ಆ್ಯಪ್ನಗರ

Nokia 4.2: ಬೆಲೆ, ವೈಶಿಷ್ಟ್ಯ, ವಿವರಗಳು

ನೋಕಿಯಾ ಆನ್‌ಲೈನ್‌ನಲ್ಲಿ ಮಾತ್ರವಲ್ಲದೆ, ಆಫ್‌ಲೈನ್ ಸ್ಟೋರ್, ಮೊಬೈಲ್ ಶೋರೂಂನಲ್ಲೂ ನೋಕಿಯಾ 4.2 ದೊರೆಯಲಿದೆ.

Agencies 9 May 2019, 1:18 pm
ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಿಕ ಬ್ರ್ಯಾಂಡ್ ನೋಕಿಯಾ ದೇಶದಲ್ಲಿ ನೋಕಿಯಾ 4.2 ಮಾದರಿಯನ್ನು ಬಿಡುಗಡೆ ಮಾಡಿದೆ.
Vijaya Karnataka Web Nokia


ಗೂಗಲ್ ಅಂಡ್ರಾಯ್ಡ್ ಒನ್ ಸ್ಮಾರ್ಟ್‌ಫೋನ್ ಒಎಸ್ ಬೆಂಬಲಿತ ನೋಕಿಯಾ ಸ್ಮಾರ್ಟ್‌ಫೋನ್, ಗೂಗಲ್ ಅಸಿಸ್ಟೆಂಟ್ ಸ್ವಿಚ್ ಮತ್ತು ಪವರ್ ಬಟನ್‌ನಲ್ಲಿ ನೋಟಿಫಿಕೇಷನ್ ಲೈಟ್ ಹೊಂದಿದೆ.

3 GB ಮತ್ತು 32 GB ಮಾದರಿಗೆ ದೇಶದಲ್ಲಿ 10,990 ರೂ. ಬೆಲೆ ನಿಗದಿಪಡಿಸಲಾಗಿದೆ. ನೋಕಿಯಾ ಆನ್‌ಲೈನ್‌ನಲ್ಲಿ ಮಾತ್ರವಲ್ಲದೆ, ಆಫ್‌ಲೈನ್ ಸ್ಟೋರ್, ಮೊಬೈಲ್ ಶೋರೂಂನಲ್ಲೂ ನೋಕಿಯಾ 4.2 ದೊರೆಯಲಿದೆ.

5.71 ಇಂಚಿನ ಡಿಸ್‌ಪ್ಲೇ, Qualcomm Snapdragon 439 ಪ್ರೊಸೆಸರ್, 8 ಮೆಗಾಪಿಕ್ಸೆಲ್ ಸೆಲ್ಫಿ, Android 9 ಒಎಸ್‌, 13 ಮತ್ತು 2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ, 3000 mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.

ಆರಂಭಿಕ ಕೊಡುಗೆಗಳೂ ಗ್ರಾಹಕರಿಗೆ ಲಭ್ಯವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌