ಆ್ಯಪ್ನಗರ

Face Recognition: ಮುಖದ ಭಾವನೆ ನಕಲಿಯಾ, ಅಸಲಿಯಾ?

ಮುಖಚಹರೆ ಪತ್ತೆಹಚ್ಚುವ ತಂತ್ರಜ್ಞಾನ ಹಳೆಯದಾಗುತ್ತಾ ಬಂದರೂ, ಅದರಲ್ಲಿನ ವಿವಿಧ ಸಾಧ್ಯತೆಗಳನ್ನು ಬಳಸಿಕೊಂಡು ಅವಶ್ಯವಿರುವಲ್ಲಿ ಅಳವಡಿಸಲು ತಂತ್ರಜ್ಞಾನ ಕ್ಷೇತ್ರದಲ್ಲಿ ಸಿದ್ಧತೆ ನಡೆದಿದೆ.

Agencies 5 Aug 2019, 2:11 pm
ಮುಖದ ಗುರುತನ್ನು ಸ್ಕ್ಯಾನ್ ಮಾಡಿ ಲಾಕ್ ತೆರೆಯುವ ಲ್ಯಾಪ್‌ಟ್ಯಾಪ್, ಸ್ಮಾರ್ಟ್‌ಫೋನ್ ಕಂಡಿದ್ದೇವೆ. ಆದರೆ ಅದೇ ಗುರುತನ್ನು ಬಳಸಿಕೊಂಡು, ಮುಖದ ಭಾವನೆಯು ನೈಜತೆಯಿಂದ ಕೂಡಿದ್ದೇ ಇಲ್ಲವೇ ಎಂದು ಹೇಳಲು ಸಾಧ್ಯವಿದೆ.
Vijaya Karnataka Web Face


ನಿಮ್ಮ ಎದುರಿನ ವ್ಯಕ್ತಿಯು ಅಭಿವ್ಯಕ್ತಿಸುವ ಮುಖದ ಭಾವ ಕೃತ್ರಿಮವಾಗಿದೆಯೇ, ಸಹಜವಾದುದ್ದೇ ಎಂಬುದನ್ನು ಪತ್ತೆ ಹಚ್ಚುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ಲ? ಚಿಂತೆ ಬೇಡ, ಸಂಶೋಧಕರು ಮುಖದ ಭಾವದ ಹಿಂದಿನ ಸತ್ಯವನ್ನು ಕಂಡು ಹಿಡಿಯುವ ಸಾಫ್ಟ್‌ವೇರ್‌ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

ವ್ಯಕ್ತಿಯ ಮುಖದ ಮೇಲಿನ ನಗೆಯ ಚಲನೆಗಳನ್ನು ವಿಶ್ಲೇಷಿಸುವ ಈ ಸಾಫ್ಟ್‌ವೇರ್‌, ಆ ವ್ಯಕ್ತಿಯ ಭಾವನೆಗಳು ಕೃತ್ರಿಮವಾಗಿಯೇ ಇಲ್ಲವೇ ಸಹಜವಾಗಿವೆಯೇ ಎಂಬುದನ್ನು ಪತ್ತೆ ಹಚ್ಚುತ್ತದೆ ಎಂದು ಅಡ್ವಾನ್ಸಡ್‌ ಎಂಜಿನಿಯರಿಂಗ್‌ ಇನ್ಫೊರ್ಮಾಟಿಕ್ಸ್‌ ಜರ್ನಲ್‌ನಲ್ಲಿ ಪ್ರಕಟಗೊಂಡ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ಮುಖದ ಮೇಲಿನ ನಗೆಯ ಗೆರೆಗಳನ್ನು ಈ ಸಾಫ್ಟ್‌ವೇರ್‌ ವಿಶ್ಲೇಷಿಸುತ್ತಾದರೂ, ವ್ಯಕ್ತಿಯ ಕಣ್ಣುಗಳ ಪರಿಚಲನೆಯನ್ನು ತನ್ನ ವಿಶ್ಲೇಷಣೆಗೆ ಹೆಚ್ಚು ಆಧಾರವಾಗಿಸಿಕೊಳ್ಳುತ್ತದೆ ಎನ್ನುತ್ತಾರೆ. ವ್ಯಕ್ತಿಯೊಬ್ಬನ ಕೃತ್ರಿಮ ನಗೆ ಅಥವಾ ಸಹಜ ಭಾವನೆಯನ್ನು ಕಣ್ಣು ಚಲನೆಗಳನ್ನು ಸ್ಪಷ್ಟವಾಗಿ ಹೊರ ಹಾಕುತ್ತವಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌