ಆ್ಯಪ್ನಗರ

Nokia Power Earbuds: ನೋಕಿಯಾ ಆಕರ್ಷಕ ಇಯರ್‌ಬಡ್ಸ್

ಐಫಾ 2019ರಲ್ಲಿ ನೋಕಿಯಾ ಐದು ಹೊಸ ಫೋನ್‌ಗಳನ್ನು ಪರಿಚಯಿಸಿದೆ. ಆದರೆ ಅದರ ಜತೆಗೆ ಅಚ್ಚರಿಯೆಂಬಂತೆ ಹೊಸ ಮಾದರಿಯ ಪವರ್ ಇಯರ್‌ಬಡ್‌ಗಳನ್ನು ಪರಿಚಯಿಸಿದೆ.

Times Now 6 Sep 2019, 5:26 pm
ಎಚ್‌ಎಂಡಿ ಗ್ಲೋಬಲ್ ಈ ಬಾರಿಯ ಐಫಾ 2019 ಸಮ್ಮೇಳನದಲ್ಲಿ ನೋಕಿಯಾ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಆಕರ್ಷಕ ಪವರ್ ಇಯರ್‌ಬಡ್ಸ್‌ಗಳನ್ನು ಪರಿಚಯಿಸಿದೆ.
Vijaya Karnataka Web Nokia


ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಸಿದ್ಧಿ ಪಡೆದಿರುವ ಆ್ಯಪಲ್ ಏರ್‌ಪಾಡ್‌ ಮತ್ತು ಸ್ಯಾಮ್‌ಸಂಗ್ ಬಡ್ಸ್ ಇಯರ್‌ಫೋನ್‌ಗಳಿಗೆ ಸ್ಪರ್ಧೆ ನೀಡುವ ಉದ್ದೇಶದಿಂದ ನೋಕಿಯಾ ಪವರ್ ಇಯರ್‌ಬಡ್ಸ್‌ ಹೊರತಂದಿದೆ.

ನೋಕಿಯಾ ಪವರ್‌ಬಡ್ಸ್ 3,000mAh ಸಾಮರ್ಥ್ಯದ ಚಾರ್ಜಿಂಗ್ ಕೇಸ್ ಕೂಡ ಹೊಂದಿದ್ದು, 150 ಗಂಟೆಗಳ ಬ್ಯಾಟರಿ ಬಾಳಿಕೆ ಒಳಗೊಂಡಿದೆ. ಅಲ್ಲದೆ ಅಕ್ಟೋಬರ್‌ನಲ್ಲಿ ಮಾರುಕಟ್ಟೆಯಲ್ಲಿ ದೊರೆಯಲಿದ್ದು, ದೇಶದಲ್ಲಿ ಅಂದಾಜು 6,300 ರೂ. ಬೆಲೆ ಹೊಂದಿರುತ್ತದೆ ಎನ್ನಲಾಗಿದೆ.
6mm ಗ್ರಾಫೀನ್ ಡ್ರೈವರ್ಸ್‌ ಸಹಿತ ಹೊಸ ನೋಕಿಯಾ ಪವರ್‌ ಇಯರ್‌ಬಡ್ಸ್ ಬಿಡುಗಡೆಯಾಗಿದ್ದು, ಬ್ಲೂಟೂತ್ 5.0 ಸಂಪರ್ಕ ವ್ಯವಸ್ಥೆ ಹೊಂದಿದೆ.

Vivo Z1x: ದೇಶದ ಮಾರುಕಟ್ಟೆಗೆ ಬಿಡುಗಡೆ

ನೋಕಿಯಾ ಪವರ್‌ಬಡ್ಸ್ ವಿಶೇಷತೆ
ಗೂಗಲ್ ಅಸಿಸ್ಟೆಂಟ್ ಬೆಂಬಲ ಮತ್ತು ಟಚ್ ವ್ಯವಸ್ಥೆಯ ಜತೆಗೆ, ಮ್ಯೂಸಿಕ್ ಮತ್ತು ವಾಲ್ಯೂಮ್ ನಿಯಂತ್ರಿಸಬಹುದಾಗಿದೆ. ನೋಕಿಯಾ ಪವರ್ ಇಯರ್‌ಬಡ್ಸ್ 50 mAh ಬ್ಯಾಟರಿ ಹೊಂದಿದ್ದು, ಪೂರ್ತಿ ಚಾರ್ಜ್ ಮಾಡಿದರೆ 5 ಗಂಟೆ ಬಳಸಬಹುದಾಗಿದೆ.

ನೋಕಿಯಾ ಪ್ರಕಾರ, ಚಾರ್ಜಿಂಗ್ ಕೇಸ್ ಬಳಸಿ, 30 ಬಾರಿ ನೋಕಿಯಾ ಇಯರ್‌ಬಡ್ಸ್ ಚಾರ್ಜ್ ಮಾಡಬಹುದಾಗಿದೆ. ಯುಎಸ್‌ಬಿ ಸಿ ಕೇಬಲ್ ಮೂಲಕ ಚಾರ್ಜಿಂಗ್ ಕೇಸ್ ಚಾರ್ಜ್ ಮಾಡಬಹುದಾಗಿದೆ.

Zeb Symphony: ವಾಯ್ಸ್ ಅಸಿಸ್ಟೆನ್ಸ್ ಜತೆಗೆ ಅಗ್ಗದ ದರದ ಬ್ಲೂಟೂತ್ ಇಯರ್ ಫೋನ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌