ಆ್ಯಪ್ನಗರ

E Commerce: ಹೆಚ್ಚುತ್ತಿದೆ ಅವಕಾಶಗಳ ಸಂಖ್ಯೆ

ದೇಶದಲ್ಲಿ ಆ್ಯಪ್ ಆಧಾರಿತ ವಿವಿಧ ಸೇವೆಗಳ ವಿಸ್ತರಣೆ ಮತ್ತು ಬೇಡಿಕೆ ಹೆಚ್ಚಳವು ಉದ್ಯೋಗ ಸೃಷ್ಟಿಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದೆ. ಸ್ಟಾರ್ಟಪ್‌ಗಳಲ್ಲಿ ನೇಮಕಾತಿ ಸಂಖ್ಯೆ ಏರಿಕೆಯಾಗುತ್ತಿದೆ.

THE ECONOMIC TIMES 7 Jul 2019, 2:57 pm
ಹೊಸದಿಲ್ಲಿ: ಇ-ಕಾಮರ್ಸ್‌ ಕಂಪನಿಗಳು ಮತ್ತು ಸ್ಟಾರ್ಟಪ್‌ಗಳಲ್ಲಿ ನೇಮಕಾತಿ ಪ್ರಕ್ರಿಯೆ ಚುರುಕಾಗಿದೆ ಎಂದು ಟೀಮ್‌ಲೀಸ್‌ ಸಂಸ್ಥೆಯ ವರದಿ ತಿಳಿಸಿದೆ.
Vijaya Karnataka Web E commrece


ಈ ವಲಯಗಳಲ್ಲಿ 44,000ಕ್ಕೂ ಹೆಚ್ಚು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ತಂತ್ರಜ್ಞಾನ ವೃತ್ತಿಪರರು ಹಾಗೂ ಪೂರೈಕೆ ಸರಣಿಯ ತಜ್ಞರಿಗೆ ಬೇಡಿಕೆ ಉಂಟಾಗಿದೆ.

ಸ್ವಿಗ್ಗಿ, ಓಯೊ, ಬೈಜೂಸ್‌, ಎಕ್ಸ್‌ಟ್ರಾ ಮಾರ್ಕ್ಸ್‌, ಜೊಮೊಟೊ ಇತ್ಯಾದಿ ಕಂಪನಿಗಳು ಈ ವರ್ಷ ತಮ್ಮ ನೇಮಕಾತಿಯಲ್ಲಿ ಕನಿಷ್ಠ ಶೇ. 25ರಷ್ಟು ಏರಿಕೆ ಮಾಡುವ ನಿರೀಕ್ಷೆ ಇದೆ ಎಂದು ತಿಳಿಸಿದೆ.

ಇ-ಕಾಮರ್ಸ್‌ ಮಾರುಕಟ್ಟೆ 3500 ಕೋಟಿ ಡಾಲರ್‌ (2.45 ಲಕ್ಷ ಕೋಟಿ ರೂ.) ಮೌಲ್ಯದ್ದಾಗಿದ್ದು, ಮುಂದಿನ 5 ವರ್ಷಗಳಲ್ಲಿ ಶೇ.25ರಷ್ಟು ವಿಸ್ತರಿಸುವ ಸಾಧ್ಯತೆ ಇದೆ ಎಂದು ನಾಸ್ಕಾಮ್‌ ನ ಉಪಾಧ್ಯಕ್ಷರಾದ ಸಂಗೀತಾ ಗುಪ್ತ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌