ಆ್ಯಪ್ನಗರ

Samsung Galaxy A Series: ಶೀಘ್ರದಲ್ಲಿ ಬಿಡುಗಡೆ ಸಾಧ್ಯತೆ

ಟ್ವಿಟರ್ ಪೋಸ್ಟ್‌ನಲ್ಲಿ ಮುಂಬರುವ ಎ ಸರಣಿಯ ಸ್ಮಾರ್ಟ್‌ಫೋನ್ ಕುರಿತು ಸ್ಯಾಮ್‌ಸಂಗ್ ಸುಳಿವು ನೀಡಿದ್ದು, ಇನ್ಫಿನಿಟಿ ಡಿಸ್‌ಪ್ಲೇ, ಫಾಸ್ಟ್‌ ಚಾರ್ಜಿಂಗ್, ಸ್ಲೋ ಮೋಶನ್, ಹೈಪರ್‌ಲ್ಯಾಪ್ಸ್ ಸಹಿತ ವಿವಿಧ ಕ್ಯಾಮರಾ ಆಯ್ಕೆಗಳನ್ನು ಹೊಂದಿರಲಿದೆ ಎನ್ನಲಾಗಿದೆ.

Vijaya Karnataka Web 25 Feb 2019, 12:41 pm
ಸ್ಮಾರ್ಟ್‌ಫೋನ್ ಕ್ಷೇತ್ರದ ದಿಗ್ಗಜ ಸ್ಯಾಮ್‌ಸಂಗ್ ಸ್ಪರ್ಧಾತ್ಮಕ ಯುಗದಲ್ಲಿ ತನ್ನದೇ ಛಾಪು ಮೂಡಿಸಲು ಅಗ್ರಸ್ಥಾನ ಕಾಯ್ದುಕೊಳ್ಳಲು ಕಸರತ್ತು ನಡೆಸುತ್ತಿದ್ದು, ಶೀಘ್ರದಲ್ಲೇ ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
Vijaya Karnataka Web Samsung


ಇತ್ತೀಚೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ ಸರಣಿಯಲ್ಲಿ S10, S10+ ಮತ್ತು S10e ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿತ್ತು.

ಅದರ ಬೆನ್ನಲ್ಲೇ Samsung Galaxy A Series ಸ್ಮಾರ್ಟ್‌ಫೋನ್‌ಗಳ ಕುರಿತು ಸ್ಯಾಮ್‌ಸಂಗ್ ಟ್ವಿಟರ್ ಪೇಜ್‌ನಲ್ಲಿ ಪೋಸ್ಟ್ ಮಾಡಿದೆ.
ಟ್ವಿಟರ್ ಪೋಸ್ಟ್‌ನಲ್ಲಿ ಮುಂಬರುವ ಎ ಸರಣಿಯ ಸ್ಮಾರ್ಟ್‌ಫೋನ್ ಕುರಿತು ಸ್ಯಾಮ್‌ಸಂಗ್ ಸುಳಿವು ನೀಡಿದ್ದು, ಇನ್ಫಿನಿಟಿ ಡಿಸ್‌ಪ್ಲೇ, ಫಾಸ್ಟ್‌ ಚಾರ್ಜಿಂಗ್, ಸ್ಲೋ ಮೋಶನ್, ಹೈಪರ್‌ಲ್ಯಾಪ್ಸ್ ಸಹಿತ ವಿವಿಧ ಕ್ಯಾಮರಾ ಆಯ್ಕೆಗಳನ್ನು ಹೊಂದಿರಲಿದೆ ಎನ್ನಲಾಗಿದೆ.

ಎ ಸರಣಿಯ ಸ್ಮಾರ್ಟ್‌ಫೋನ್ ಕುರಿತು ಸ್ಯಾಮ್‌ಸಂಗ್ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ Galaxy A90, Galaxy A70, Galaxy A50, Galaxy A30 ಮತ್ತು Galaxy A10 ಮಾದರಿಯನ್ನು ಸ್ಯಾಮ್‌ಸಂಗ್ ಪರಿಚಯಿಸಲಿದೆ ಎಂದು ಹೇಳಲಾಗಿದೆ.

ಬಜೆಟ್‌ ಸ್ಮಾರ್ಟ್‌ಫೋನ್ ಮತ್ತು ನೂತನ ಫೀಚರ್ ಸಹಿತ ಸ್ಯಾಮ್‌ಸಂಗ್, ಎ ಸರಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಚೀನಾ ಮೂಲಕ ಶಿಯೋಮಿ, ಒಪ್ಪೋ, ವಿವೋಗೆ ನೇರ ಸ್ಪರ್ಧೆ ಒಡ್ಡಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌