ಆ್ಯಪ್ನಗರ

Wipro CEO: ವಿಪ್ರೊ ಸಿಇಒ ಸ್ಥಾನಕ್ಕೆ ಕ್ಯಾಪ್‌ಜೆಮಿನಿಯ ಸಿಒಒ

ರಿಷಾದ್‌ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ವಿಪ್ರೊ ಕಂಪನಿಯಲ್ಲಿ ಪ್ರಗತಿಯ ಹೊಸ ಅಧ್ಯಾಯ ಸೃಷ್ಟಿಸಿ, ಷೇರುದಾರರಿಗೆ ಉತ್ತಮ ನಾಳೆಗಳನ್ನು ರೂಪಿಸಲು ಯತ್ನಿಸಲಿದ್ದೇನೆ ಎಂದು ಡೆಲಾಪೋರ್ಟ್‌ ಹೇಳಿದ್ದಾರೆ.

THE ECONOMIC TIMES 30 May 2020, 9:59 am
ಕ್ಯಾಪ್‌ಜೆಮಿನಿಯ ಸಿಒಒ ಥಿಯೆರ್ರಿ ಡೆಲಾಪೋರ್ಟ್‌ ಅವರು ಈಗ ವಿಪ್ರೊ ಪ್ರವೇಶಿಸಿದ್ದಾರೆ. ದೇಶದ ಮೂರನೇ ಸಾಫ್ಟ್‌ವೇರ್‌ ಸೇವಾ ರಫ್ತು ಸಂಸ್ಥೆಯಾಗಿರುವ ವಿಪ್ರೊದ ಸಿಇಒ ಮತ್ತು ಎಂಡಿ ಸ್ಥಾನಕ್ಕೆ ಅವರನ್ನು ನೇಮಕ ಮಾಡಲಾಗಿದೆ.
Vijaya Karnataka Web Wipro CEO
Wipro New CEO


ಜುಲೈ 6ರಿಂದ ಅವರ ಆಡಳಿತಾವಧಿ ಆರಂಭವಾಗಲಿದೆ. ಹಾಲಿ ಸಿಇಒ ಅಬಿದಾಲಿ ಜೆಡ್‌ ನೀಮೂಚವಾಲಾ ಅವರು ತಮ್ಮ ಹುದ್ದೆ ತೊರೆಯಲು ಜನವರಿಯಲ್ಲಿಯೇ ನಿರ್ಧರಿಸಿದ್ದರು. ಜೂನ್‌ 1ಕ್ಕೆ ಅವರ ಅಧಿಕಾರಾವಧಿ ಮುಗಿಯುತ್ತಿದೆ. ಕಂಪನಿಯ ಅಧ್ಯಕ್ಷ ರಿಷಾದ್‌ ಪ್ರೇಮ್‌ಜಿ ಅವರು ಜುಲೈ 5ರವರೆಗೆ ಕಂಪನಿಯ ದೈನಂದಿನ ವಹಿವಾಟುಗಳನ್ನು ಗಮನಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ರಿಷಾದ್‌ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ವಿಪ್ರೊ ಕಂಪನಿಯಲ್ಲಿ ಪ್ರಗತಿಯ ಹೊಸ ಅಧ್ಯಾಯ ಸೃಷ್ಟಿಸಿ, ಷೇರುದಾರರಿಗೆ ಉತ್ತಮ ನಾಳೆಗಳನ್ನು ರೂಪಿಸಲು ಯತ್ನಿಸಲಿದ್ದೇನೆ ಎಂದು ಡೆಲಾಪೋರ್ಟ್‌ ಹೇಳಿದ್ದಾರೆ.

ಪ್ಯಾರಿಸ್‌ ಮೂಲದ ಡೆಲಾಪೋರ್ಟ್‌ ಅವರು ಕ್ಯಾಪ್‌ಜೆಮಿನಿಯಲ್ಲಿ25 ವರ್ಷ ಸೇವೆ ಸಲ್ಲಿಸಿದವರು. 1992ರಲ್ಲಿ ವೃತ್ತಿ ಆರಂಭಿಸಿದ ಅವರು ಪ್ಯಾರಿಸ್‌ ಮತ್ತು ಲಂಡನ್‌ನಲ್ಲಿಸೀನಿಯರ್‌ ಆಡಿಟರ್‌ ಆಗಿ ಕೆಲಸ ಮಾಡಿದವರು. ಲಾಭರಹಿತವಾದ 'ಲೈಫ್‌ ಪ್ರಾಜೆಕ್ಟ್ 4 ಯೂತ್‌'ನ ಸಹ ಸಂಸ್ಥಾಪಕರು.

TikTok Rating: ರಿವ್ಯೂ ಅಳಿಸಿ ರಾತ್ರೋರಾತ್ರಿ ಟಿಕ್‌ಟಾಕ್ ರೇಟಿಂಗ್ ಏರಿಸಿದ ಗೂಗಲ್!

ಇನ್ಫಿ ಮಾದರಿ ಅನುಸರಿಸಿದ ವಿಪ್ರೊ
ಇನ್ಫೋಸಿಸ್‌ ಸಿಇಒ ಮತ್ತು ಎಂಡಿ ಸಲೀಲ್‌ ಪರೇಖ್‌ ಅವರೂ ಕ್ಯಾಪ್‌ಜೆಮಿನಿಯಲ್ಲಿಕೆಲಸ ಮಾಡಿದವರೇ ಆಗಿದ್ದಾರೆ. ಆ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿಯಲ್ಲಿದ್ದ ಪರೇಖ್‌, ಇನ್ಫೋಸಿಸ್‌ ಸಿಇಒ ಆಗಿ 2018ರಲ್ಲಿನೇಮಕಗೊಂಡಿದ್ದರು. ಇದೇ ಮಾದರಿಯನ್ನು ವಿಪ್ರೊ ಈಗ ಅನುಸರಿಸಿದೆ.

TikTok vs Mitron: ಎರಡೂ ಆ್ಯಪ್‌ಗಳ ವಿಶೇಷತೆಯೇನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌