ಆ್ಯಪ್ನಗರ

ಜಿಯೋವಿನ 2,999 ರೂ. ಪ್ರಿಪೇಯ್ಡ್ ಯೋಜನೆ ಖರೀದಿಗೆ ಹಲವು ಕಾರಣಗಳಿವೆ!

ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿದ ನಂತರ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯಂತಹ ಮನರಂಜನಾ ಪ್ರಯೋಜನಗಳೊಂದಿಗೆ ಸಂಯೋಜಿಸಲಾದ ಅದರ ಹಲವು ಪ್ರಿಪೇಯ್ಡ್ ಯೋಜನೆಗಳನ್ನು ಸ್ಥಗಿತಗೊಳಿಸಿತ್ತು.

Vijaya Karnataka Web 10 Jan 2022, 1:54 pm
ದೇಶದ ಜನಪ್ರಿಯ ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿದ ನಂತರ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯಂತಹ ಮನರಂಜನಾ ಪ್ರಯೋಜನಗಳೊಂದಿಗೆ ಸಂಯೋಜಿಸಲಾದ ಅದರ ಹಲವು ಪ್ರಿಪೇಯ್ಡ್ ಯೋಜನೆಗಳನ್ನು ಸ್ಥಗಿತಗೊಳಿಸಿತ್ತು. ಇದೀಗ ಜಿಯೋ ತನ್ನ ಕೆಲವು ಪ್ರೀಪೇಡ್ ಯೋಜನೆಗಳ ಮೇಲೆ ಮತ್ತೆ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಪ್ರಕಟಿಸಿದ್ದು, ಇದೀಗ ಜಿಯೋವಿನ ಜನಪ್ರಿಯ ವಾರ್ಷಿಕ ಯೋಜನೆಯಲ್ಲಿ ಗ್ರಾಹಕರು ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಪಡೆಯುವ ಬಗ್ಗೆ ತಿಳಿಸಿದೆ. ಈ ಯೋಜನೆಯು ಅತ್ಯುತ್ತಮ ದೈನಂದಿಕ ಡೇಟಾ ಕೊಡುಗೆ ಸೇರಿದಂತೆ ಗ್ರಾಹಕರ ಎಲ್ಲಾ ಅಗತ್ಯತೆಗಳನ್ನು ಪೂರೈಸುವಂತಹ ಕೊಡುಗೆಗಳನ್ನು ಹೊಂದಿದೆ.
Vijaya Karnataka Web 2,999 Prepaid Plan Launched With Disney+ Hotstar Access


ಹೌದು, ರಿಲಯನ್ಸ್ ಜಿಯೋದಿಂದ ಹೊಸದಾಗಿ ಬಿಡುಗಡೆಯಾದ 2,999 ರೂ.ಗಳ ಪ್ರಿಪೇಯ್ಡ್ ಯೋಜನೆಯು ಚಂದಾದಾರರಿಗೆ ದಿನಕ್ಕೆ 2.5GB ಡೇಟಾ, ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಧ್ವನಿ ಕರೆಗಳ, ದಿನಕ್ಕೆ 100 SMS ಪ್ರಯೋಜನಗಳನ್ನು ನೀಡಲಿದೆ. ಇವುಗಳ ಜೊತೆಗೆ ಇದೀಗ ವಾರ್ಷಿಕ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ, JioCloud, JioSecurity, JioCinema ಮತ್ತು JioTV ಸೇರಿದಂತೆ ಅಪ್ಲಿಕೇಶನ್‌ಗಳ Jio ಸೂಟ್‌ಗೆ ಪ್ರವೇಶವನ್ನು ಪಡೆಯಲು ಅನುಮತಿಸುತ್ತದೆ. ಈ ಪ್ರಯೋಜನಗಳು ಒಂದು ವರ್ಷದ ಮಾನ್ಯತೆಯ ಅವಧಿಗೆ ಅಂದರೆ 365 ದಿನಗಳು ಲಭ್ಯವಿವೆ ಮತ್ತು ಈ ಯೋಜನೆಯು ಅದರ ಒಂದು ವರ್ಷದ ಮಾನ್ಯತೆಯ ಅವಧಿಯಲ್ಲಿ 912GB ಯ ಡೇಟಾ ಪ್ರಯೋಜನವನ್ನು ನೀಡುತ್ತದೆ ಎಂದು ಜಿಯೋ ತಿಳಿಸಿದೆ.

ಇದಕ್ಕೂ ಮುನ್ನ ರಿಲಯನ್ಸ್ ಜಿಯೋ 499 ರೂ.ಗಳ ಪ್ರಿಪೇಯ್ಡ್ ಯೋಜನೆಯನ್ನು ಸಹ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ ಮರು ಪ್ರಾರಂಭಿಸಿದೆ. ಈ 499 ರೂ.ಗಳ ಹೊಸ ಯೋಜನೆಯು Disney+ Hotstar ಮೊಬೈಲ್ ಸೇವೆಗೆ ವಾರ್ಷಿಕ ಚಂದಾದಾರಿಕೆಯನ್ನು ಉಚಿತವಾಗಿ ನೀಡುತ್ತದೆ. ಈ ಯೋಜನೆಯನ್ನು ಖರೀದಿಸುವ ಗ್ರಾಹಕರು 28 ದಿನಗಳ ಅವಧಿಯಲ್ಲಿ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆಗಳು, ಪ್ರತಿದಿನ 2GB ಡೇಟಾ ಪ್ರಯೋಜನಗಳು ಹಾಗೂ 100 SMS ಪ್ರಯೋಜನಗಳನ್ನು ಪಡೆಯುತ್ತಾರೆ. ಇವುಗಳ ಜೊತೆಗೆ Jio ಸಂಗೀತ, Jio ಸಿನಿಮಾ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ Jio ಸೂಟ್ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಸಹ ಈ ಯೋಜನೆಯು ಒಳಗೊಂಡಿದೆ.
BSNLಗೆ ಪೋರ್ಟ್ ಆಗುವ ಹೊಸ ಗ್ರಾಹಕರಿಗೆ ಭರ್ಜರಿ ಆಫರ್!
ಇನ್ನು ಜಿಯೋವಿನ 2,999 ರೂ.ಗಳ ಈ ಹೊಸ ಯೋಜನೆಯನ್ನು 20% JioMart ಮಹಾ ಕ್ಯಾಶ್‌ಬ್ಯಾಕ್ ಕೊಡುಗೆಯ ಅಡಿಯಲ್ಲಿ ಪಟ್ಟಿ ಮಾಡಲಾಗಿದ್ದು, ಈ ಆಫರ್ JioMart ವೆಬ್‌ಸೈಟ್‌ನಿಂದ ರೀಚಾರ್ಜ್ ಮಾಡುವವರಿಗೆ ಮಾತ್ರ ಲಭ್ಯವಿರುತ್ತದೆ. 2,999 ರೂ.ಗಳ ಯೋಜನೆಯ ಮೇಲೆ ನೀಡುತ್ತಿರುವ 20% JioMart ಮಹಾ ಕ್ಯಾಶ್‌ಬ್ಯಾಕ್ ಕೊಡುಗೆಯು ಜಿಯೋವಿನ ಮೂರು ಪ್ರಿಪೇಯ್ಡ್ ಯೋಜನೆಗಳ ಮೇಲೆ ಲಭ್ಯವಿದ್ದು, ಜಿಯೋ ಗ್ರಾಹಕರು 299 ರೂ., 666 ರೂ. ಮತ್ತು 719 ರೂ. ಯೋಜನೆಗಳಲ್ಲಿ ಈ ಕ್ಯಾಶ್‌ಬ್ಯಾಕ್ ಕೊಡುಗೆ ಪಡೆಯಬಹುದು.ಇವುಗಳಲ್ಲಿ 299 ರೂ. ಪ್ರಿಪೇಯ್ಡ್ ಯೋಜನೆಯು ದಿನಕ್ಕೆ 2GB ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು 28 ದಿನಗಳ ಮಾನ್ಯತೆಯೊಂದಿಗೆ ಅಪ್ಲಿಕೇಶನ್‌ಗಳ Jio ಸೂಟ್‌ಗೆ ಚಂದಾದಾರಿಕೆಯನ್ನು ನೀಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌