ಆ್ಯಪ್ನಗರ

TikTok: ಮಾನಸಿಕ ಆರೋಗ್ಯಕ್ಕೆ ಟಿಕ್‍ಟಾಕ್ ಟಿಪ್ಸ್

ಈ ಟಿಕ್‍ಟಾಕ್ ವಿಡಿಯೋಗಳಲ್ಲಿ ಭಾರತದಾದ್ಯಂತ ಇರುವ ಖ್ಯಾತ ಮಾನಸಿಕ ತಜ್ಞ ವೈದ್ಯರು ನಾಗರಿಕರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

Vijaya Karnataka Web 7 May 2020, 11:10 am
ವಿಶ್ವದಾದ್ಯಂತ ಆತಂಕ ಸೃಷ್ಟಿ ಮಾಡಿರುವ ಮಹಾಮಾರಿ ಕೊರೋನಾವೈರಸ್ ಅತಿ ದೊಡ್ಡ ಮಾನಸಿಕ ಕ್ಷೋಭೆಯನ್ನು ತಂದೊಡ್ಡಿದೆ. ವಿಶ್ವದ ಆರ್ಥಿಕ ವಲಯದ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಉಂಟಾಗಲು ಕಾರಣವಾಗಿದೆ. ಮನೆಯಲ್ಲೇ ಕ್ವಾರಂಟೈನ್‍ಗೆ ಒಳಗಾಗಿರುವ ಜನರಲ್ಲಿ ಸಾಕಷ್ಟು ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಿದೆ.
Vijaya Karnataka Web TikTok
TikTok App


ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು ಬಿಡುಗಡೆ ಮಾಡಿರುವ ವರದಿಯಲ್ಲಿ ಕೋವಿಡ್-19 ಸಂದರ್ಭದಲ್ಲಿ ಉಂಟಾಗಿರುವ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನಹರಿಸುವಂತೆ ವಿಶ್ವದ ದೇಶಗಳಿಗೆ ಸಲಹೆ ನೀಡಿದೆ.

ಈ ಹಿನ್ನೆಲೆಯಲ್ಲಿ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಭಾರತೀಯ ನಾಗರಿಕರಿಗೆ ನೆರವಾಗುವ ದೃಷ್ಟಿಯಿಂದ ಮಾನಸಿಕ ರೋಗಗಗಳ ತಜ್ಞರ ಸಂಸ್ಥೆಯಾಗಿರುವ ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿ, ಈ ಅನಿಶ್ಚಿತತೆಯ ಸಂದರ್ಭದಲ್ಲಿ ಮಾನಸಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಂಡು ಹೋಗಬೇಕು ಎಂಬುದರ ಬಗ್ಗೆ ಟಿಪ್ಸ್ ಅನ್ನು ಶೇರ್ ಮಾಡಲು ಟಿಕ್‍ಟಾಕ್ ಅನ್ನು ಬಳಕೆ ಮಾಡುತ್ತಿದೆ.

ಈ ಟಿಕ್‍ಟಾಕ್ ವಿಡಿಯೋಗಳಲ್ಲಿ ಭಾರತದಾದ್ಯಂತ ಇರುವ ಖ್ಯಾತ ಮಾನಸಿಕ ತಜ್ಞ ವೈದ್ಯರು ನಾಗರಿಕರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

Smartphone Mirroring: ಟಿವಿ ಪರದೆಯಲ್ಲಿ ಮೊಬೈಲ್ ಫೋಟೊ, ವಿಡಿಯೋ ವೀಕ್ಷಣೆ ಹೇಗೆ?

ದೈಹಿಕ ಕ್ಷೇಮವನ್ನು ಕಾಪಾಡಿಕೊಳ್ಳುವ ಬಗೆ ಹೇಗೆ, ಪ್ರೇರಣೆಯಿಂದ ದೈನಂದಿನ ಜೀವನ ಸಾಗಿಸುವುದು, ಆತಂಕವನ್ನು ದೂರ ಮಾಡುವುದು ಹೇಗೆ ಮತ್ತು ಧನಾತ್ಮಕವಾದ ರೀತಿಯಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಹತ್ತು ಹಲವಾರು ಬಗೆಯ ಟಿಪ್ಸ್ ನೀಡಿದ್ದಾರೆ.

Covid 19: ಆಂಟಿವೈರಲ್ ಡ್ರಗ್ ಮತ್ತು ಇಮ್ಯುನೋಕಾಂಪ್ರಮೈಸ್ಡ್ ಎಂದರೇನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌