ಆ್ಯಪ್ನಗರ

ನೋಕಿಯಾ 8.1 ಜಾಗತಿಕ ಎಂಟ್ರಿ; ಶೀಘ್ರದಲ್ಲೇ ಭಾರತಕ್ಕೆ

ಅತಿ ನೂತನ ನೋಕಿಯಾ 8.1 ಜಾಗತಿಕ ಪ್ರವೇಶ ಪಡೆದಿದ್ದು, ಡಿಸೆಂಬರ್ 8ರಂದು ನಡೆಯಲಿರುವ ಸಮಾರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಡ್ಯುಯಲ್ ರಿಯರ್ ಕ್ಯಾಮೆರಾ ಜತೆ zeiss ಆಪ್ಟಿಕ್ಸ್ ಪ್ರಮುಖ ಆಕರ್ಷಣೆಯಾಗಲಿದೆ.

Vijaya Karnataka Web 6 Dec 2018, 10:24 am
ಹೊಸದಿಲ್ಲಿ: ನೋಕಿಯಾ ಸ್ಮಾರ್ಟ್‌ಫೋನ್‌ಗಳ ಮಾರಾಟ ಹಕ್ಕನ್ನು ಹೊಂದಿರುವ ಎಚ್‌ಎಂಡಿ ಗ್ಲೋಬಲ್ ಸಂಸ್ಥೆಯು ಮಗದೊಂದು ಅತ್ಯಾಕರ್ಷಕ ನೋಕಿಯಾ 8.1 ಸ್ಮಾರ್ಟ್‌ಫೋನ್ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದೆ. ದುಬೈನಲ್ಲಿ ನಡೆದ ಸಮಾರಂಭದಲ್ಲಿ ಹೊಸ ನೋಕಿಯಾ 8.1 ಲಗ್ಗೆಯಿಟ್ಟಿದೆ.
Vijaya Karnataka Web nokia-8-1


ಆಂಡ್ರಾಯ್ಡ್ ಒನ್ ಭಾಗವಾಗಿರುವ ನೂತನ ನೋಕಿಯಾ 8.1 ಸ್ಮಾರ್ಟ್‌ಫೋನ್ ನೋಕಿಯಾ 7 ಪ್ಲಸ್ ಮಾದರಿಯ ಉತ್ತರಾಧಿಕಾರಿಯೆನಿಸಲಿದೆ.

ಮುಖ್ಯಾಂಶಗಳು:
6.18 ಇಂಚುಗಳ ಪ್ಯೂರ್ ಡಿಸ್‌ಪ್ಲೇ,
HDR10 ಬೆಂಬಲ,
ಡ್ಯುಯಲ್ ರಿಯರ್ ಕ್ಯಾಮೆರಾ ಜತೆ Zeiss ಆಪ್ಟಿಕ್ಸ್,
ಸ್ನ್ಯಾಪ್‌ಡ್ರಾಗನ್ 710 SoC,
ಆಂಡ್ರಾಯ್ಡ್ 9 ಪೈ,
3500mAh ಬ್ಯಾಟರಿ,
18W ಫಾಸ್ಟ್ ಚಾರ್ಜಿಂಗ್,

ಬೆಲೆ: EUR 399 (ಅಂದಾಜು 31,900 ರೂ. ). ಭಾರತದಲ್ಲಿ ಇದರ ಬೆಲೆ ಇನ್ನಷ್ಟೇ ನಿಗದಿಯಾಗಬೇಕಿದೆ.

ಬಣ್ಣಗಳು: ಬ್ಲೂ, ಸಿಲ್ವರ್, ಸ್ಟೀಲ್, ಕಾಪರ್, ಐಯಾನ್ ಸ್ಟೀಲ್ ಡ್ಯುಯಲ್ ಟೋನ್

ಭಾರತಕ್ಕೆ ಯಾವಾಗ?
ಹೊಸದಿಲ್ಲಿಯಲ್ಲಿ ಡಿಸೆಂಬರ್ 10ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ವಿಶೇಷತೆಗಳು:
ಡ್ಯುಯಲ್ ಸಿಮ್ (ನ್ಯಾನೋ),
ಆಂಡ್ರಾಯ್ಡ್ 9 ಪೈ,
6.18 ಇಂಚುಗಳ HD+ (1080x2244 ಪಿಕ್ಸೆಲ್) ಡಿಸ್‌ಪ್ಲೇ,
HDR10 ಬೆಂಬಲ,
ಒಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 710 SoC,

ಸ್ಟೋರೆಜ್:
4GB LPDDR4x RAM,
64GB ಆಂತರಿಕ ಸ್ಟೋರೆಜ್

ರಿಯರ್ ಕ್ಯಾಮೆರಾ:
Zeiss ಆಪ್ಟಿಕ್ಸ್,
12 MP + 13 MP,
ಡ್ಯುಯಲ್ LED ಫ್ಲ್ಯಾಶ್,

ಫ್ರಂಟ್ ಕ್ಯಾಮೆರಾ:
20 MP,
Bothie ಫೀಚರ್,
bokeh ಎಫೆಕ್ಟ್

ಬ್ಯಾಟರಿ: 3,500mAh, 18W ಫಾಸ್ಟ್ ಚಾರ್ಜಿಂಗ್,
ಆಯಾಮ: 154.8x75.76x7.97mm
ಭಾರ: 178 ಗ್ರಾಂ.
ಕನೆಕ್ಟಿವಿಟಿ: 4G VoLTE, Wi-Fi 802.11ac, VoWiFi, ಬ್ಲೂಟೂತ್ v5.0, GPS/ A-GPS, FM radio, a 3.5mm ಹೆಡ್‌ಫೋನ್ ಜ್ಯಾಕ್, USB Type-C ಪೋರ್ಟ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌