ಆ್ಯಪ್ನಗರ

Netflix Free Movies: ಲಾಗಿನ್ ಆಗದೆಯೇ ಉಚಿತವಾಗಿ ಸಿನಿಮಾ ನೋಡಿ..

ನೆಟ್‌ಫ್ಲಿಕ್ಸ್ ಜಾಗತಿಕವಾಗಿ ಕೆಲವೊಂದು ಸರಣಿಗಳನ್ನು ಉಚಿತವಾಗಿ ವೀಕ್ಷಿಸಲು ಅನುವು ಮಾಡಿಕೊಟ್ಟಿದೆ. ಯಾವುದೇ ಲಾಗಿನ್ ಇಲ್ಲದೆ, ಶುಲ್ಕ ಪಾವತಿಸದೆಯೇ ಸಿನಿಮಾ ನೋಡಬಹುದಾಗಿದೆ.

Times Now 31 Aug 2020, 5:58 pm
ಒಟಿಟಿ ಮತ್ತು ಆನ್‌ಲೈನ್ ಸ್ಟ್ರೀಮಿಂಗ್ ಸೇವೆಗಳ ಪೈಕಿ ಜನಪ್ರಿಯವಾಗಿರುವ ನೆಟ್‌ಫ್ಲಿಕ್ಸ್ ಈ ಬಾರಿ ಕೆಲವೊಂದು ಒರಿಜಿನಲ್ಸ್ ಮತ್ತು ವೆಬ್‌ ಸಿರೀಸ್‌ಗಳನ್ನು ಉಚಿತವಾಗಿ ಸ್ಟ್ರೀಮಿಂಗ್‌ಗೆ ಅವಕಾಶ ಕಲ್ಪಿಸಿದೆ. ನೆಟ್‌ಫ್ಲಿಕ್ಸ್ ಚಂದಾದರ ತಿಂಗಳಿಗೆ 199 ರೂ.ನಿಂದ ಆರಂಭವಾಗಿ, 799 ರೂ.ವರೆಗೆ ಇದೆ.
Vijaya Karnataka Web Netflix
Netflix


ನೆಟ್‌ಫ್ಲಿಕ್ಸ್ ಜಾಗತಿಕವಾಗಿ ಕೆಲವೊಂದು ಸರಣಿಗಳನ್ನು ಉಚಿತವಾಗಿ ವೀಕ್ಷಿಸಲು ಅನುವು ಮಾಡಿಕೊಟ್ಟಿದೆ. ನೆಟ್‌ಫ್ಲಿಕ್ಸ್ ಚಂದಾದಾರಲ್ಲದವರಿಗೆ ಈ ಅವಕಾಶವಿದ್ದು, ಉಚಿತ ಸಿನಿಮಾ ಮತ್ತು ಸಿರೀಸ್ ಅನ್ನು ಲಾಗಿನ್ ಆಗದೆಯೇ ನೋಡಬಹುದಾಗಿದೆ. ಅಕೌಂಟ್ ಕ್ರಿಯೇಟ್ ಮಾಡದೆಯೇ ಸಿನಿಮಾ ವೀಕ್ಷಿಸಲು ಇದರಲ್ಲಿ ಸಾಧ್ಯವಾಗುತ್ತದೆ.

ನೆಟ್‌ಫ್ಲಿಕ್ಸ್ ಉಚಿತ ವೀಕ್ಷಣೆ ಹೇಗೆ?
ನಿಮ್ಮ ಕಂಪ್ಯೂಟರ್, ಲ್ಯಾಪ್‌ಟಾಪ್ ಅಥವಾ ಆಂಡ್ರಾಯ್ಡ್ ಫೋನ್‌ನಲ್ಲಿ www.netflix.com/in/watch-free ತೆರೆಯಿರಿ.

Netflix


ಅಲ್ಲಿ ಕಾಣಿಸಿಕೊಳ್ಳುವ ವಿವಿಧ ಸಿನಿಮಾ, ಒರಿಜಿನಲ್ಸ್, ಸಾಕ್ಷ್ಯಚಿತ್ರ ಮತ್ತು ವೆಬ್‌ ಸರಣಿ ಮೇಲೆ ಕ್ಲಿಕ್ ಮಾಡಿದಾಗ ಸಿನಿಮಾ ಆರಂಭವಾಗುತ್ತದೆ.
ಯಾವುದೇ ಲಾಗಿನ್ ಇಲ್ಲದೆ, ಶುಲ್ಕ ಪಾವತಿಸದೆಯೇ ಉಚಿತ ಸಿನಿಮಾ ನೋಡಬಹುದಾಗಿದೆ.

Xiaomi Mi TV: ಶವೋಮಿ ಎಂಐ ಟಿವಿ ಬೆಲೆ ಏರಿಕೆ ಸಾಧ್ಯತೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌