ಆ್ಯಪ್ನಗರ

ಐಪೋನ್ ಬಳಕೆದಾರರಿಗೆ ನೂತನ iOS 15 ಅಪ್‌ಡೇಟ್ ರೋಲ್‌ಔಟ್!..ಫುಲ್ ಡೀಟೇಲ್ಸ್!

ಇತ್ತೀಚಿಗಷ್ಟೇ ಐಫೋನ್ 13 ಸಿರೀಸ್ ಫೋನ್‌ಗಳು ಮತ್ತು ಆಪಲ್​ ವಾಚ್​ ಸಿರೀಸ್​-7 ಮತ್ತು ಹೊಸ ಐಪ್ಯಾಡ್ ಗಳನ್ನು ಬಿಡುಗಡೆ ಮಾಡಿರುವ ಆಪಲ್ ಸಂಸ್ಥೆ ಇದೀಗ ತನ್ನ ಪ್ರಸ್ತುತ ಐಪೋನ್ ಬಳಕೆದಾರರಿಗೆ ಹೊಸ ಅಪ್​ಡೇಟ್ ನೀಡಲು ಮುಂದಾಗಿದೆ. ಆಪಲ್ ತನ್ನ ಹೊಸ​ ಆಪರೇಟಿಂಗ್ ಸಿಸ್ಟಂ 15 (iOS 15) ಅನ್ನು ರೋಲ್‌ಔಟ್ ಮಾಡಿದ್ದು, ಐಫೋನ್ ಮತ್ತು ಐಪ್ಯಾಡ್ ಬಳಕೆದಾರರು ಹೊಸ ಆವೃತ್ತಿಯ ಆಪರೇಟಿಂಗ್ ಸಿಸ್ಟಂ ಅನ್ನು ಇನ್​ಸ್ಟಾಲ್ ಮಾಡುವ ಮೂಲಕ ಮತ್ತಷ್ಟು ಹೊಸ ಆಯ್ಕೆಗಳನ್ನು ಪಡೆಯಬಹುದಾಗಿದೆ.

Vijaya Karnataka Web 21 Sep 2021, 2:28 pm
ಇತ್ತೀಚಿಗಷ್ಟೇ ಐಫೋನ್ 13 ಸಿರೀಸ್ ಫೋನ್‌ಗಳು ಮತ್ತು ಆಪಲ್ ವಾಚ್ ಸಿರೀಸ್-7 ಮತ್ತು ಹೊಸ ಐಪ್ಯಾಡ್ ಗಳನ್ನು ಬಿಡುಗಡೆ ಮಾಡಿರುವ ಆಪಲ್ ಸಂಸ್ಥೆ ಇದೀಗ ತನ್ನ ಪ್ರಸ್ತುತ ಐಪೋನ್ ಬಳಕೆದಾರರಿಗೆ ಹೊಸ ಅಪ್ಡೇಟ್ ನೀಡಲು ಮುಂದಾಗಿದೆ. ಆಪಲ್ ತನ್ನ ಹೊಸ ಆಪರೇಟಿಂಗ್ ಸಿಸ್ಟಂ 15 (iOS 15) ಅನ್ನು ರೋಲ್‌ಔಟ್ ಮಾಡಿದ್ದು, ಐಫೋನ್ ಮತ್ತು ಐಪ್ಯಾಡ್ ಬಳಕೆದಾರರು ಹೊಸ ಆವೃತ್ತಿಯ ಆಪರೇಟಿಂಗ್ ಸಿಸ್ಟಂ ಅನ್ನು ಇನ್ಸ್ಟಾಲ್ ಮಾಡುವ ಮೂಲಕ ಮತ್ತಷ್ಟು ಹೊಸ ಆಯ್ಕೆಗಳನ್ನು ಪಡೆಯಬಹುದಾಗಿದೆ. ನೂತನ ಅಪ್‌ಡೇಟ್ ಈಗಲೇ ಡೌನ್‌ಲೋಡ್‌ಗೆ ಲಭ್ಯವಿದೆ.
Vijaya Karnataka Web ios-15


ನೆನ್ನೆ ರಾತ್ರಿ ರಾತ್ರಿ 10.30ರಿಂದ ಲಭ್ಯವಿರುವ ನೂತನ iOS 15 ಆಪರೇಟಿಂಗ್ ಸಿಸ್ಟಂ ಮೂಲಕ ಆಪಲ್ ಬಳಕೆದಾರರು ಇನ್ಮುಂದೆ ಸಫಾರಿ ಬ್ರೌಸರ್ನಲ್ಲಿ ಅಗತ್ಯವಾದ ರಿಫ್ರೆಶ್‌ ಆಯ್ಕೆಗಳನ್ನು ಹಾಗೂ ಹೊಸ ಪ್ರೈವೆಸಿ ಪ್ರೊಟೆಕ್ಷನ್, HTTPS ಅಪ್‌ಗ್ರೇಡ್ ಪಡೆಯಲಿದ್ದಾರೆ. ಐಒಎಸ್ 15 ರ ಪ್ರಮುಖ ವೈಶಿಷ್ಟ್ಯಗಳಲ್ಲಿ ಫೇಸ್‌ಟೈಮ್‌ನಲ್ಲಿ ಹೊಸ ಶೇರ್‌ಪ್ಲೇ ಫೀಚರ್ ಇರಲಿದೆ. ಬಳಕೆದಾರರು ನೈಜ ಸಮಯದಲ್ಲಿ ಒಟ್ಟಿಗೆ ಕೇಳಲು ಅಥವಾ ವೀಕ್ಷಿಸಲು ಫೇಸ್‌ಟೈಮ್‌ನಲ್ಲಿ ಶೇರ್‌ಪ್ಲೇ ಆನ್ ಮಾಡಬಹುದು. ಶೇರ್‌ಪ್ಲೇ ಆಕ್ಟೀವ್ ಆದ ಬಳಿಕ ತಮ್ಮ ಸ್ಕ್ರೀನ್ ಅನ್ನು ಸಹ ಹಂಚಿಕೊಳ್ಳಬಹುದು.

ಇಷ್ಟು ಮಾತ್ರವಲ್ಲದೇ, ನೂತನ iOS 15 ಒಎಸ್ ಅಪ್‌ಡೇಟ್ ಮೂಲಕ ಐಫೋನ್ ಬಳಕೆದಾರರಿಗೆ ಸಫಾರಿಯಲ್ಲಿ ಬಾಟಮ್ ಟ್ಯಾಬ್ ಬಾರ್, ಟ್ಯಾಬ್ ಗ್ರೂಪ್ ಸಿಂಕ್, ಮ್ಯಾನುವಲ್ ಕಸ್ಟಮೈಸ್ ಮಾಡಬಹುದಾದ ಸ್ಟಾರ್ಟ್ ಪೇಜ್ ಸೇರಿದಂತೆ, ಫೋಟೋಗಳಲ್ಲಿ ಲೈವ್ ಟೆಕ್ಸ್ಟ್ ಆಯ್ಕೆಗಳು ಸಿಗಲಿದೆ. ಲೈವ್ ಟೆಕ್ಸ್ಟ್ಗಳು ಫೋಟೋಗಳು ಮತ್ತು ಸ್ಕ್ರೀನ್ ಶಾಟ್ಸ್ ಕ್ಯಾಮೆರಾ ಆಪ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ ಫೋಟೋ ಅಪ್ಲಿಕೇಶನ್ನಲ್ಲೂ ರಿಫ್ರೆಶ್‌ಗಳ ಆಯ್ಕೆ ಇರಲಿದೆ. ಇದರೊಂದಿಗೆ ಆಪಲ್ ಮ್ಯೂಸಿಕ್ ಮೂಲಕ ಫೋಟೊ ಮೆಮೊರಿಗಳನ್ನು ಕ್ರಿಯೇಟ್ ಮಾಡಬಹುದಾಗಿದೆ.

ಇನ್ನು ಈ ಅಪ್ಡೇಟ್ನಲ್ಲಿ ನೀಡಲಾಗಿರುವ ಫೀಶೇಷ ಫೀಚರ್ಸ್‌ಗಳಲ್ಲಿ ಮೆಮೊರಿಯಲ್ಲಿ ಶೀರ್ಷಿಕೆಗಳೊಂದಿಗೆ ಅನಿಮೇಟೆಡ್ ಕಾರ್ಡ್‌ಗಳು ಹಾಗೂ ಹೊಸ ಅನಿಮೇಷನ್ ಸೇರಿದಂತೆ ಹಲವು ಆಯ್ಕೆಗಳನ್ನು ನೀಡಲಾಗಿರುವುದು ಕೂಡ ಗಮನಸೆಳೆದಿದೆ. ಐಫೋನ್ ಅಥವಾ ಐಪ್ಯಾಡ್ ಬಳಕೆದಾರರು Settingsಗೆ ತರೆಳಿ, ಅಲ್ಲಿ General ಆಯ್ಕೆ ಮಾಡಿದ ನಂತರ Software update ಅಪ್ಡೇಟ್ ನೀಡಿದರೆ iOS 15 ಡೌನ್ಲೋಡ್ ಆಗಲಿದೆ. ಡೌನ್‌ಲೋಡ್ ನಂತರ ಇನ್ಸ್ಟಾಲ್ ಮಾಡಿದರೆ, ನೂತನ iOS 15 ಒಎಸ್ ನಲ್ಲಿನ ಎಲ್ಲಾ ಹೊಸ ಫೀಚರ್ಸ್ ಬಳಕೆದಾರರಿಗೆ ಸಿಗಲಿವೆ.
ಗೂಗಲ್‌ನ ಹೊಸ ಅಪ್‌ಡೇಟ್‌ಗೆ ಆಂಡ್ರಾಯ್ಡ್ ಬಳಕೆದಾರರು ಫಿಧಾ!..ಏನದು ಗೊತ್ತಾ?
ಹಾಗಾದರೆ, ಯಾವೆಲ್ಲಾ ಐಫೋನ್ಗಳು ನೂತನ iOS 15 ಸಪೋರ್ಟ್ ಮಾಡುತ್ತವೆ ಎಂಬುದನ್ನು ತಿಳಿಯುವುದಾದರೆ, ಐಫೋನ್ 6 ಎಸ್, ಐಫೋನ್ 6 ಎಸ್ ಪ್ಲಸ್, ಐಫೋನ್ 7, ಐಫೋನ್ 7 ಪ್ಲಸ್, ಐಫೋನ್ 8, ಐಫೋನ್ 8 ಪ್ಲಸ್, ಐಫೋನ್ ಎಕ್ಸ್ ಆರ್, ಐಫೋನ್ ಎಕ್ಸ್, ಐಫೋನ್ ಎಕ್ಸ್ ಎಸ್ , ಐಫೋನ್ ಎಕ್ಸ್ ಎಸ್ ಮ್ಯಾಕ್ಸ್, ಐಫೋನ್ 11 ಪ್ರೊ, ಐಫೋನ್ 11 ಪ್ರೊ ಮ್ಯಾಕ್ಸ್, ಐಫೋನ್ 11, ಐಫೋನ್ 12, ಐಫೋನ್ 12 ಮಿನಿ, ಐಫೋನ್ 12 ಪ್ರೊ, ಐಫೋನ್ 12 ಮ್ಯಾಕ್ಸ್, ಹೊಸ ಐಫೋನ್ 13ಸರಣಿ ಫೋನ್‌ಗಳು ಹಾಗೂ ಫಸ್ಟ್ ಜನರೇಷನ್ ಮತ್ತು ಸೆಕೆಂಡ್ ಜನರೇಷನ್ ಐಫೋನ್ ಎಸ್ಇ ಪೋನ್‌ಗಳು ಅಪ್‌ಡೇಟ್ ಅನ್ನು ಪಡೆಯುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌