ಆ್ಯಪ್ನಗರ

ನೋಕಿಯಾ 6: ತಿಂಗಳೊಳಗೆ 2ನೇ ಬಾರಿ ಬೆಲೆ ಕಡಿತ

ಕಳೆದ ಒಂದು ತಿಂಗಳೊಳಗೆ ನೋಕಿಯಾ 6 3ಜಿಬಿ ರ‍್ಯಾಮ್ ಸ್ಮಾರ್ಟ್‌ಫೋನ್‌ಗೆ ಎರಡನೇ ಬಾರಿಗೆ ಬೆಲೆ ಕಡಿತವುಂಟಾಗಿದೆ.

Gadgets Now 4 Apr 2018, 2:53 pm
ಹೊಸದಿಲ್ಲಿ: ಕಳೆದ ಒಂದು ತಿಂಗಳೊಳಗೆ ನೋಕಿಯಾ 6 3ಜಿಬಿ ರ‍್ಯಾಮ್ ಸ್ಮಾರ್ಟ್‌ಫೋನ್‌ಗೆ ಎರಡನೇ ಬಾರಿಗೆ ಬೆಲೆ ಕಡಿತವುಂಟಾಗಿದೆ.
Vijaya Karnataka Web nokia-6-01


14,999 ರೂ.ಗಳಷ್ಟಿದ್ದ ನೋಕಿಯಾ 6 3ಜಿಬಿ ರ‍್ಯಾಮ್ ಸ್ಮಾರ್ಟ್‌ಫೋನ್‌ಗೆ ಆರಂಭದಲ್ಲಿ 1,500 ರೂ.ಗಳಷ್ಟು ಬೆಲೆ ಕಡಿತವಾಗಿ 13,499 ರೂ.ಗಳಿಗೆ ತಲುಪಿತ್ತು. ಇದೀಗ ಮತ್ತೆ 500 ರೂ.ಗಳಷ್ಟು ಬೆಲೆ ಇಳಿಕೆಗೊಂಡು 12,999 ರೂ.ಗಳಿಗೆ ತಲುಪಿದೆ.

ಏಪ್ರಿಲ್ 04ರಂದು ನೋಕಿಯಾ ಹೊಸ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿದೆ. ಇದರಂತೆ ನೋಕಿಯಾ 6 ಉತ್ತರಾಧಿಕಾರಿ ಸಹ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರಂತೆ ಈಗಿರುವ ಮಾದರಿಗೆ ಬೆಲೆ ಕಡಿತವುಂಟಾಗಿದೆ.

ಪ್ರಮುಖ ವೈಶಿಷ್ಟ್ಯಗಳು:
5.5 ಇಂಚುಗಳ ಸಂಪೂರ್ಣ ಎಚ್‌ಡಿ ಡಿಸ್‌ಪ್ಲೇ,
1080x1920 ಪಿಕ್ಸೆಲ್ ರೆಸೊಲ್ಯೂಷನ್,
ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3,
ಒಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 430 ಪ್ರೊಸೆಸರ್,
32ಜಿಬಿ ಆಂತರಿಕ ಸ್ಟೋರೆಜ್
16ಎಂಪಿ ರಿಯರ್ ಕ್ಯಾಮೆರಾ,
8ಎಂಪಿ ಫ್ರಂಟ್ ಕ್ಯಾಮೆರಾ,
ಎಲ್‌ಇಡಿ ಫ್ಲ್ಯಾಶ್,
3000mah ಬ್ಯಾಟರಿ,
ಕನೆಕ್ಟಿವಿಟಿ: 4ಜಿ, VoLTE, 3ಜಿ, ವೈ-ಫೈ, ಬ್ಲೂಟೂತ್, ಜಿಪಿಎಸ್, ಯುಎಸ್‌ಬಿ ಓಟಿಜಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌