ಆ್ಯಪ್ನಗರ

Itel A46: ಹಬ್ಬದ ವಿಶೇಷ ಮಾರಾಟದಲ್ಲಿ ಬಜೆಟ್ ಸ್ಮಾರ್ಟ್‌ಫೋನ್

ಕಡಿಮೆ ಬಜೆಟ್‌ನ ಫೋನ್‌ ಕೊಳ್ಳುವವರು ಬಯಸುವ ಎಲ್ಲ ಫೀಚರ್‌ಗಳನ್ನು ಐಟೆಲ್ ದೇಶದ ಜನರಿಗೆ ನೀಡುತ್ತಿದ್ದು, ಆಕರ್ಷಕ ಆಫರ್ ಕೂಡ ದೊರೆಯುತ್ತಿದೆ. ಐಟೆಲ್ A46 ಸ್ಮಾರ್ಟ್‌ಫೋನ್‌ನ ಪರಿಷ್ಕೃತ ಆವೃತ್ತಿ ಈಗ ಲಭ್ಯವಿದೆ.

Vijaya Karnataka Web 30 Sep 2019, 5:55 pm
ಮೇಡ್ ಇನ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಯಡಿ ವಿಶೇಷವಾಗಿ ಬೇಸಿಕ್ ಫೀಚರ್ ಫೋನ್ ಮತ್ತು ಸ್ಮಾರ್ಟ್‌ಫೋನ್ ಉತ್ಪಾದನೆ ಕೈಗೊಂಡಿರುವ ಐಟೆಲ್, ಹಬ್ಬದ ವಿಶೇಷ ಮಾರಾಟ ಕೊಡುಗೆ ಮತ್ತು ಬಜೆಟ್ ಸ್ಮಾರ್ಟ್‌ಫೋನ್ ಐಟೆಲ್ A46 ಮೇಲೆ ವಿಶೇಷ ಆಫರ್ ಘೋಷಿಸಿದೆ.
Vijaya Karnataka Web iTel


ಐಟೆಲ್ ಫೀಚರ್ ಬೇಸಿಕ್ ಫೋನ್‌ಗಳು ದೇಶದಲ್ಲಿ ಅತ್ಯಧಿಕ ಮಾರಾಟ ಕಂಡಿದ್ದು, ಸ್ಯಾಮ್‌ಸಂಗ್ ಮತ್ತು ನೋಕಿಯಾ ಫೀಚರ್ ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಒಡ್ಡುತ್ತಿದೆ.

ಫೀಚರ್ ಫೋನ್‌ನಲ್ಲಿ ಕೂಡ ಐಟೆಲ್ ಸೆಲ್ಫಿ ಕ್ಯಾಮರಾ, ಕನ್ನಡ, ತಮಿಳು, ತೆಲುಗು ಸಹಿತ ವಿವಿಧ ಪ್ರಾದೇಶಿಕ ಭಾಷೆಗಳಿಗೆ ಬೆಂಬಲ ನೀಡಿದೆ. ಕಡಿಮೆ ಬಜೆಟ್‌ಗೆ ಉತ್ತಮ ಸ್ಮಾರ್ಟ್‌ಫೋನ್ ಬೇಕೆಂದು ಬಯಸುವವರಿಗೆ ಐಟೆಲ್ A46 ಉತ್ತಮ ಆಯ್ಕೆಯಾಗಿದ್ದು, ಹಬ್ಬದ ವಿಶೇಷ ಮಾರಾಟದಲ್ಲಿ ಹೆಡ್‌ಫೋನ್ ಉಚಿತ ಮತ್ತು ರಿಲಯನ್ಸ್ ಜಿಯೋ ಕೊಡುಗೆಗಳನ್ನು ಪಡೆಯಬಹುದಾಗಿದೆ.

ಐಟೆಲ್ A46 ಪರಿಷ್ಕೃತ ಆವೃತ್ತಿ
ಐಟೆಲ್ A46 ಸ್ಮಾರ್ಟ್‌ಫೋನ್ 5 ಸಾವಿರ ರೂ. ಒಳಗೆ ಲಭ್ಯವಿರುವ ಉತ್ತಮ ಫೋನ್ ಆಗಿದ್ದು, 2 GB RAM ಮತ್ತು 32 GB ಸ್ಟೋರೇಜ್ ಹೊಂದಿದೆ. ಈ ಮೊದಲು 16 GB ಸ್ಟೋರೇಜ್ ಮಾತ್ರ ಲಭ್ಯವಿತ್ತು. ಹೊಸ ಫೋನ್ 4,999 ರೂ. ಬೆಲೆ ಹೊಂದಿದೆ.
ದೇಶಾದ್ಯಂತ ರಿಟೇಲ್ ಸ್ಟೋರ್‌ಗಳಲ್ಲಿ ಐಟೆಲ್ ಫೋನ್ ಲಭ್ಯವಿದ್ದು, ಡೈಮಂಡ್ ಗ್ರೇ, ಫೇರಿ ರೆಡ್, ನಿಯೋನ್ ವಾಟರ್ ಮತ್ತು ಡಾರ್ಕ್ ವಾಟರ್ ಬಣ್ಣದಲ್ಲಿ ದೊರೆಯಲಿದೆ.

ಐಟೆಲ್ A46 ವಿಶೇ‍ಷತೆ
ಪರಿಷ್ಕೃತ ಮಾದರಿ, 5.45 ಇಂಚಿನ ಎಚ್‌ಡಿ+ ಡಿಸ್‌ಪ್ಲೇ
1.6 ಜಿಹರ್ಜ್ಟ್‌ ಒಕ್ಟಾ ಕೋರ್ ಪ್ರೊಸೆಸರ್
2 GB RAM, 32 GB ಸ್ಟೋರೇಜ್
128 ಜಿಬಿಯವರೆಗೆ ವಿಸ್ತರಿಸಬಹುದು.

ಫೇಸ್ ಐಡಿ ಅನ್‌ಲಾಕ್ ಮತ್ತು ಫಿಂಗರ್‌ಪ್ರಿಂಟ್ ಸ್ಕ್ಯಾನರ್
ಹಿಂಬದಿಯಲ್ಲಿ 8 ಮೆಗಾಪಿಕ್ಸೆಲ್ ಲೆನ್ಸ್ ಸಹಿತ ಎರಡು ಕ್ಯಾಮರಾ ವ್ಯವಸ್ಥೆ
5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ
2400mAh ಬ್ಯಾಟರಿ
ಆಂಡ್ರಾಯ್ಡ್ 9.0 ಪೈ ಓಎಸ್ ಐಟೆಲ್ ಫೋನ್‌ನ ವಿಶೇ‍ಷತೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌