ಆ್ಯಪ್ನಗರ

Google Play Store: ಮತ್ತಷ್ಟು ಆ್ಯಪ್‌ಗಳಿಗೆ ವೈರಸ್

ಗೂಗಲ್ ಅಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಒದಗಿಸುವ ಪ್ಲೇ ಸ್ಟೋರ್‌ನಲ್ಲಿ ಮತ್ತಷ್ಟು ಆ್ಯಪ್‌ಗಳು ವೈರಸ್ ಸಮಸ್ಯೆಗೆ ತುತ್ತಾಗಿವೆ. ಅವುಗಳನ್ನು ತೆಗೆದುಹಾಕಲು ಗೂಗಲ್ ಮುಂದಾಗಿದೆ.

Times Now 3 Oct 2019, 3:15 pm
ಆಂಡ್ರಾಯ್ಡ್ ಫೋನ್‌ಗಳಿಗೆ ಆ್ಯಪ್‌ ಒದಗಿಸುವ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸುಮಾರು 172 ಆ್ಯಪ್‌ಗಳಿಗೆ ಮತ್ತೆ ವೈರಸ್ ಸಮಸ್ಯೆ ಸೃಷ್ಟಿಯಾಗಿದೆ.
Vijaya Karnataka Web Google

ಸಂಶಯಾಸ್ಪದ ಮಾಲ್ವೇರ್ ಹೊಂದಿರುವ ಆ್ಯಪ್‌ಗಳನ್ನು ಗ್ರಾಹಕರು ಬಳಸಿದರೆ, ಅವರಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ.

ಜಾಹೀರಾತು, ವಿವಿಧ ಸೇವೆಗಳ ಚಂದಾದಾರಿಕೆ, ಎಸ್‌ಎಂಎಸ್ ಚಂದಾ, ಉಚಿತ ಆ್ಯಪ್‌ ಹೀಗೆ ವಿವಿಧ ರೀತಿಯಲ್ಲಿ ಆ್ಯಪ್‌ ಮೂಲಕ ಮಾಲ್ವೇರ್ ಬಳಕೆದಾರರ ಸ್ಮಾರ್ಟ್‌ಫೋನ್ ಪ್ರವೇಶಿಸಿರುವ ಸಾಧ್ಯತೆಯಿದೆ.

ಬಳಕೆದಾರರಿಗೆ ಅರಿವಿಲ್ಲದಂತೆಯೇ, ಅವರ ಅನುಮತಿಯಿಲ್ಲದೆ ಈ ಆ್ಯಡ್‌ವೇರ್ ಫೋನ್‌ನಲ್ಲಿ ಇನ್‌ಸ್ಟಾಲ್ ಆಗಿರುತ್ತದೆ. ಅವು ಬಳಕೆದಾರರ ಮಾಹಿತಿ ಕದಿಯುವ ಜತೆಗೆ, ಫೋನ್ ಕಾರ್ಯಾಚರಣ ವ್ಯವಸ್ಥೆಗೂ ಸಮಸ್ಯೆ ಸೃಷ್ಟಿಸುತ್ತಿವೆ.

ಗೂಗಲ್ ನಕಲಿ ಆ್ಯಪ್‌ ವಿರುದ್ಧ ಕಾಲಕಾಲಕ್ಕೆ ಸಮರ ಸಾರುತ್ತಿದ್ದು, ಪ್ಲೇ ಸ್ಟೋರ್‌ನಿಂದ ಅವುಗಳನ್ನು ಕಿತ್ತು ಹಾಕುತ್ತಿದೆ. ಅಲ್ಲದೆ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ದೃಢೀಕರಿಸಿದ ಆ್ಯಪ್‌ಗಳನ್ನು ಮಾತ್ರ ಬಳಸುವಂತೆ ಸೂಚನೆ ನೀಡುತ್ತದೆ. ಉಳಿದಂತೆ ಥರ್ಡ್‌ ಪಾರ್ಟಿ ಮೂಲಕ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿಕೊಂಡು, ಅವುಗಳನ್ನು ಬಳಸದಂತೆ ನಿರ್ದೇಶನ ನೀಡುತ್ತದೆ.

Galaxy Fold: ಸ್ಯಾಮ್‌ಸಂಗ್ ಮಡಚಬಲ್ಲ ಫೋನ್ ಬಿಡುಗಡೆ

ಆದರೆ ಕೆಲವು ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇಲ್ಲದ ಆ್ಯಪ್‌ಗಳನ್ನು ಕೂಡ ಇನ್‌ಸ್ಟಾಲ್ ಮಾಡುತ್ತಿರುವುದು ಸಮಸ್ಯೆ ಸೃಷ್ಟಿಸಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಚೈನೀಸ್ ಮೊಬೈಲ್ ಡೆವಲಪರ್ ಐಹ್ಯಾಂಡಿ ಅಭಿವೃದ್ಧಿಪಡಿಸಿದ್ದ 46 ಆ್ಯಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿತ್ತು.

Best Smartphone: 8 ಸಾವಿರ ಬಜೆಟ್‌ಗೆ ಬೆಸ್ಟ್‌ ಫೋನ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌