ಆ್ಯಪ್ನಗರ

Motorola Razr: ಡಿಸೆಂಬರ್‌ನಲ್ಲಿ ಮಡಚಬಲ್ಲ ಫೋನ್

ಮಡಚಬಲ್ಲ ಫೋನ್‌ಗಳ ಕುರಿತು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚರ್ಚೆ ಆರಂಭವಾಗಿದೆ. ಈಗಾಗಲೇ ಸ್ಯಾಮ್‌ಸಂಗ್ ಮತ್ತು ಹುವೈ ಮಡಚಬಲ್ಲ ಫೋನ್ ಘೋಷಿಸಿವೆ. ಅದರ ಜತೆಗೆ ಮೋಟೋರೋಲಾ ಕೂಡ ಬರುತ್ತಿದೆ.

Times Now 22 Aug 2019, 11:15 am
ಮೋಟೋರೋಲಾದ ನೂತನ ಮೋಟೋ ರೇಜರ್ ಮಡಚಬಲ್ಲ ಫೋನ್ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸುವುದು ಖಚಿತವಾಗಿದೆ.
Vijaya Karnataka Web Moto

ಮೂಲಗಳ ಪ್ರಕಾರ ಡಿಸೆಂಬರ್ 2019ರ ಕೊನೆಗೆ ಹೊಸ ಪೋಲ್ಡೇಬಲ್ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

ಮೊದಲಿಗೆ ಅಮೆರಿಕದಲ್ಲಿ ಹೊಸ ಫೋನ್ ಬಿಡುಗಡೆಯಾಗಲಿದ್ದು, ನಂತರ ಯುರೋಪ್ ಮತ್ತು ಇತರ ಮಾರುಕಟ್ಟೆಗೆ ವಿಸ್ತರಿಸಲಿದೆ.

ಮೋಟೋರೋಲಾ ಈ ಹಿಂದೆ ಮೋಟೋ ರೇಜರ್ ಹೆಸರಿನ ಫೋನ್ ಪರಿಚಯಿಸಿತ್ತು. ಅದೇ ಹೆಸರಿನಲ್ಲಿ ಮಡಚಬಲ್ಲ ಡಿಸ್‌ಪ್ಲೇ ಸಹಿತ ನೂತನ ಫೋನ್ ಮಾರುಕಟ್ಟೆ ಪ್ರವೇಶಿಸಲಿದ್ದು, ಈ ಬಗ್ಗೆ ವರ್ಲ್ಡ್ ಇಂಟಲೆಕ್ಚುವಲ್ ಪ್ರಾಪರ್ಟಿ ಆರ್ಗನೈಸೇಷನ್‌ನಲ್ಲಿ ಪೇಟೆಂಟ್ ಅರ್ಜಿ ಕೂಡ ಸಲ್ಲಿಸಲಾಗಿದೆ.

Infinix Smart Discount: ಫ್ಲಿಪ್‌ಕಾರ್ಟ್ ಆಫರ್ ಸೇಲ್

ಮೋಟೋರೋಲಾ ಪ್ರಸ್ತುತ ಲೆನೋವೊ ತೆಕ್ಕೆಯಲ್ಲಿದೆ. ಡಿಸೆಂಬರ್ 2019ರ ಕೊನೆಯಲ್ಲಿ ಅಥವಾ ಜನವರಿ 2020ರಲ್ಲಿ ಹೊಸ ಫೋನ್ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಂದಾಜು ಬೆಲೆ 1,19,000 ರೂ. ಇರಬಹುದು ಎನ್ನಲಾಗಿದ್ದು, ಮೋಟೋರೋಲಾದ ಡ್ಯಾನ್ ಡೆರಿ ಈ ಬಗ್ಗೆ ಸೂಚನೆ ನೀಡಿದ್ದರು.

ಹೊಸ ಫೋನ್ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 710 SoC ಪ್ರೊಸೆಸರ್, 4 GB ಅಥವಾ 6GB RAM ಮತ್ತು 128 GBವರೆಗೆ ಸ್ಟೋರೇಜ್ ಹೊಂದಿರುವ ನಿರೀಕ್ಷೆಯಿದೆ.

Xiaomi Mi A3: ಶವೋಮಿಯ ಹೊಸ ಫೋನ್ ಬಿಡುಗಡೆ

ಅಲ್ಲದೆ 48 ಮೆಗಾಪಿಕ್ಸೆಲ್ ಕ್ಯಾಮರಾ, 12 ಮೆಗಾಪಿಕ್ಸೆಲ್ ಸೆಲ್ಫಿ ಇರಬಹುದು ಎಂದು ಅಂದಾಜಿಸಲಾಗಿದೆ.

Jio Giga Fiber Broadband: ನೋಂದಣಿ ಹೇಗೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌