ಆ್ಯಪ್ನಗರ

3G ಸೇವೆಯೊಂದಿಗೆ ಬರುತ್ತಿದೆ ನೋಕಿಯಾ 3310

ಜನಪ್ರಿಯ ನೋಕಿಯಾ 3310 ಫೋನ್ ರಿ ಲಾಂಚ್ ಮಾಡಿದಾಗ ತ್ರಿಜಿ ಸೇವೆಯ ಕೊರತೆಯನ್ನು ಅನುಭವಿಸಿತ್ತು. ಇದೀಗ ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಎಚ್ಎಂಡಿ ಗ್ಲೋಬಲ್ ಸಂಸ್ಥೆಯು, ತ್ರಿಜಿ ಸೇವೆಯೊಂದಿಗೆ ನೋಕಿಯಾ 3310 ಪರಿಚಯಿಸಿದೆ.

Gadgets Now 28 Sep 2017, 5:56 pm
ಹೊಸದಿಲ್ಲಿ: ಜನಪ್ರಿಯ ನೋಕಿಯಾ 3310 ಫೋನ್ ರಿ ಲಾಂಚ್ ಮಾಡಿದಾಗ ತ್ರಿಜಿ ಸೇವೆಯ ಕೊರತೆಯನ್ನು ಅನುಭವಿಸಿತ್ತು. ಇದೀಗ ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಎಚ್ಎಂಡಿ ಗ್ಲೋಬಲ್ ಸಂಸ್ಥೆಯು, ತ್ರಿಜಿ ಸೇವೆಯೊಂದಿಗೆ ನೋಕಿಯಾ 3310 ಪರಿಚಯಿಸಿದೆ.
Vijaya Karnataka Web nokia 3310 with 3g connectivity launched
3G ಸೇವೆಯೊಂದಿಗೆ ಬರುತ್ತಿದೆ ನೋಕಿಯಾ 3310


ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಮಾರುಕಟ್ಟೆ ತಲುಪಲಿರುವ ನೋಕಿಯಾ 3310 ತ್ರಿಜಿ ಕನೆಕ್ಟಿವಿಟಿ ಫೋನ್ ಬಳಿಕ ಭಾರತವನ್ನು ತಲುಪಲಿದೆ. ಭಾರತದಲ್ಲಿ ಇದು ಎಷ್ಟು ದುಬಾರಿಯಾಗಲಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ಬಣ್ಣಗಳು: ಯಲ್ಲೊ, ವಾರ್ಮ್ ರೆಡ್, ಅಝೂರ್ ಮತ್ತು ಕಾರ್ಕೋಲ್.

ಬ್ಯಾಟರಿ: 1200mAh

2.4 ಇಂಚುಗಳ QVGA (240x320 ಪಿಕ್ಸೆಲ್) ಡಿಸ್‌ಪ್ಲೇ ಮಗದೊಂದು ಪ್ರಮುಖ ಆಕರ್ಷಣೆಯಾಗಿದೆ. ಈ ಡ್ಯುಯಲ್ ಸಿಮ್ ಹ್ಯಾಂಡ್ ಸೆಟ್ 2ಎಂಪಿ ಕ್ಯಾಮೆರಾ ಜೊತೆಗೆ 16ಎಂಬಿ ಇನ್‌ಬಿಲ್ಟ್ ಸ್ಟೋರೆಜ್ ಹೊಂದಿರುತ್ತದೆ. ಅಲ್ಲದೆ ಮೈಕ್ರೋ ಎಸ್‌ಡಿ ಲಗತ್ತಿಸುವ ಮೂಲಕ 32 ಜಿಬಿ ವರೆಗೂ ವರ್ಧಿಸಬಹುದಾಗಿದೆ.

ಅಂದ ಹಾಗೆ ನೋಕಿಯಾ 6, ನೋಕಿಯಾ 5 ಮತ್ತು ನೋಕಿಯಾ 3 ಮೂಲಕ ಜಾಗತಿಕ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದು, ಇತ್ತೀಚೆಗಷ್ಟೇ ಡ್ಯುಯಲ್ ರಿಯರ್ ಕ್ಯಾಮೆರಾ ಸೌಲಭ್ಯದ ನೋಕಿಯಾ 8 ಸ್ಮಾರ್ಟ್‌ಫೋನ್ ಪರಿಚಯಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌