ಆ್ಯಪ್ನಗರ

ಶಿಯೊಮಿಯಿಂದ ಕಿಂಡಲ್‌ ರೀತಿಯ ಇ ರೀಡರ್‌

ನಿಮ್ಮ ಮಾತೃಭಾಷೆಯ ಹೊರತಾದ ಬೇರೆ ಬೇರೆ ದೇಶಗಳ ಭಾಷೆಯನ್ನು ಕಲಿಯುವ ಆಸಕ್ತಿ ಇದೆಯೇ? ಹಾಗಿದ್ದರೆ, ನಿಮಗೆ ಈ ಆ್ಯಪ್‌ ಅತ್ಯಂತ ಸೂಕ್ತವಾಗಿದೆಂದು ಹೇಳಬಹುದು.

Vijaya Karnataka 26 Nov 2018, 10:38 pm
ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ ಟಿವಿ, ಅಷ್ಟೆ ಯಾಕೆ ಎಲೆಕ್ಟ್ರಾನಿಕ್‌ ಟೂಥ್‌ಬ್ರಶ್‌ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಜಾಗ ಮಾಡಿಕೊಂಡಿರುವ ಚೀನಾ ಮೂಲದ ಶಿಯೊಮಿ ಕಂಪನಿ ಇದೀಗ, ಅಮೆಜಾನ್‌ನ ಕಿಂಡಲ್‌ ರೀತಿಯ ಇ-ರೀಡರ್‌ ಸಾಧನವನ್ನು ಮಾರುಕಟ್ಟೆಗೆ ಪರಿಚಯಿಸಲು ಹೊರಟಿದೆ. ಈಗಾಗಲೇ ಅನೇಕ ಉತ್ಪನ್ನಗಳ ಮೂಲಕ ಬೇರೆ ಬೇರೆ ಕಂಪನಿಗಳಿಗೆ ಸ್ಪರ್ಧೆ ನೀಡಿರುವ ಶಿಯೊಮಿ, ಇ-ರೀಡರ್‌ ಸಾಧನವನ್ನು ಪರಿಚಯಿಸುವ ಮೂಲಕ ಅಮೆಜಾನ್‌ಗೂ ಬಿಸಿ ಮುಟ್ಟಿಸಲು ಸಜ್ಜಾಗಿದೆ. ಕಳೆದ ವರ್ಷ ಮಾದರಿ ಇ-ರೀಡರ್‌ವೊಂದನ್ನು ಕಂಪನಿ ಸಿದ್ಧಪಡಿಸಿತ್ತು. ಆದರೆ, ಆ ಬಳಿಕ ಈ ಸಾಧನದ ಮೇಲೆ ಕಂಪನಿ ಅಷ್ಟೇನೂ ಆಸಕ್ತಿ ತೋರಿಸದೇ, ಸ್ಮಾರ್ಟ್‌ಫೋನ್‌ ಉತ್ಪಾದನೆಗಳ ಮೇಲೆ ಹೆಚ್ಚಿನ ಗಮನ ಹರಿಸಿತು. ಹೀಗಿದ್ದಾಗ್ಯೂ, ಇದೀಗ ಇ ರೀಡರ್‌ ಸಾಧನವನ್ನು ಮಾರುಕಟ್ಟೆಗೆ ಪರಿಚಯಸಲಿದೆ ಎಂದು ವರದಿಗಳು ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಕಂಪನಿ ಯಾವುದೇ ಅಧಿಕೃತ ಮಾಹಿತಿಯನ್ನು ಒದಗಿಸಿಲ್ಲ.
Vijaya Karnataka Web mi


ಎಚ್‌ಟಿಸಿಯಿಂದ ಶೀಘ್ರ ಹೊಸ ಫೋನ್‌?

ಇತ್ತೀಚಿನ ದಿನಗಳಲ್ಲಿ ಎಚ್‌ಟಿಸಿಯಿಂದ ಯಾವುದೇ ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದಿಲ್ಲ. ಸಹಜವಾಗಿಯೇ, ಎಚ್‌ಟಿಸಿ ಸ್ಮಾರ್ಟ್‌ಫೋನ್‌ ಉತ್ಪಾದನೆಯಿಂದ ಹಿಂದೆ ಸರಿದಿದೆ ಎಂಬ ವರದಿಗಳಿದ್ದವು. ಆದರೆ, ಈ ವರದಿಗಳನ್ನು ನಿರಾಕರಿಸಿರುವ ಕಂಪನಿಯು, ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯನ್ನು ಮುಂದುವರಿಸುವುದಾಗಿ ಹೇಳಿದೆ. ಅಲ್ಲದೆ, ಪ್ರಸಕ್ತ ವರ್ಷ ಮತ್ತು 2019ರಲ್ಲಿ 5ಜಿ, ಎಐ ಮತ್ತು ಬ್ಲಾಕ್‌ಚೈನ್‌ ತಂತ್ರಜ್ಞಾನ ಆಧರಿತ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದೆ. ಈ ಬಗ್ಗೆ ಡಿಜಿಟೈಮ್ಸ್‌ ವರದಿ ಮಾಡಿದ್ದು, 5ಜಿ ಶಕೆಯನ್ನು ಆರಂಭಿಸುವ ಉತ್ಸಾಹದಲ್ಲಿ ಎಚ್‌ಟಿಸಿ ಇದೆ ಎಂದು ಹೇಳಿದೆ. ಜತೆಗೆ, 6ಜಿ ರಾರ‍ಯಮ್‌/128 ಜಿಬಿ ಮೆಮೊರಿ ಇರುವ ಎಚ್‌ಟಿಸಿ ಯು12 ಫೋನ್‌ ಅನ್ನು ಡಿಸೆಂಬರ್‌ ಅಂತ್ಯಕ್ಕೆ ಬಿಡುಗಡೆ ಮಾಡಲಿದ್ದು, ಹಾಗೆಯೇ 2019ರ ಆದಿಯಲ್ಲಿ ಬೇರೆ ಬೇರೆ ಮಾದರಿಯ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಉದ್ದೇಶವನ್ನು ಎಚ್‌ಟಿಸಿ ಕಂಪನಿ ಹೊಂದಿದೆ ಎಂದು ಹೇಳಲಾಗುತ್ತಿದೆ.ಘ್ಕಿ ಈ ಮೂಲಕ ಎಚ್‌ಟಿಸಿ ಸ್ಮಾರ್ಟ್‌ಫೋನ್‌ಗಳ ಸ್ಪರ್ಧೆಯಲ್ಲಿ ತನ್ನ ಇರುವಿಕೆಯನ್ನು ಸಾಬೀತುಪಡಿಸಲು ಮುಂದಾಗಿದೆಂದು ಹೇಳಬಹುದು.

Memrise
ನಿಮ್ಮ ಮಾತೃಭಾಷೆಯ ಹೊರತಾದ ಬೇರೆ ಬೇರೆ ದೇಶಗಳ ಭಾಷೆಯನ್ನು ಕಲಿಯುವ ಆಸಕ್ತಿ ಇದೆಯೇ? ಹಾಗಿದ್ದರೆ, ನಿಮಗೆ ಈ ಆ್ಯಪ್‌ ಅತ್ಯಂತ ಸೂಕ್ತವಾಗಿದೆಂದು ಹೇಳಬಹುದು. ಜಗತ್ತಿನ ನಾನಾ 25 ಭಾಷೆಗಳಲ್ಲಿ 150ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಈ ಆ್ಯಪ್‌ ಒದಗಿಸುತ್ತದೆ. ಈ ಆ್ಯಪ್‌ ಬಳಸಿಕೊಂಡು ನೀವು ಇಂಗ್ಲಿಷ್‌, ಸ್ಪ್ಯಾನಿಷ್‌, ಫ್ರೆಂಚ್‌, ಜಾಪನೀಸ್‌, ಇಟಾಲಿಯನ್‌, ಚೀನೀಸ್‌, ಜರ್ಮನ್‌, ರಷ್ಯನ್‌, ಅರೆಬಿಕ್‌, ಪೋರ್ಚುಗೀಸ್‌, ಡ್ಯಾನಿಷ್‌, ಸ್ವಿಡಿಷ್‌, ತುರ್ಕಿಷ್‌, ಡಚ್‌, ಮುಂಗೊಲಿಯನ್‌ ಸೇರಿದಂತೆ ಇತರ ವಿದೇಶಿ ಭಾಷೆಗಳನ್ನು ಕಲಿಯಬಹುದಾಗಿದೆ. ಈ ಆ್ಯಪ್‌ನಲ್ಲಿ 35 ದಶಲಕ್ಷ ಅಧಿಕೃತ ಬಳಕೆದಾರರು ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌