ಆ್ಯಪ್ನಗರ

WhatsApp: ಹೊಸ ಹೆಸರಿನಲ್ಲಿ ಬರುತ್ತಿದೆ..

ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಪ್ ಮತ್ತು ಇನ್‌ಸ್ಟಾಗ್ರಾಂ ಹೆಸರಿನಲ್ಲಿ ಸಣ್ಣ ಬದಲಾವಣೆ ಮಾಡಲು ಫೇಸ್‌ಬುಕ್ ಕಂಪನಿ ಮುಂದಾಗಿದೆ.

Gadgets Now 19 Aug 2019, 6:46 pm
ಅತಿ ಹೆಚ್ಚು ಜನರು ಬಳಸುತ್ತಿರುವ ವಾಟ್ಸಪ್ ಮತ್ತು ಇನ್‌ಸ್ಟಾಗ್ರಾಂ ಆ್ಯಪ್ ಹೆಸರನ್ನು ಬದಲಿಸಲು ಅದರ ಒಡೆತನ ಹೊಂದಿರುವ ಫೇಸ್‌ಬುಕ್ ಕಂಪನಿ ಮುಂದಾಗಿದೆ.
Vijaya Karnataka Web Whatsapp


ವಾಟ್ಸಪ್ ಮತ್ತು ಇನ್‌ಸ್ಟಾಗ್ರಾಂ ಹೊಸ ಬೀಟಾ ಆವೃತ್ತಿ ಈಗಾಗಲೇ ಬಿಡುಗಡೆಯಾಗಿದ್ದು, ಅದರಲ್ಲಿ ಹೊಸ ಹೆಸರು ಕಾಣಿಸಿಕೊಂಡಿದೆ.

ವಾಟ್ಸಪ್ ಮತ್ತು ಇನ್‌ಸ್ಟಾಗ್ರಾಂ ಆ್ಯಪ್‌ಗಳ ಒಡೆತನ ಫೇಸ್‌ಬುಕ್‌ನದ್ದಾಗಿದೆ. ಹೀಗಾಗಿ ಹೊಸ ವಾಟ್ಸಪ್ ಮತ್ತು ಇನ್‌ಸ್ಟಾಗ್ರಾಂ ಆವೃತ್ತಿಯಲ್ಲಿ ಆ್ಯಪ್ ಹೆಸರು ಕೊಂಚ ಬದಲಾಗಿದ್ದು, ವಾಟ್ಸಪ್ ಫ್ರಮ್ ಫೇಸ್‌ಬುಕ್ ಎಂದಿದೆ. ವಾಟ್ಸಪ್‌ನ ಆಂಡ್ರಾಯ್ಡ್ ಬೀಟಾ ಆವೃತ್ತಿ 2.19.228 ಬಳಕೆದಾರರಿಗೆ ಹೊಸ ಬದಲಾವಣೆ ಗೋಚರಿಸಿದೆ.

ಜತೆಗೆ ಇನ್‌ಸ್ಟಾಗ್ರಾಂ ಹೆಸರು ಕೂಡ ಬದಲಾಗಿದ್ದು, ಇನ್‌ಸ್ಟಾಗ್ರಾಂ ಫ್ರಮ್ ಫೇಸ್‌ಬುಕ್ ಎಂದು ಹೇಳಿದೆ. ಈ ಎರಡೂ ಉತ್ಪನ್ನಗಳು ಫೇಸ್‌ಬುಕ್ ಒಡೆತನದಲ್ಲಿವೆ ಎನ್ನುವುದನ್ನು ಗ್ರಾಹಕರಿಗೆ ಮನದಟ್ಟು ಮಾಡಿಕೊಳ್ಳಲು ಹೆಸರು ಬದಲಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಜತೆಗೆ ಮುಂದಿನ ಹಂತದಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತು ವಾಟ್ಸಪ್ ಎಲ್ಲವನ್ನೂ ಒಳಗೊಂಡ ಒಂದೇ ಆ್ಯಪ್ ರೂಪಿಸಲು ಫೇಸ್‌ಬುಕ್ ಮುಂದಾಗಿದ್ದು, ಅದಕ್ಕೆ ಪೂರ್ವ ತಯಾರಿ ಎನ್ನುವಂತೆ ಹಲವು ಅಪ್‌ಡೇಟ್ ಮತ್ತು ಬದಲಾವಣೆಯನ್ನು ಮಾಡಲಾಗುತ್ತಿದೆ.

ಅಲ್ಲದೆ ಪ್ರಸ್ತುತ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಸ್ಟೋರೀಸ್‌ನಲ್ಲಿ ತೋರಿಸುತ್ತಿರುವಂತೆ, ವಾಟ್ಸಪ್‌ನಲ್ಲೂ ಮುಂದಿನ ವರ್ಷದಿಂದ ಜಾಹೀರಾತು ಬರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌