ಆ್ಯಪ್ನಗರ

Micromax Smartphone: 6GB RAM ಸಹಿತ ಹೊಸ ಫೋನ್ ಪರಿಚಯಿಸುತ್ತಿದೆ ಮೈಕ್ರೋಮ್ಯಾಕ್ಸ್

ಮೈಕ್ರೋಮ್ಯಾಕ್ಸ್ ಹೊಸ ಸರಣಿಯಲ್ಲಿ 6GB RAM ಮತ್ತು 128 GB ಸ್ಟೋರೇಜ್ ಆಯ್ಕೆ ಇರುವ ಪ್ರೀಮಿಯಂ ಫೀಚರ್ ಸಹಿತ ಹೊಸ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರೀಕ್ಷೆ ಹೊಂದಿದೆ.

Times Now 2 Dec 2020, 1:00 pm
ದೇಶದಲ್ಲಿ ಮೇಕ್ ಇನ್ ಇಂಡಿಯಾ ಮೂಲಕ ಮತ್ತೆ ಮಾರುಕಟ್ಟೆ ಪ್ರವೇಶಿಸಿರುವ ಮೈಕ್ರೋಮ್ಯಾಕ್ಸ್, ಚೀನಾ ಮೂಲದ ವಿವಿಧ ಬ್ರ್ಯಾಂಡ್‌ಗಳಿಗೆ ಸ್ಪರ್ಧೆ ಒಡ್ಡುತ್ತಿದೆ. ಆದರೆ ಪ್ರಸ್ತುತ ಆರಂಭಿಕ ಹಂತದ ಫೀಚರ್‌ನ ಫೋನ್‌ಗಳನ್ನು ಮಾತ್ರ ಮೈಕ್ರೋಮ್ಯಾಕ್ಸ್ ಮಾರುಕಟ್ಟೆಗೆ ಪರಿಚಯಿಸಿದೆ. ಮುಂದೆ ಹೆಚ್ಚಿನ ಸಾಮರ್ಥ್ಯದ ಫೀಚರ್ ಹೊಂದಿರುವ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮೈಕ್ರೋಮ್ಯಾಕ್ಸ್ ಮುಂದಾಗಿದೆ.
Vijaya Karnataka Web Micromax
Micromax


ಮೈಕ್ರೋಮ್ಯಾಕ್ಸ್ ಸ್ಮಾರ್ಟ್‌ಫೋನ್
ಮೈಕ್ರೋಮ್ಯಾಕ್ಸ್ ಸಹಸ್ಥಾಪಕ ರಾಹುಲ್ ಶರ್ಮಾ ಹೇಳುವಂತೆ, ಮುಂದಿನ ಹಂತದಲ್ಲಿ ಮೈಕ್ರೋಮ್ಯಾಕ್ಸ್ 6 GB RAM ಇರುವ ಹೊಸ ಫೋನ್ ಅನ್ನು ಬಿಡುಗಡೆ ಮಾಡಲಿದೆ. ಜತೆಗೆ ಅಧಿಕ ರಿಫ್ರೆಶ್ ರೇಟ್ ಮತ್ತು ಲಿಕ್ವಿಡ್ ಕೂಲಿಂಗ್ ಇರುವ ಫೋನ್‌ಗಳನ್ನು ಪರಿಚಯಿಸಲು ಮೈಕ್ರೋಮ್ಯಾಕ್ಸ್ ಮುಂದಾಗಿದೆ.

ಆಫ್‌ಲೈನ್‌ನಲ್ಲೂ ಸಿಗಲಿದೆ ಮೈಕ್ರೋಮ್ಯಾಕ್ಸ್
ಪ್ರಸ್ತುತ ಮೈಕ್ರೋಮ್ಯಾಕ್ಸ್ ಫೋನ್ ಆನ್‌ಲೈನ್ ಮಾರುಕಟ್ಟೆಯ ಮೂಲಕ ಮಾತ್ರ ದೊರೆಯುತ್ತದೆ. ಆದರೆ ಹೆಚ್ಚಿನ ಫೋನ್ ಬಳಕೆದಾರರು ಆಫ್‌ಲೈನ್ ಖರೀದಿ ಮಾಡುವುದರಿಂದ ಮತ್ತು ಎಲ್ಲ ಪ್ರದೇಶಗಳನ್ನು ತಲುಪುವ ಉದ್ದೇಶದಿಂದ ಮೈಕ್ರೋಮ್ಯಾಕ್ಸ್ ಸ್ಟೋರ್‌ಗಳಿಗೂ ಲಗ್ಗೆ ಇರಿಸಲಿದೆ.

Lenovo Legion 5: ನೂತನ ಗೇಮಿಂಗ್ ಲ್ಯಾಪ್‌ಟ್ಯಾಪ್ ಬಿಡುಗಡೆ ಮಾಡಿದ ಲೆನೋವೊ

6 GB RAM ಸಹಿತ ಹೊಸ ಫೋನ್
ಮೈಕ್ರೋಮ್ಯಾಕ್ಸ್ ಹೊಸ ಸರಣಿಯಲ್ಲಿ 6GB RAM ಮತ್ತು 128 GB ಸ್ಟೋರೇಜ್ ಆಯ್ಕೆ ಇರುವ ಪ್ರೀಮಿಯಂ ಫೀಚರ್ ಸಹಿತ ಹೊಸ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರೀಕ್ಷೆ ಹೊಂದಿದೆ.

Moto G 5G vs OnePlus Nord 5G: ಯಾವ ಫೋನ್ ಬೆಸ್ಟ್? ಫೀಚರ್ಸ್ ಹೋಲಿಕೆ ಇಲ್ಲಿದೆ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌