಶವಾಗಿದೆ.

ಬರಲಿದೆ ಎಲ್ಲಕ್ಕೂ ಒಂದೇ ಸ್ಮಾರ್ಟ್ ಕಾರ್ಡ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌