ಆ್ಯಪ್ನಗರ

WhatsApp, Telegram ನಿಂದ ಬಂದ ಆಡಿಯೋ ಫೈಲ್‌ಗಳೂ ಸುರಕ್ಷಿತವಲ್ಲ!

ವಾಟ್ಸ್ಆ್ಯಪ್, ಟೆಲಿಗ್ರಾಂ ಆ್ಯಪ್‌ಗಳ ಮೂಲಕ ಬಂದ ಫೈಲುಗಳನ್ನು ಆಂತರಿಕ ಅಥವಾ ಬಾಹ್ಯ ಸ್ಟೋರೇಜ್‌ನಲ್ಲಿ ಸೇವ್ ಮಾಡಿರುತ್ತೇವೆ. ಆದರೆ ಮಾಲ್‌ವೇರ್‌ಗಳು ಅದು ಹೇಗೋ ಸೇರಿಕೊಂಡು ಈ ಸ್ಟೋರೇಜ್‌ಗಳಿಗೆ ಆ್ಯಕ್ಸೆಸ್ ಪಡೆದಿರುತ್ತವೆ ಮತ್ತು ಅವುಗಳು ಫೋನ್‌ನಲ್ಲಿರುವ ಎಲ್ಲ ಫೈಲುಗಳನ್ನೂ, ಮಾಹಿತಿಯನ್ನೂ ಕೆಡಿಸಬಹುದಾಗಿವೆ.

Agencies 16 Jul 2019, 11:16 am
ಕ್ಯಾಲಿಫೋರ್ನಿಯಾ: ವಾಟ್ಸ್ಆ್ಯಪ್ ಹಾಗೂ ಟೆಲಿಗ್ರಾಂ ಮುಂತಾದ ಸಂದೇಶ ಸಂವಹನ ಆ್ಯಪ್‌ಗಳು ಎನ್‌ಕ್ರಿಪ್ಟ್ ಆಗಿವೆ, ಹೀಗಾಗಿ ಸುರಕ್ಷಿತ ಅಂತ ಅಂದುಕೊಂಡಿದ್ದೀರಾ? ತಡೀರಿ, ನಿಮ್ಮ ಭಾವನೆ ತಪ್ಪು. ಈ ಆ್ಯಪ್‌ಗಳ ಮೂಲಕ ಬಂದಿರುವ ಫೈಲ್‌ಗಳನ್ನು ನೀವು ಸೇವ್ ಮಾಡಿದ್ದರೆ, ಈ ಫೈಲ್‌ಗಳು ಕೂಡ ಮಾಲ್‌ವೇರ್ ಮತ್ತಿತರ ವೈರಸ್ ದಾಳಿಗೆ ಈಡಾಗಬಹುದು ಎಂಬುದನ್ನು ಕಂಪ್ಯೂಟರ್ ಸುರಕ್ಷತಾ ಕಂಪನಿ ಸಿಮಾಂಟೆಕ್‌ನ ಸಂಶೋಧಕರು ಬಹಿರಂಗಪಡಿಸಿದ್ದಾರೆ.
Vijaya Karnataka Web media files saved in the phones from whatsapp and telegram are vulnerable to attacks
WhatsApp, Telegram ನಿಂದ ಬಂದ ಆಡಿಯೋ ಫೈಲ್‌ಗಳೂ ಸುರಕ್ಷಿತವಲ್ಲ!


ಈ ರೀತಿಯ ಆ್ಯಪ್‌ಗಳ ಮೂಲಕ ಬರುವ ಮೀಡಿಯಾ (ಆಡಿಯೋ, ವೀಡಿಯೋ, ಝಿಪ್, ಡಾಕ್ಯುಮೆಂಟ್) ಫೈಲುಗಳನ್ನು ನಾವು ಒಂದೋ ಫೋನ್‌ನ ಆಂತರಿಕ ಸ್ಟೋರೇಜ್‌ನಲ್ಲಿ ಅಥವಾ ಬಾಹ್ಯ ಸ್ಟೋರೇಜ್‌ನಲ್ಲಿ (ಮೆಮೊರಿ ಕಾರ್ಡ್) ಸೇವ್ ಮಾಡಿಟ್ಟಿರುತ್ತೇವೆ. ಆದರೆ, ಈ ಸ್ಟೋರೇಜ್‌ಗಳಿಗೆ ಪ್ರವೇಶಾನುಮತಿ (ಆ್ಯಕ್ಸೆಸ್) ಪಡೆದುಕೊಳ್ಳಬಹುದಾದ ಕುತಂತ್ರಾಂಶಗಳು (ಮಾಲ್‌ವೇರ್) ಈ ಡೇಟಾದ ಮೇಲೂ ದಾಳಿ ಮಾಡಬಲ್ಲವು ಎಂದು ದಿ ವರ್ಜ್ ವರದಿ ಮಾಡಿದೆ.

ಈ ಸೈಬರ್ ದಾಳಿಗೆ 'ಮೀಡಿಯಾ ಫೈಲ್ ಜ್ಯಾಕಿಂಗ್' ಎಂದು ಹೆಸರು. ಯಾವುದಾದರೂ ಫೈಲ್‌ಗೆ ಆ್ಯಕ್ಸೆಸ್ ಪಡೆಯಲು ಅಥವಾ ಅದನ್ನು ಬದಲಾಯಿಸಲು ಹ್ಯಾಕರ್‌ಗಳಿಗೆ ಒಂದು ಕುತಂತ್ರಾಂಶದ ಆ್ಯಪ್ ಇದ್ದರೆ ಸಾಕಾಗುತ್ತದೆ. ವಾಸ್ತವವಾಗಿ, ನಮ್ಮ ಸಾಧನದಿಂದ ಹೊರಹೋಗುವ ಮಲ್ಟಿಮೀಡಿಯಾ ಸಂದೇಶವನ್ನು ಬಳಕೆದಾರರ ಗಮನಕ್ಕೆ ಬಾರದೆಯೇ ತಂತ್ರಾಂಶ ನಿಪುಣರು ಬದಲಾಯಿಸಬಹುದಾಗಿದೆ. ಈ ರೀತಿ ಆಗದಂತೆ ಏನು ಮಾಡಬಹುದೆಂದರೆ, ಆ್ಯಪ್‌ಗಳಿಗೆ ಪ್ರವೇಶಾನುಮತಿ (ಆ್ಯಕ್ಸೆಸ್) ನೀಡುವಾಗಲೇ ಬಳಕೆದಾರರು ಎಚ್ಚರ ವಹಿಸಿ, ಅನುಮತಿಯನ್ನು ಮಿತಿಗೊಳಿಸಬೇಕಾಗುತ್ತದೆ.

ದಿ ವರ್ಜ್ ವರದಿಯ ಪ್ರಕಾರ, ಈ ಆ್ಯಪ್‌ಗಳ ಮೂಲಕ ಬಂದ ಫೈಲುಗಳನ್ನು ಆಂತರಿಕ ಅಥವಾ ಬಾಹ್ಯ ಸ್ಟೋರೇಜ್‌ನಲ್ಲಿ ಉಳಿಸಬೇಕಾಗುತ್ತದೆ. ಮಾಲ್‌ವೇರ್ ಏನಾದರೂ ನಿಮ್ಮ ಸಾಧನಕ್ಕೆ ಪ್ರವೇಶಿಸಿದರೆ, ಮಾಲ್‌ವೇರ್‌ಗೆ ಕೂಡ ಈ ಫೈಲ್‌ಗಳಿಗೆ ಆ್ಯಕ್ಸೆಸ್ ದೊರೆಯುತ್ತದೆ ಮತ್ತು ಅವುಗಳು ಫೋನ್‌ನಲ್ಲಿರುವ ಎಲ್ಲ ಫೈಲುಗಳನ್ನೂ, ಮಾಹಿತಿಯನ್ನೂ ಕೆಡಿಸಬಹುದಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌