ಆ್ಯಪ್ನಗರ

PubG Ban: ನೇಪಾಳದಲ್ಲಿ ಪಬ್‌ಜಿಗೆ ನಿಷೇಧ

ಭಾರತದಲ್ಲೂ ಹಲವೆಡೆ ಪಬ್‌ಜಿಗೆ ನಿರ್ಬಂಧ ಹೇರುವಂತೆ ಒತ್ತಾಯ ಕೇಳಿಬಂದಿದೆ. ಜತೆಗೆ ಇತ್ತೀಚೆಗೆ ಯುಎಇಯಲ್ಲೂ ಪಾಲಕರು ಪಬ್‌ಜಿ ನಿಷೇಧಿಸುವಂತೆ ಕೇಳಿಕೊಂಡಿದ್ದರು.

Vijaya Karnataka Web 12 Apr 2019, 11:53 am
ಆನ್‌ಲೈನ್‌ನ ಜನಪ್ರಿಯ ಗೇಮ್ ಪಬ್‌ಜಿಗೆ ನೇಪಾಳ ನಿಷೇಧ ಹೇರಿದೆ. ಪಬ್‌ಜಿಗೆ ನಿಷೇಧ ಹೇರುವಂತೆ ನೇಪಾಳ ಟೆಲಿಕಮ್ಯೂನಿಕೇಷನ್ಸ್‌ ಪ್ರಾಧಿಕಾರ ಆದೇಶ ಹೊರಡಿಸಿದೆ.
Vijaya Karnataka Web PubG


ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಹಿಂಸಾಪ್ರವೃತ್ತಿಯನ್ನು ಪ್ರಚೋದಿಸುತ್ತದೆ ಎಂದು ಹೇಳಿರುವ ಪ್ರಾಧಿಕಾರದ ಉಪನಿರ್ದೇಶಕ ಸಂದೀಪ್ ಅಧಿಕಾರಿ, ಮಕ್ಕಳು ಶಾಲಾ ಕೆಲಸ ಬಿಟ್ಟು, ದಿನಪೂರ್ತಿ ಪಬ್‌ಜಿ ಆಟದಲ್ಲಿ ವ್ಯಸ್ತರಾಗುತ್ತಿದ್ದಾರೆ. ಇದರಿಂದ ಅವರ ಆರೋಗ್ಯ ಮತ್ತು ಇತರ ಚಟುವಟಿಕೆಗಳ ಮೇಲೆ ದುಷ್ಪರಿಣಾಮವಾಗುತ್ತಿದೆ.

ಹೀಗಾಗಿ ಎಲ್ಲ ಮೊಬೈಲ್ ಮತ್ತು ಇಂಟರ್‌ನೆಟ್ ಸೇವಾದಾರ ಸಂಸ್ಥೆಗಳು ಕೂಡಲೇ ಗೇಮ್‌ಗೆ ಪ್ರವೇಶ ನೀಡುವುದನ್ನು ನಿಲ್ಲಿಸಬೇಕು. ನಿಷೇಧ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.

ಭಾರತದಲ್ಲೂ ಹಲವೆಡೆ ಪಬ್‌ಜಿಗೆ ನಿರ್ಬಂಧ ಹೇರುವಂತೆ ಒತ್ತಾಯ ಕೇಳಿಬಂದಿದೆ. ಜತೆಗೆ ಇತ್ತೀಚೆಗೆ ಯುಎಇಯಲ್ಲೂ ಪಾಲಕರು ಪಬ್‌ಜಿ ನಿಷೇಧಿಸುವಂತೆ ಕೇಳಿಕೊಂಡಿದ್ದರು.

ಪಬ್‌ಜಿ ಆಡುತ್ತಾ ಕೂರುವ ಮಕ್ಕಳು, ಊಟ ನಿದ್ರೆ ಬಿಡುತ್ತಿದ್ದಾರೆ. ಗೇಮ್‌ನಲ್ಲೇ ಕಾಲ ಕಳೆಯುವುದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌