ಆ್ಯಪ್ನಗರ

Premium Firefox Browser: ಮೊಝಿಲ್ಲಾ ಪ್ರೀಮಿಯಂ ಬ್ರೌಸರ್

ಇಂಟರ್‌ನೆಟ್ ಹುಡುಕಾಟದಲ್ಲಿ ಬ್ರೌಸರ್‌ನಲ್ಲಿ ಅಸಂಖ್ಯಾತ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಕೆಲವೊಂದು ಪಾಪ್‌ ಅಪ್ ಜಾಹೀರಾತುಗಳು ಪುಟದ ಪೂರ್ತಿ ಆವರಿಸಿಕೊಂಡು ತೊಂದರೆ ಕೊಡುತ್ತವೆ.

Agencies 9 Jul 2019, 12:01 pm
ಇಂಟರ್‌ನೆಟ್‌ನಲ್ಲಿ ಬ್ರೌಸಿಂಗ್ ಮಾಡುವಾಗ ಬರುವ ಜಾಹೀರಾತುಗಳನ್ನು ನೋಡುವುದು ಬಹುತೇಕರಿಗೆ ಇಷ್ಟವಾಗುವುದಿಲ್ಲ. ಜತೆಗೆ ಹಲವು ವೆಬ್‌ಸೈಟ್‌ಗಳು ನಮ್ಮ ಆಸಕ್ತಿ, ಯಾವ ವೆಬ್‌ಸೈಟ್ ಹುಡುಕಾಡುತ್ತೇವೆ ಎನ್ನುವುದನ್ನು ಟ್ರ್ಯಾಕ್ ಮಾಡಿ, ಅದನ್ನು ಜಾಹೀರಾತು ಸಂಸ್ಥೆಗಳಿಗೆ ಮಾರಾಟ ಮಾಡುತ್ತವೆ. ಆದರೆ ಇಂತಹ ಸಮಸ್ಯೆಯಿಂದ ಮುಕ್ತರಾಗಲು ಮೊಝಿಲ್ಲಾ ಪ್ರೀಮಿಯಂ ಬ್ರೌಸರ್ ಹೊರತರುವುದಾಗಿ ಹೇಳಿದೆ.
Vijaya Karnataka Web Mozilla


ಸಂಪೂರ್ಣ ಜಾಹೀರಾತುರಹಿತ ಬ್ರೌಸರ್ ಇದಾಗಿದ್ದು, ತಿಂಗಳಿಗೆ 5 ಡಾಲರ್ ಶುಲ್ಕ ಪಾವತಿಸಬೇಕಾಗುತ್ತದೆ.
ಮೊಬೈಲ್ ಮತ್ತು ಡೆಸ್ಕ್‌ಟಾಪ್ ಎರಡೂ ಆವೃತ್ತಿಯಲ್ಲಿ ಈ ಸೌಲಭ್ಯ ದೊರೆಯಲಿದೆ. ಪ್ರೀಮಿಯಂ ಬ್ರೌಸರ್ ಆಯ್ಕೆ ಬೇಕಾದಲ್ಲಿ ಮಾತ್ರ ಪಾವತಿ ಮಾಡಿ ಬಳಸಿಕೊಳ್ಳಬಹುದು, ಉಳಿದಂತೆ ಸಾಧಾರಣ ಬ್ರೌಸರ್ ಆಯ್ಕೆಯೂ ಇರಲಿದೆ.

ಪ್ರೀಮಿಯಂ ಆವೃತ್ತಿಗೆ ಜಾಹೀರಾತುಗಳನ್ನು ತಡೆಯುವ ಆಯ್ಕೆಯಿದ್ದು, ಬಳಕೆದಾರರಿಗೆ ಅನುಕೂಲವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌