ಆ್ಯಪ್ನಗರ

AirPods: ಸೆಪ್ಟೆಂಬರ್‌ನಲ್ಲಿ ಹೊಸ ಏರ್‌ಪಾಡ್ಸ್ ಮಾರುಕಟ್ಟೆಗೆ?

ಆ್ಯಪಲ್‌ನ ಏರ್‌ಪಾಡ್ ಈಗಾಗಲೇ ಜನಪ್ರಿಯತೆ ಗಳಿಸಿದ್ದು, ಇತರ ಕಂಪನಿಗಳು ಕೂಡ ಅದನ್ನೇ ಅನುಸರಿಸಿ, ವೈರ್‌ಲೆಸ್ ಇಯರ್‌ಫೋನ್ ಪರಿಚಯಿಸಿವೆ.

Agencies 14 Jul 2019, 5:10 pm
ಆ್ಯಪಲ್‌ ಕಂಪನಿಯು ಸೆಪ್ಟೆಂಬರ್‌ನಲ್ಲಿ ಹೊಸ ಐಫೋನ್‌ ಮಾದರಿ ಬಿಡುಗಡೆ ಮಾಡಲಿದ್ದು, ಇದರ ಜತೆಗೆ ಮುಂದಿನ ತಲೆಮಾರಿನ ಏರ್‌ಪಾಡ್‌ಗಳನ್ನು ಮಾರುಕಟ್ಟೆಗೆ ಪರಿಚಯಸಲಿದೆ. ವಿಶೇಷ ಎಂದರೆ, 2018ರ ಜೂನ್‌ನಲ್ಲಿ ಆ್ಯಪಲ್‌ ಏರ್‌ಪಾಡ್‌ 3 ಬಿಡುಗಡೆ ಮಾಡಲಿದೆ ಎಂದು ವೆಬ್‌ಸೈಟ್‌ವೊಂದು ವರದಿ ಮಾಡಿತ್ತು.
Vijaya Karnataka Web Apple


ಆದರೆ, ಆ್ಯಪಲ್‌ ಕಂಪನಿಯು ವಾಟರ್‌ಪ್ರೂಫ್‌ ಏರ್‌ಪಾಡ್‌ಗಳ ಮೇಲೆ ಕೆಲಸ ಮಾಡುತ್ತಿದ್ದು, ಅದೀಗ ವಿಳಂಬವಾಗುತ್ತಿದೆ. ಇದರ ಜತೆಗೆ ನಾಯ್ಸ್‌ ಕ್ಯಾನ್ಷಲೇಷನ್‌ ಫೀಚರ್‌ ಅನ್ನು ಏರ್‌ಪಾಡ್‌ಗಳಿಗೆ ಸೇರ್ಪಡೆಗೊಳಿಸಲಾಗುತ್ತಿದೆ.

ಹಾಗಾಗಿ, ಆ್ಯಪಲ್‌ನ ಹೊಸ ಮಾದರಿಯ ಈ ಏರ್‌ಪಾಡ್‌ಗಳು ಹೆಚ್ಚು ಅತ್ಯಾಧುನಿಕವಾಗಿರಲಿವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಏರ್‌ಪಾಡ್‌ 2 ಸಾಧನಗಳನ್ನು 2019ರ ಮಾರ್ಚ್‌ನಲ್ಲಿ ಕಂಪನಿ ಬಿಡುಗಡೆ ಮಾಡಿದ್ದು, ಇದಕ್ಕೆ ಸಿರಿ ವಾಯ್ಸ್‌ ಅಸಿಸ್ಟಂಟ್‌ ನೆರವು ನೀಡುತ್ತದೆ.

ಇವುಗಳ ಬೆಲೆ 14,900 ರೂ. ಇದ್ದು, ಇದರ ಜತೆಗೆ ವೈರ್‌ಲೆಸ್‌ ಚಾರ್ಜಿಂಗ್‌ ಸೌಲಭ್ಯವಿರುವ ಏರ್‌ಪಾಡ ಕೂಡ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇದರ ಮೌಲ್ಯ 18,900 ರೂ. ವೈರ್‌ಲೆಸ್‌ ಚಾರ್ಜಿಂಗ್‌ ಕೇಸ್‌ಗಳನ್ನು ಗ್ರಾಹಕರು ಪ್ರತ್ಯೇಕವಾಗಿ ಖರೀದಿಸುವ ಅವಕಾಶವನ್ನು ಆ್ಯಪಲ್‌ ಕಂಪನಿ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌