ಆ್ಯಪ್ನಗರ

Leaked iPhone 11: ಹೊಸ ಐಫೋನ್ ವಿನ್ಯಾಸ ಸೋರಿಕೆ

ಆ್ಯಪಲ್ ಐಫೋನ್ ಸರಣಿಯಲ್ಲಿ ಹೊಸದಾಗಿ ಐಫೋನ್ 11 ಬಿಡುಗಡೆ ಮಾಡಲಿದೆ ಎನ್ನಲಾಗಿದ್ದು, ಅದರ ವಿನ್ಯಾಸದ ಚಿತ್ರಗಳು ಲೀಕ್ ಆಗಿವೆ.

Vijaya Karnataka Web 29 Mar 2019, 5:29 pm
ಆ್ಯಪಲ್ ಪ್ರತಿಬಾರಿ ಹೊಸ ಐಫೋನ್ ಬಿಡುಗಡೆ ಮಾಡುತ್ತಿದೆ ಎನ್ನುವಾಗಲೂ ಟೆಕ್‌ಲೋಕದ ನಿರೀಕ್ಷೆ ದೊಡ್ಡಮಟ್ಟದಲ್ಲಿರುತ್ತದೆ.
Vijaya Karnataka Web Apple iPhone


ಈ ಬಾರಿ ಆ್ಯಪಲ್ ಐಫೋನ್ ಸರಣಿಯಲ್ಲಿ ಹೊಸದಾಗಿ ಐಫೋನ್ 11 ಬಿಡುಗಡೆ ಮಾಡಲಿದೆ ಎನ್ನಲಾಗಿದ್ದು, ಅದರ ವಿನ್ಯಾಸದ ಚಿತ್ರಗಳು ಲೀಕ್ ಆಗಿವೆ.

ಟ್ವಿಟರ್‌ನಲ್ಲಿ ಶೇರ್ ಆದ ಚಿತ್ರವೊಂದು ಐಫೋನ್ XR ಎಂದು ಹೇಳಲಾಗಿದೆ. ಆದರೆ ಅದು ಆ್ಯಪಲ್ ಐಫೋನ್ 11 ಎಂದು ಟೆಕ್‌ಲೋಕದಲ್ಲಿ ಗಾಸಿಪ್ ಶುರುವಾಗಿದ್ದು, ಹೊಸ ಐಫೋನ್ ಹಿಂಭಾಗದಲ್ಲಿ ತ್ರಿವಳಿ ಕ್ಯಾಮರಾ ಹೊಂದಿದೆ.

ಚೌಕಾಕಾರದ ಕ್ಯಾಮರಾ ಸೆಟಪ್‌ನಲ್ಲಿ ಮೂರು ಕ್ಯಾಮರಾ ಮತ್ತು ಡ್ಯುಯಲ್ ಫ್ಲ್ಯಾಶ್ ಇದ್ದು, ಹೊಸ ವಿನ್ಯಾಸದ ಬಗ್ಗೆ ಗಮನ ಸೆಳೆದಿದೆ.
ಸ್ಲಾಶ್‌ಲೀಕ್ಸ್ ಪ್ರಕಾರ ಸೋರಿಕೆಯಾದ ಚಿತ್ರಗಳಲ್ಲಿ ಸ್ಮಾರ್ಟ್‌ಫೋನ್ ಹೊಸ ವಿನ್ಯಾಸದಲ್ಲಿ ಹಿಂಭಾಗದಲ್ಲಿ ಮೂರು ಕ್ಯಾಮರಾ ಮತ್ತು ಒಂದು ಸೆನ್ಸರ್, ಫ್ಲ್ಯಾಶ್ ಇದೆ.

ಹೊಸ ಐಫೋನ್ ಮತ್ತು ವಿನ್ಯಾಸದ ಬಗ್ಗೆ ಆ್ಯಪಲ್ ಯಾವುದೇ ಗುಟ್ಟುಬಿಟ್ಟುಕೊಟ್ಟಿಲ್ಲ. ಆದರೆ ಈ ವರ್ಷ ಆ್ಯಪಲ್ ಹೊಸ ಫೋನ್ ಬಿಡುಗಡೆಗೊಳಿಸುವುದು ಖಚಿತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌