ಆ್ಯಪ್ನಗರ

Motorola One Fusion+: ಹೊಸ ಮೋಟೋರೊಲಾ ಫೋನ್ ಮಾರುಕಟ್ಟೆಗೆ ಲಗ್ಗೆ..

5000mAh ಬ್ಯಾಟರಿ ಜತೆಗೆ 15W ಟರ್ಬೋಪವರ್ ಚಾರ್ಜಿಂಗ್ ಬೆಂಬಲವಿದ್ದು, 2 ದಿನ ಬಾಳಿಕೆ ಬರಲಿದೆ ಎಂದು ಮೋಟೋರೊಲಾ ಹೇಳಿದೆ.

Times Now 16 Jun 2020, 3:28 pm
ಮೋಟೋರೊಲಾ ಸ್ಮಾರ್ಟ್‌ಪೋನ್ ಸರಣಿಯಲ್ಲಿ ಹೊಸ ಒನ್ ಫ್ಯೂಶನ್ ಪ್ಲಸ್ ದೇಶದ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಎಡ್ಜ್ ಟು ಎಡ್ಜ್ ಡಿಸ್‌ಪ್ಲೇ, ಹಿಂಬದಿಯಲ್ಲಿ ನಾಲ್ಕು ಕ್ಯಾಮರಾ ವ್ಯವಸ್ಥೆ, ಹೈಫೈ ಸ್ಪೀಕರ್ ಮತ್ತು ಗರಿಷ್ಠ ಬ್ಯಾಟರಿ ಬಾಳಿಕೆ ಇದರಲ್ಲಿದೆ. ಜತೆಗೆ 6 GB +128 GB ಸ್ಟೋರೇಜ್ ಎಂಬ ಒಂದೇ ಆವೃತ್ತಿಯಲ್ಲಿ ಹೊಸ ಮೋಟೋ ಫೋನ್ ಲಭ್ಯವಿದ್ದು, ಒಮ್ಮೆ ಚಾರ್ಜ್ ಮಾಡಿದರೆ ಎರಡು ದಿನ ಬ್ಯಾಟರಿ ಬಾಳಿಕೆ ಬರುತ್ತದೆ ಎಂದು ಮೋಟೋರೊಲಾ ಹೇಳಿದೆ. ಜತೆಗೆ ಫ್ಲಿಪ್‌ಕಾರ್ಟ್ ಮೂಲಕ ಹೊಸ ಒನ್ ಫ್ಯೂಶನ್ ಪ್ಲಸ್ ಫೋನ್ ಲಭ್ಯವಾಗಲಿದೆ.
Vijaya Karnataka Web Motorola One Fusion+
Motorola One Fusion+


ಮೋಟೋರೊಲಾ ಒನ್‌ ಫ್ಯೂಶನ್ ಪ್ಲಸ್
ಸ್ನ್ಯಾಪ್‌ಡ್ರ್ಯಾಗನ್ 730G ಚಿಪ್‌ಸೆಟ್ ಹೊಂದಿರುವ ಮೋಟೋ ಫೋನ್ 1TB ವರೆಗೆ ಮೆಮೊರಿ ಕಾರ್ಡ್ ಮೂಲಕ ವಿಸ್ತರಿತ ಸೌಲಭ್ಯ ಹೊಂದಿದೆ. ಅಲ್ಲದೆ, 64 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ ಇದರಲ್ಲಿದೆ.

ಬೆಲೆ ವಿವರ
ಹೊಸ ಮೋಟೋ ಫೋನ್ 16,999 ರೂ. ದರ ಹೊಂದಿದ್ದು, ಮೂನ್‌ಲೈಟ್ ವೈಟ್ ಮತ್ತು ಟ್ವಿಲೈಟ್ ಬ್ಲ್ಯಾಕ್ ಎಂಬ ಎರಡು ಬಣ್ಣಗಳಲ್ಲಿ ದೊರೆಯುತ್ತದೆ.

ಜೂನ್ 24ರಂದು ಮಧ್ಯಾಹ್ನ 12 ಗಂಟೆಗೆ ಮೊದಲ ಸೇಲ್ ನಡೆಯಲಿದ್ದು, ಫ್ಲಿಪ್‌ಕಾರ್ಟ್ ಮೂಲಕ ಲಭ್ಯವಿದೆ. ಜತೆಗೆ ನೋ ಕಾಸ್ಟ್ ಇಎಂಐ, ಕ್ಯಾಶ್‌ಬ್ಯಾಕ್ ಕೊಡುಗೆಯೂ ಲಭ್ಯ.

Nokia 5310: ಜನಪ್ರಿಯ ನೋಕಿಯಾ ಫೋನ್ ಮತ್ತೆ ಮಾರುಕಟ್ಟೆಗೆ ಬಿಡುಗಡೆ

ತಾಂತ್ರಿಕ ವಿವರ
6.5 ಇಂಚಿನ ಫುಲ್ HD+ ಟೋಟಲ್ ವಿಶನ್ ಡಿಸ್‌ಪ್ಲೇ
2340x1080 ಪಿಕ್ಸೆಲ್ ರೆಸೊಲ್ಯೂಶನ್
HDR10 ಬೆಂಬಲ ಹೊಂದಿದೆ.
ಒಕ್ಟಾ ಕೋರ್ ಪ್ರೊಸೆಸರ್ ಇದರಲ್ಲಿದೆ. ಜತೆಗೆ Adreno 618 GPU ಬೆಂಬಲ ಹೊಂದಿದೆ.
5000mAh ಬ್ಯಾಟರಿ ಜತೆಗೆ 15W ಟರ್ಬೋಪವರ್ ಚಾರ್ಜಿಂಗ್ ಬೆಂಬಲವಿದ್ದು, 2 ದಿನ ಬಾಳಿಕೆ ಬರಲಿದೆ ಎಂದು ಮೋಟೋರೊಲಾ ಹೇಳಿದೆ.
64+8+5+2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಇದರಲ್ಲಿದೆ.

Smartphone Price Hike: ಯಾವೆಲ್ಲ ಫೋನ್‌ಗಳಿಗೆ ಬೆಲೆ ಏರಿಕೆಯಾಗಿದೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌