ಆ್ಯಪ್ನಗರ

Nokia Smart TV: ಆಕರ್ಷಕ ಸ್ಮಾರ್ಟ್ ‌ಟಿವಿ ಬಿಡುಗಡೆ ಮಾಡಿದ ನೋಕಿಯಾ!

ನೂತನ ಸರಣಿಯಲ್ಲಿ 6 ಹೊಸ ಮಾದರಿಗಳನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. 32 ಇಂಚಿನ ಡಿಸ್‌ಪ್ಲೇನಿಂದ ಆರಂಭಿಸಿ, 65 ಇಂಚಿನ ಡಿಸ್‌ಪ್ಲೇ ವರೆಗಿನ ಟಿವಿಗಳನ್ನು ನೋಕಿಯಾ ದೇಶದಲ್ಲಿ ಪರಿಚಯಿಸಿದೆ.

TNN & Agencies 7 Oct 2020, 12:49 pm
ಬೇಸಿಕ್ ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಪ್ರಸಿದ್ಧ ಹೆಸರು ನೋಕಿಯಾ, ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೂ ಕಾಲಿರಿಸಿದೆ. ಅದರ ಜತೆಗೆ, ಕಳೆದ ಎರಡು ವರ್ಷಗಳಿಂದ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲೂ ನೋಕಿಯಾ ಹೊಸ ಮಾದರಿ ಟಿವಿ ಬಿಡುಗಡೆ ಮಾಡುವ ಮೂಲಕ ಸ್ಪರ್ಧೆಗೆ ಇಳಿದಿದೆ. ಈ ಬಾರಿ ನೋಕಿಯಾ Onkyo ಸೌಂಡ್‌ಬಾರ್ ಸಹಿತ ಆರು ಹೊಸ ಮಾದರಿಯ ಸ್ಮಾರ್ಟ್ ಟಿವಿ ಬಿಡುಗಡೆ ಮಾಡಿದೆ.
Vijaya Karnataka Web Nokia Smart TV
Nokia Smart TV


ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಮೂಲಕ ನೋಕಿಯಾ ಕಂಪನಿಯ ಹೊಸ ಟಿವಿ ದೇಶದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈ ಸಂಬಂಧ ನೋಕಿಯಾ ಫ್ಲಿಪ್‌ಕಾರ್ಟ್ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್‌ನಲ್ಲಿ ನೋಕಿಯಾ ಹೊಸ ಟಿವಿ ಗ್ರಾಹಕರಿಗೆ ದೊರೆಯಲಿದೆ.

ಹೊಸ ಟಿವಿ ಸರಣಿ
ನೋಕಿಯಾ ನೂತನ ಟಿವಿ ಸರಣಿಯಲ್ಲಿ 4K, ಫುಲ್ HD ಮತ್ತು HD ರೆಡಿ ಎಂಬ ಮೂರು ಹೊಸ ಆಯ್ಕೆಯ ಟಿವಿ ಲಭ್ಯವಾಗಲಿದೆ. ಆಂಡ್ರಾಯ್ಡ್ 9 ಪೈ ಟಿವಿ ಓಎಸ್ ಆಧಾರಿತ ಆಪರೇಟಿಂಗ್ ಸಿಸ್ಟಂ ಹೊಸ ನೋಕಿಯಾ ಟಿವಿಯಲ್ಲಿದೆ.

Sony Z8H: 14 ಲಕ್ಷ ರೂ. ಮೌಲ್ಯದ ನೂತನ 8K LED TV ಬಿಡುಗಡೆ ಮಾಡಿದ ಸೋನಿ

ಬೆಲೆ ಎಷ್ಟಿದೆ?
ನೋಕಿಯಾ ನೂತನ ಸರಣಿಯಲ್ಲಿ 6 ಹೊಸ ಮಾದರಿಗಳನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. 32 ಇಂಚಿನ ಡಿಸ್‌ಪ್ಲೇನಿಂದ ಆರಂಭಿಸಿ, 65 ಇಂಚಿನ ಡಿಸ್‌ಪ್ಲೇ ವರೆಗಿನ ಟಿವಿಗಳನ್ನು ನೋಕಿಯಾ ದೇಶದಲ್ಲಿ ಪರಿಚಯಿಸಿದೆ.

32 ಇಂಚು HD ರೆಡಿ ಟಿವಿ ಬೆಲೆ 12,999 ರೂ.
43 ಇಂಚು ಫುಲ್ HD ಟಿವಿ ಬೆಲೆ 22,999 ರೂ.
43 ಇಂಚು 4K Ultra HD ಟಿವಿ ಬೆಲೆ 28,999 ರೂ.
50 ಇಂಚಿನ 4K ಟಿವಿ ಬೆಲೆ 33,999 ರೂ.,
55 ಇಂಚಿನ 4K ಟಿವಿ ದರ 39,999 ರೂ.
65 ಇಂಚಿನ 4K ಟಿವಿ ಬೆಲೆ 59,999 ರೂ. ಇರಲಿದೆ.

Apple Event: ಅ. 13ರಂದು ಹೊಸ ಆ್ಯಪಲ್ ಐಫೋನ್ ಸಿರೀಸ್ 12 ಬಿಡುಗಡೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌